ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೩

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ಮೂಡಿದ್ದರೂ, ವ್ಯಾಯಾಮ ಮಾಡುವ ಪ್ರಮಾಣ ಕಡಿಮೆರುವುದು ಕಂಡುಬರುತ್ತದೆ. ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುತ್ತವೆ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲಕಾಯಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ, ಉಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆರಿಸುತ್ತಾರೆ. ಈ ಅಂಕಣದಿಂದ ನಾವು ವ್ಯಾಯಾಮದ ಬಗ್ಗೆ ಜಾಗರೂಕತೆ ಯನ್ನು ಮೂಡಿಸಲಿದ್ದೇವೆ. ಇದರ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೂ ವ್ಯಾಯಾಮದ ಬಗ್ಗೆ ಸಂದೇಹ ನಿವಾರಣೆ ಮಾಡಲಿದ್ದೇವೆ. ದೈಹಿಕ ನೋವು ಹಲವು ಕಾರಣಗಳಿಂದ ಉಂಟಾಗಬಹುದು. ಅದರಲ್ಲಿ ಹೆಚ್ಚಾಗಿ, ‘ವ್ಯಾಯಾಮದ ಕೊರತೆ, ದೇಹದ ತಪ್ಪಾದ ಭಂಗಿ (ಪೋಸ್ಚರ್) ಅಥವಾ ದೀರ್ಘಕಾಲದ ಮಾನಸಿಕ ಒತ್ತಡ ಪ್ರಮುಖ ಕಾರಣಗಳಾಗಿವೆ. ಇವುಗಳಿಂದ ಉಂಟಾದ ಸಮಸ್ಯೆಯ ಸುಳಿಯಲ್ಲಿ ನಾವು ಸಿಲುಕಿಕೊಂಡರೆ, ಅದರಿಂದ ಹೊರಬರುವುದು ಕಷ್ಟವಾಗುತ್ತದೆ. ‘ವ್ಯಾಯಾಮದ ಕೊರತೆ ಮತ್ತು ನಿಷ್ಕ್ರಿಯ ಜೀವನಶೈಲಿಯಿಂದ ಸ್ನಾಯುಗಳ ಶಕ್ತಿ ಕಡಿಮೆಯಾಗಲು ಆರಂಭವಾಗುತ್ತದೆ. ಈ ದುರ್ಬಲ ಸ್ನಾಯುಗಳು ದೇಹಕ್ಕೆ ಬೇಕಾದ ಆಧಾರವನ್ನು ನೀಡಲು ಸಾಧ್ಯವಾಗುವುದಿಲ್ಲ, ಹಾಗೆಯೇ ದುರ್ಬಲ ಸ್ನಾಯುಗಳ ನಿರಂತರ ಬಳಕೆಯಿಂದ ಅವುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ವ್ಯಾಯಾಮದ ಕೊರತೆಯಿಂದ ಸ್ನಾಯುಗಳ ಮೃದುತ್ವವೂ ಕಡಿಮೆಯಾಗುತ್ತದೆ. ಇದರಿಂದ ದೇಹದ ಸುಲಭ ಚಲನೆಗಳಿಗೂ ತೊಂದರೆಗಳು ಬರಲು ಆರಂಭವಾಗುತ್ತವೆ. ದುರ್ಬಲ ಮತ್ತು ಬಿಗಿಯಾದ ಸ್ನಾಯುಗಳಿಂದ ದೇಹದ ಭಂಗಿ ಕೆಡಲು ಆರಂಭವಾಗುತ್ತದೆ. ತಪ್ಪಾದ ಭಂಗಿಯಿಂದ ಸ್ನಾಯುಗಳ ಮೇಲೆ ಹೆಚ್ಚುವರಿ ಒತ್ತಡ ಹೆಚ್ಚುತ್ತದೆ ಮತ್ತು ಹೆಚ್ಚುವರಿ ಒತ್ತಡದಿಂದ ಸ್ನಾಯುಗಳು ಹಾಗೂ ಕೀಲುಗಳ ಸವೆತ ಆರಂಭವಾಗುತ್ತದೆ. ಹೀಗೆ ಒಟ್ಟಾರೆಯಾಗಿ ಗಾಯಗಳು ಹೆಚ್ಚಾಗಿ ನೋವು ಉಂಟಾಗಲು ಈ ಎಲ್ಲಾ ಅಂಶಗಳು ಕಾರಣವಾಗುತ್ತವೆ. ನಿಯಮಿತ ವ್ಯಾಯಾಮ ಮಾಡಿದರೆ ಈ ಎಲ್ಲಾ ಸಮಸ್ಯೆಗಳನ್ನು ತಪ್ಪಿಸಬಹುದು. ವ್ಯಾಯಾಮದಿಂದ ಹೆಚ್ಚುತ್ತದೆ, ಸ್ನಾಯುಗಳಮೃದುತ್ವ ಶಕ್ತಿ ಸುಧಾರಿಸುತ್ತದೆ ಮತ್ತು ದೇಹದ ಸ್ವಾಭಾವಿಕ ಭಂಗಿ ಉಳಿಯುತ್ತದೆ. ಇದರಿಂದ ಪಡೆಯಲು ವ್ಯಾಯಾಮ ನೋವಿನಿಂದ ಮುಕ್ತಿ ಸ್ವಾಭಾವಿಕ ನೋವು ಸಹಾಯವಾಗುತ್ತದೆ. ಮಾಡುವುದರಿಂದಉತ್ಪತ್ತಿಯಾಗುತ್ತವೆ ನಿವಾರಕಗಳು ಮತ್ತು ರಕ್ತಪರಿಚಲನೆ ಸುಧಾರಿಸುತ್ತದೆ. ಈ ಎಲ್ಲದರ ಒಟ್ಟು ಪರಿಣಾಮವಾಗಿ ನೋವು ಬೇಗ ಕಡಿಮೆಯಾಗುತ್ತದೆ. ಮತ್ತೆಮತ್ತೆ ಉಂಟಾಗುವ ನೋವಿಗೆ ಕಾರಣ ನಮಗೆ ತಿಳಿಯದಿದ್ದಾಗ, ನಾವು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ತಾತ್ಕಾಲಿಕವಾಗಿ ನೋವು ಕಡಿಮೆ ಮಾಡಿ ಕೊಳ್ಳುವುದಕ್ಕಿಂತ ‘ಸರಿಯಾದ ಸಮಯದಲ್ಲಿ ವೈದ್ಯಕೀಯ ಸಲಹೆ ಪಡೆಯುವುದು ಮತ್ತು ನೋವಿನ ಮೂಲ ಕಾರಣವನ್ನು ತಿಳಿದುಕೊಂಡು ಅದನ್ನು ನಿವಾರಿಸಲು ಪ್ರಯತ್ನಿಸುವುದು ಹೆಚ್ಚು ಪ್ರಯೋಜನಕಾರಿ.
– ಸೌ. ಅಕ್ಷತಾ ರೂಪೇಶ ರೆಡಕರ, ಭೌತಿಕಚಿಕಿತ್ಸಾ ತಜ್ಞೆ (ಫಿಸಿಯೋಥೆರಪಿಸ್ಟ್), ಫೋಂಡಾ, ಗೋವಾ. (೩೦.೯.೨೦೨೪)
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !