|
ಮಾಸ್ಕೊ (ರಷ್ಯಾ) – ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು, ರಷ್ಯಾ ಮತ್ತು ಚೀನಾ ನಡುವಿನ ಸಂಬಂಧಗಳು ಅಭೂತಪೂರ್ವ ಉನ್ನತ ಮಟ್ಟದಲ್ಲಿವೆ ಎಂದು ಹೇಳಿದರು. ರಷ್ಯಾದಿಂದ ಚೀನಾಕ್ಕೆ ‘ಪವರ್ ಆಫ್ ಸೈಬೀರಿಯಾ-2’ ಎಂಬ ಪ್ರಮುಖ ಗ್ಯಾಸ್ ಪೈಪ್‌ಲೈನ್ ನಿರ್ಮಿಸಲು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದವನ್ನು ಪುಟಿನ್ ಅವರ ದೊಡ್ಡ ವಿಜಯವೆಂದು ಪರಿಗಣಿಸಲಾಗಿದೆ. ಇದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಉಕ್ರೇನ್ ನೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ಯುರೋಪ್ ಮತ್ತು ಅಮೆರಿಕ ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಿವೆ. ಯುರೋಪಿಯನ್ ರಾಷ್ಟ್ರಗಳು ರಷ್ಯಾದಿಂದ ತೈಲವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿವೆ. ಈ ಹಿನ್ನೆಲೆಯಲ್ಲಿ, ಚೀನಾದ ಬೃಹತ್ ಆರ್ಥಿಕತೆಯೊಂದಿಗೆ ಮಾಡಿಕೊಂಡ ಈ ಒಪ್ಪಂದವು ರಷ್ಯಾಕ್ಕೆ ಅತ್ಯಂತ ಲಾಭದಾಯಕವಾಗಿದೆ. ಆದ್ದರಿಂದ, ಈ ಒಪ್ಪಂದವು ಟ್ರಂಪ್‌ಗೆ ದೊಡ್ಡ ಹೊಡೆತವಾಗಿದೆ ಎಂದು ಅನೇಕ ವಿದೇಶಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಮಾಧ್ಯಮಗಳ ಪ್ರಕಾರ, ಪುಟಿನ್ ಅವರ ಇತ್ತೀಚಿನ ಚೀನಾ ಭೇಟಿಯ ಸಮಯದಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಇಬ್ಬರೂ ಹಲವಾರು ಗಂಟೆಗಳ ಕಾಲ ಒಟ್ಟಿಗೆ ಕಳೆದರು. ಪುಟಿನ್ ಅವರು ಜಿನ್‌ಪಿಂಗ್ ಅವರ ಅಧಿಕೃತ ನಿವಾಸದಲ್ಲಿ ಚಹಾ ಕುಡಿಯುತ್ತಿರುವುದು ಕೂಡ ಕಂಡುಬಂದಿದೆ.
🌍 Russia–China Seal Historic Gas Deal 🌍
🇷🇺➡️🇨🇳 Russia to supply 50 bcm of gas annually to China for the next 30 years – the world’s costliest gas agreement!
🗣 Putin: “Relations at an unprecedented level.”
Meanwhile, Trump imposes 50% import duty on India but stays cautious… pic.twitter.com/trb5TlKzco
— Sanatan Prabhat (@SanatanPrabhat) September 3, 2025
30 ವರ್ಷಗಳವರೆಗೆ ಇರಲಿದೆ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ದುಬಾರಿ ಗ್ಯಾಸ್ ಒಪ್ಪಂದ!
ಗ್ಯಾಜ್‌ಪ್ರೊಮ್’ ಈ ರಷ್ಯಾದ ನೈಸರ್ಗಿಕ ಅನಿಲದ ಸರಕಾರಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲೆಕ್ಸಿ ಮಿಲ್ಲರ್ ಅವರು ಮಾತನಾಡುತ್ತಾ, ಈ ಒಪ್ಪಂದದಲ್ಲಿ 30 ವರ್ಷಗಳವರೆಗೆ ಅನಿಲ ಪೂರೈಕೆಯ ನಿಬಂಧನೆ ಇದ್ದು ಅದರ ಮೌಲ್ಯ ಅದಕ್ಕಿಂತ ಕಡಿಮೆ ಇರಲಿದೆ, ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ದುಬಾರಿ ಗ್ಯಾಸ್ ಯೋಜನೆಯಾಗಿರುತ್ತದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದ ಮೇಲೆ ಶೇಕಡಾ 50ರಷ್ಟು ಆಮದು ಸುಂಕ ವಿಧಿಸುವ ಅಮೆರಿಕ, ಚೀನಾದ ವಿಷಯದಲ್ಲಿ ಮಾತ್ರ ಎಚ್ಚರಿಕೆಯ ನಿಲುವು ತಾಳಿದೆ. ಇದಕ್ಕೆ ಕಾರಣ, ಚೀನಾದ ಆರ್ಥಿಕತೆ ಭಾರತಕ್ಕಿಂತ 5 ಪಟ್ಟು ದೊಡ್ಡದಾಗಿದೆ ಮತ್ತು ಅಮೆರಿಕ ಚೀನಾದಿಂದ ದೊಡ್ಡ ಪ್ರಮಾಣದಲ್ಲಿ ಸರಕುಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದ್ದರಿಂದ, ಚೀನಾದ ರಷ್ಯಾ ಜೊತೆಗಿನ ನಿಕಟತೆಯ ಬಗ್ಗೆ ಸ್ವಾರ್ಥದ ಅಮೆರಿಕ ಮೌನವಾಗಿದೆ! |

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara