|

ಬರೇಲಿ (ಉತ್ತರ ಪ್ರದೇಶ) – ಬರೇಲಿ ಮದರಸಾದ ನಿರ್ದೇಶಕ ಅಬ್ದುಲ್ ಮಜೀದ ನೇತೃತ್ವದಲ್ಲಿ ದೊಡ್ಡ ಮತಾಂತರ ಜಾಲವೊಂದು ಬಯಲಾಗಿದೆ. ಈ ಗುಂಪು ಮದರಸಾದಿಂದ ಹಿಂದೂ ಯುವಕರನ್ನು ಮತಾಂತರ ಮಾಡುತ್ತಿತ್ತು. ಈ ಗುಂಪು ಹಿಂದೂ ಯುವಕರನ್ನು ಸಿಲುಕಿಸಲು 20ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳನ್ನು ರಚಿಸಿತ್ತು. ಇದರಲ್ಲಿ ಯುವತಿಯರ ಅಶ್ಲೀಲ ಚಿತ್ರಗಳು ಮತ್ತು ವೀಡಿಯೋಗಳನ್ನು ಕಳುಹಿಸಲಾಗುತ್ತಿತ್ತು. ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಹಿಂದೂ ಯುವಕರಿಗೆ ಮದುವೆ, ಸ್ವರ್ಗ ಮತ್ತು ‘ಮೂರು ಹೆಂಡತಿಯರ’ ಆಮಿಷ ತೋರಿಸಲಾಗುತ್ತಿತ್ತು. ಈ ಆಮಿಷಗಳಿಗೆ ಬಲಿಯಾದ ಹಿಂದೂ ಯುವಕರನ್ನು ಮದರಸಾಗಳಿಗೆ ಕರೆಸಿ ಅವರ ಬ್ರೈನ್‌ವಾಶ್ ಮಾಡಲಾಗುತ್ತಿತ್ತು. ಇಲ್ಲಿಯವರೆಗೆ ಈ ಜಾಲಕ್ಕೆ ಅನೇಕ ಹಿಂದೂ ಯುವಕರು ಬಲಿಯಾಗಿದ್ದಾರೆ. ಈ ಅಕ್ರಮ ಮದರಸಾ ಮೇಲೆ ಬುಲ್ಡೋಜರ್ ನಡೆಸಲು ಆದೇಶ ನೀಡಲಾಗಿದೆ.
1. ಮದರಸಾದಲ್ಲಿ ಹಿಂದೂ ಯುವಕರಿಗೆ, ಅವರು ಇಸ್ಲಾಂಅನ್ನು ಸ್ವೀಕರಿಸಿದರೆ ಅವರ ಎಲ್ಲಾ ಸಮಸ್ಯೆಗಳು ಕೊನೆಗೊಳ್ಳುತ್ತವೆ ಎಂದು ಹೇಳಲಾಗುತ್ತಿತ್ತು. ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರೆ, ಅವರಿಗೆ ಸುಲಭವಾಗಿ ಕೆಲಸ, ಮನೆ, ಹಣ ಮತ್ತು ಸುಂದರ ಹೆಂಡತಿಯರು ಸಿಗುತ್ತಾರೆ ಎಂದು ಹೇಳಲಾಗುತ್ತಿತ್ತು. ಕೆಲವು ಹಿಂದೂ ಯುವಕರಿಗೆ ಉರ್ದು ಕಲಿಸಲಾಗುತ್ತಿತ್ತು, ಮತ್ತು ಅವರಿಗೆ ಕುರಾನ್ ಹಾಗೂ ಹದೀಸ್ ಓದಲು ಕೊಡಲಾಗುತ್ತಿತ್ತು.
2. ಈ ಜಾಲವು ಒಂಟಿಯಾಗಿ ವಾಸಿಸುವ, ಆರ್ಥಿಕವಾಗಿ ದುರ್ಬಲ ಅಥವಾ ವಿಚ್ಛೇದಿತ ಹಿಂದೂ ಯುವಕರನ್ನು ಗುರಿಯಾಗಿಸುತ್ತಿತ್ತು. ಅಬ್ದುಲ್ ಮಜೀದ್ ಈ ಜಾಲವನ್ನು ನಡೆಸುತ್ತಿದ್ದನು. ಸಲ್ಮಾನ್, ಆರಿಫ್ ಮತ್ತು ಫಹೀಮ್ ಮುಂತಾದ ಮುಸ್ಲಿಮರು ಅವನಿಗೆ ಸಹಾಯ ಮಾಡುತ್ತಿದ್ದರು.
3. ಕೆಲವು ದಿನಗಳ ಹಿಂದೆ, ಪೊಲೀಸರು ಪ್ರೊಫೆಸರ್ ಪ್ರಭಾತ ಉಪಾಧ್ಯಾಯರನ್ನು ಈ ಮದರಸಾದಿಂದ ರಕ್ಷಿಸಿದ್ದರು. ಅವರು ಅಂಧರಾಗಿದ್ದು, ಬಲವಂತವಾಗಿ ಮತಾಂತರಗೊಂಡಿದ್ದರು. ಪ್ರಭಾತ ಅವರ ಹೆಸರನ್ನು ‘ಹಮೀದ್’ ಎಂದು ಬದಲಾಯಿಸಲಾಗಿತ್ತು ಮತ್ತು ಅವರ ಸುನ್ನತಿ ಮಾಡಲಾಗಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಅಬ್ದುಲ್ ಮಜೀದ್ ಸೇರಿದಂತೆ 4 ಆರೋಪಿಗಳನ್ನು ಬಂಧಿಸಲಾಯಿತು.
4. ಆರೋಪಿಗಳಿಂದ ಪೊಲೀಸರು ಜಾಕಿರ್ ನಾಯಕ್ ಅವರ ಪುಸ್ತಕಗಳು ಮತ್ತು 21ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಲವು ಬರೇಲಿಗೆ ಮಾತ್ರ ಸೀಮಿತವಾಗಿಲ್ಲ, ಇದು ದೇಶದ 13 ರಾಜ್ಯಗಳಲ್ಲಿ ಹರಡಿದೆ ಮತ್ತು 200ಕ್ಕೂ ಹೆಚ್ಚು ಮೌಲ್ವಿಗಳು ಇದರಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಂಪಾದಕೀಯ ನಿಲುವುಯೋಗಿ ಆದಿತ್ಯನಾಥ ಅವರಂತಹ ಹಿಂದುತ್ವನಿಷ್ಠ ಮುಖ್ಯಮಂತ್ರಿಗಳು ಇರುವ ಉತ್ತರ ಪ್ರದೇಶದಲ್ಲಿ, ಮತಾಂಧ ಮುಸ್ಲಿಮರು ಹೇಗೆ ಅಕ್ರಮ ಮದರಸಾಗಳನ್ನು ನಡೆಸುವ ಮತ್ತು ವಿವಿಧ ತಂತ್ರಗಳನ್ನು ಬಳಸಿ ಹಿಂದೂಗಳನ್ನು ಮತಾಂತರ ಮಾಡುವ ಧೈರ್ಯ ಮಾಡುತ್ತಾರೆ? ಹಿಂದೂಗಳಿಗೆ ಇದು ಅಪೇಕ್ಷಿತವಿಲ್ಲ. ಇದನ್ನು ತಡೆಯಲು ಸರಕಾರ ತಕ್ಷಣವೇ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!