ದೇವಸ್ಥಾನದ ಟ್ರಸ್ಟ್‌ಗೂ ಈ ಭೂಮಿಯ ಬಗ್ಗೆ ಮಾಹಿತಿ ಇಲ್ಲ

ಶಿಕ್ರಾಪುರ (ಪುಣೆ ಜಿಲ್ಲೆ) – ಅಷ್ಟವಿನಾಯಕರಲ್ಲಿ ಒಬ್ಬರಾದ ರಾಂಜಣಗಾಂವ್ ಮಹಾಗಣಪತಿ ದೇವಸ್ಥಾನದ ಒಡೆತನದಲ್ಲಿರುವ ಢೋಕ್ ಸಾಂಗ್ವಿ (ಶಿರೂರ್ ತಾಲೂಕು) ಯಲ್ಲಿನ 65 ಎಕರೆ ಭೂಮಿ 7/12 ದಾಖಲೆಯಿಂದ ನಾಪತ್ತೆಯಾಗಿದೆ. ಈ ಕುರಿತು ನಿವೃತ್ತ ಸೇನಾಧಿಕಾರಿ ಶಿವಾಜಿ ಅಸವಲೆ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
1. ದೇವಸ್ಥಾನಕ್ಕೆ ಸೇರಿದ ಢೋಕ್ ಸಾಂಗ್ವಿಯ 65 ಎಕರೆ ಭೂಮಿ ನಾಪತ್ತೆಯಾಗಿದೆ ಎಂದು ಶಿರೂರ್‌ನ ನಿವೃತ್ತ ಸೇನಾಧಿಕಾರಿ ಶಿವಾಜಿ ಅಸವಲೆ ಅವರು ಮೇ 2024 ರಲ್ಲಿ ಶಿರೂರ್ ತಹಶೀಲ್ ಕಚೇರಿಗೆ ದೂರು ನೀಡಿದ್ದರು.
2. ಒಂದು ವರ್ಷದಿಂದ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಕೊನೆಗೆ ರಾಜ್ಯಪಾಲರ ಕಚೇರಿಯು ಶಿರೂರ್ ತಹಶೀಲ್ ಕಚೇರಿಗೆ ಸೂಚನೆ ನೀಡಿದ ನಂತರವೇ ಕ್ರಮ ಪ್ರಾರಂಭವಾಯಿತು. (ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳಲು ಏಕೆ ಇಷ್ಟು ವಿಳಂಬವಾಯಿತು? ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದು ಅವಶ್ಯಕ! – ಸಂಪಾದಕರು)
3. ಎಲ್ಲಾ ಆಸ್ತಿಗಳನ್ನು ಎಲ್.ಆರ್. ನಂ. 16 ವಹಿ (ವತನ್ ರಿಜಿಸ್ಟರ್) ಪ್ರಕಾರ ಇನಾಮ್ ವರ್ಗ 3 ರ ಅಡಿಯಲ್ಲಿ ರಾಂಜಣಗಾಂವ್ ದೇವಸ್ಥಾನದ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆದರೆ, 1927 ರಲ್ಲಿ ಕಡೈಪತ್ರಕದ (ಭೂಮಿಯ ಹಕ್ಕು ದಾಖಲೆ) ಸಮಯದಲ್ಲಿ ಮತ್ತು ನಂತರ 7/12 ದಾಖಲೆಗಳ ಸಮಯದಲ್ಲಿ ದೇವಸ್ಥಾನದ ‘ಇನಾಮ್ ವರ್ಗ 3’ ಬದಲಿಗೆ ಬೇರೆ ಹೆಸರುಗಳ ಮೇಲೆ 7/12 ದಾಖಲೆಗಳನ್ನು ಸಿದ್ಧಪಡಿಸಿ, ಈ ಸಂಪೂರ್ಣ ಭೂಮಿಯನ್ನು ಈಗ ‘ಇನಾಮ್ ವರ್ಗ 1’ ಎಂದು ನೋಂದಾಯಿಸಲಾಗಿದೆ.
4. ಸಂಪೂರ್ಣ 65 ಎಕರೆ ಭೂಮಿ ರಾಂಜಣಗಾಂವ್ ದೇವಸ್ಥಾನದ ಒಡೆತನದಿಂದ ಕಣ್ಮರೆಯಾಗಿದ್ದು, ಅದನ್ನು ತಕ್ಷಣವೇ ದೇವಸ್ಥಾನಕ್ಕೆ ಮರಳಿ ಪಡೆಯಲು ಅಸವಲೆ ಪ್ರಯತ್ನಿಸುತ್ತಿದ್ದಾರೆ ಎಂದು ಅವರ ವಕೀಲ ಹರ್ಷಲ್ ಗೋಸಾವಿ ತಿಳಿಸಿದ್ದಾರೆ.
ಕಾನೂನು ಕ್ರಮ ಕೈಗೊಳ್ಳುತ್ತೇವೆ! – ಸ್ವಾತಿ ಪಾಚುಂದ್ಕರ್, ಅಧ್ಯಕ್ಷರು, ‘ರಾಂಜಣಗಾಂವ್ ದೇವಸ್ಥಾನ ಟ್ರಸ್ಟ್’

‘ರಾಂಜಣಗಾಂವ್ ದೇವಸ್ಥಾನ ಟ್ರಸ್ಟ್’ ಅಧ್ಯಕ್ಷರು, ದೇವಸ್ಥಾನದ 65 ಎಕರೆ ಭೂಮಿ ನಾಪತ್ತೆಯಾಗಿದ್ದರೆ ಅಥವಾ ನಮ್ಮ ಬಳಿ ಇಲ್ಲದಿದ್ದರೆ, ಅದರ ಬಗ್ಗೆ ನಾವು ಮಾಹಿತಿ ಪಡೆಯುತ್ತೇವೆ. ನಂತರ ದತ್ತಿ ಉಪ ಆಯುಕ್ತರಿಗೆ ಈ ವಿಷಯವನ್ನು ಸಲ್ಲಿಸಿ, ಅವರ ಮಾರ್ಗದರ್ಶನದ ಮೇರೆಗೆ ಭೂಮಿಯನ್ನು ದೇವಸ್ಥಾನಕ್ಕೆ ಮರಳಿ ಪಡೆಯಲು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಪ್ರಕರಣವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ! – ತಹಶೀಲ್ದಾರ್
ಶಿರೂರ್ ತಹಶೀಲ್ದಾರ್ ಬಾಳಾಸಾಹೇಬ್ ಮ್ಹಾಸ್ಕೆ ಮಾತನಾಡಿ, ಈ ವಿಷಯದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ, ಮಂಡಲಾಧಿಕಾರಿಯನ್ನು ನೇಮಿಸಿ ಹಳೆಯ ದಾಖಲೆಗಳನ್ನು ಪರಿಶೀಲಿಸಲಾಗಿದೆ. ದೂರುದಾರರು ಹೇಳಿದಂತೆ ವತನ್ ರಿಜಿಸ್ಟರ್‌ನಲ್ಲಿ ದಾಖಲೆಗಳಿವೆ. ಆದರೆ, ಕಡೈಪತ್ರಕ ಮತ್ತು 7/12 ದಾಖಲೆಗಳಲ್ಲಿ ಹೇಗೆ ಬೇರೆ ನಮೂದುಗಳು ಬಂದವು ಮತ್ತು ಪ್ರತ್ಯೇಕ 7/12 ದಾಖಲೆಗಳು ಹೇಗೆ ಸೃಷ್ಟಿಯಾದವು ಎಂಬುದು ಲಭ್ಯವಿಲ್ಲ. ಈ ಸಂಪೂರ್ಣ ಪ್ರಕರಣವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!