ಮಾತೃಭೂಮಿಯ ಮೇಲಿನ ಪ್ರೀತಿಯನ್ನು ಪರೀಕ್ಷಿಸಲು, ದೇವಸ್ಥಾನಗಳಲ್ಲಿ ಮತ್ತು ಮಸೀದಿಗಳಲ್ಲಿ ರಾಷ್ಟ್ರಗೀತೆಯನ್ನು ಹಾಕಬೇಕು! : Pandit Dhirendra Krishna Shastri

  • ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರ ಹೇಳಿಕೆ

  • ದೆಹಲಿಯಿಂದ ವೃಂದಾವನದವರೆಗೆ ‘ಸನಾತನ ಹಿಂದೂ ಏಕತಾ’ ಪಾದಯಾತ್ರೆ ನಡೆಸುವರು !

  • ವೃಂದಾವನದಲ್ಲಿ 200ಕ್ಕೂ ಹೆಚ್ಚು ಸಂತರು ಸಭೆ ನೆರೆವೇರಿತು !

ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ

ಮಥುರಾ – ಮಾತೃಭೂಮಿಯ ಬಗ್ಗೆ ಯಾರಿಗೆ ಪ್ರೀತಿ ಇದೆ ಮತ್ತು ಯಾರಿಗೆ ಇಲ್ಲ ಎಂದು ಎಲ್ಲ ಭಾರತೀಯರಿಗೆ ತಿಳಿಯಲು, ದೇವಸ್ಥಾನಗಳು ಮತ್ತು ಮಸೀದಿಗಳಲ್ಲಿ ರಾಷ್ಟ್ರಗೀತೆಯನ್ನು ಹಾಕಬೇಕು ಎಂದು ಬಾಗೇಶ್ವರ ಧಾಮ್ ಪೀಠಾಧೀಶ್ವರ ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಹೇಳಿದ್ದಾರೆ.

ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ನವೆಂಬರ್ 7 ರಿಂದ ನವೆಂಬರ್ 16 ರವರೆಗೆ ದೆಹಲಿಯಿಂದ ವೃಂದಾವನಕ್ಕೆ 170 ಕಿ.ಮೀ. ಉದ್ದದ ‘ಸನಾತನ ಹಿಂದೂ ಏಕತಾ’ ಪಾದಯಾತ್ರೆ ನಡೆಸಲಿದ್ದಾರೆ. ಈ ಪಾದಯಾತ್ರೆಯ ಯೋಜನೆಗಾಗಿ ವೃಂದಾವನದ ಕೃಷ್ಣ ಕೃಪಾ ಧಾಮ್ ಆಶ್ರಮದಲ್ಲಿ ನಡೆದ 200ಕ್ಕೂ ಹೆಚ್ಚು ಸಂತರು ಸಭೆ ಸೇರಿದ್ದರು. ಈ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಭೆಯಲ್ಲಿ ಕಥಾ ವಾಚಕ ಅನಿರುದ್ಧಾಚಾರ್ಯ ಮಹಾರಾಜ್ ಮತ್ತು ಭಾಜಪ ಸಂಸದ ಮನೋಜ್ ತಿವಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಈ ಸಭೆಯಲ್ಲಿ ಪಾದಯಾತ್ರೆಯ ರೂಪುರೇಷೆ, ಶಿಸ್ತು ಮತ್ತು ಧಾರ್ಮಿಕ ಶಿಷ್ಟಾಚಾರಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಉಪಸ್ಥಿತರಿರುವ ಸಂತರು

ಪಂಡಿತ್ ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಮಾತು ಮುಂದುವರೆಸಿ, “ಇದು ಸನಾತನಿಗಳನ್ನು ಒಗ್ಗೂಡಿಸುವ ನಮ್ಮ ಪ್ರಯತ್ನವಾಗಿದೆ. ಮಥುರಾದಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಲು ಈ ಯಾತ್ರೆ ನಡೆಯುತ್ತಿದೆ. ಇದು ಕೇವಲ ಒಂದು ನೋಟ ಮಾತ್ರ, ನಿಜವಾದ ಚಿತ್ರ ಇನ್ನೂ ಬಾಕಿ ಇದೆ. ಈ ಯಾತ್ರೆಯು ಎಲ್ಲಾ ಸನಾತನ ಹಿಂದೂಗಳನ್ನು ಒಗ್ಗೂಡಿಸಲು ಉದ್ದೇಶಿಸಿದೆ. ಧರ್ಮ ವಿರೋಧಿ ಶಕ್ತಿಗಳು ನಮ್ಮನ್ನು ಹಿಂದಕ್ಕೆ ತಳ್ಳಲು ಪ್ರಯತ್ನಿಸುತ್ತಿವೆ; ಆದರೆ ಎಲ್ಲಾ ಸಂತರು ಮತ್ತು ಮಹಾಪುರುಷರು ನಮ್ಮೊಂದಿಗಿದ್ದಾರೆ. ಬ್ರಜ್ ಪ್ರದೇಶದಲ್ಲಿ ಮಾಂಸ ಮತ್ತು ಮದ್ಯ ಮಾರಾಟ ನಿಷೇಧಿಸುವುದು, ಯಮುನಾ ನದಿಯನ್ನು ಶುದ್ಧೀಕರಿಸುವುದು ಮತ್ತು ಧಾರ್ಮಿಕ ಸ್ಥಳಗಳಲ್ಲಿ ರಾಷ್ಟ್ರಗೀತೆ ನುಡಿಸುವುದು ನಮ್ಮ ನೀತಿಗಳಾಗಿವೆ. ಎಲ್ಲಾ ಸನಾತನಿಗಳು ಒಗ್ಗೂಡುವವರೆಗೂ ನಮ್ಮ ಪ್ರಯತ್ನಗಳು ಮುಂದುವರಿಯುತ್ತವೆ” ಎಂದು ಹೇಳಿದರು.