ಯೆಮನ್ ನಲ್ಲಿಯೂ ಇಸ್ರೇಲ್ ನಿಂದ ಭಾರಿ ದಾಳಿಗಳು

ತೆಲ್ ಅವಿವ್ – ಇಸ್ರೇಲ್-ಹಮಾಸ್ ಯುದ್ಧದಲ್ಲಿ, ಇಸ್ರೇಲ್ ಈಗ ಹಮಾಸ್ ವಿರುದ್ಧ ಭಾರಿ ಕ್ರಮ ಕೈಗೊಂಡಿದ್ದು, ಹಮಾಸ್‌ಗೆ ದೊಡ್ಡ ಆಘಾತ ನೀಡಿದೆ. ಇಸ್ರೇಲ್ ನ ಈ ದಿಟ್ಟ ಕ್ರಮದಿಂದಾಗಿ ಹಮಾಸ್ ನ ಸೇನಾ ವಿಭಾಗದ ಪ್ರಚಾರ ಮುಖ್ಯಸ್ಥ ಅಬು ಒಬೆದಾ ಹತನಾಗಿದ್ದಾನೆ. ಒಬೆದಾ ಸದ್ಯ ಬದುಕುಳಿದ ಹಮಾಸ್ ನ ಹಿರಿಯ ನಾಯಕರಲ್ಲೊಬ್ಬನಾಗಿದ್ದನು. ಅವನು ಇಸ್ರೇಲಿ ಸೈನಿಕರು ಮತ್ತು ನಾಗರಿಕರ ಅಪಹರಣದ ವೀಡಿಯೊಗಳನ್ನು ಪ್ರಸಾರ ಮಾಡುವುದು, ಅರಬ್ ಜನರ ನಡುವೆ ಪ್ರಚೋದನಕಾರಿ ಸಂದೇಶಗಳನ್ನು ಹರಡುವುದು ಮುಂತಾದ ಕೃತ್ಯಗಳಲ್ಲಿ ತೊಡಗಿದ್ದನು. ಅಬು ಒಬೆದಾ ಭಯೋತ್ಪಾದಕರ ಪ್ರಮುಖ ವ್ಯಕ್ತಿಯಾಗಿದ್ದನು, ಈಗ ಅವನ ಅಂತ್ಯವಾಗಿದೆ ಎಂದು ಇಸ್ರೇಲಿ ಸೇನೆ ತಿಳಿಸಿದೆ.
ಅಕ್ಟೋಬರ್ 2023 ರಿಂದ ನಡೆಯುತ್ತಿರುವ ಗಾಜಾ ಯುದ್ಧದಲ್ಲಿ ಇದುವರೆಗೆ 62,800ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 1ಲಕ್ಷ 50 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಹಮಾಸ್ ಸೇರಿದಂತೆ ಇರಾನ್ ಬೆಂಬಲಿತ ಗುಂಪುಗಳ ವಿರುದ್ಧವೂ ಗುರಿಯಿಟ್ಟು ಇಸ್ರೇಲ್ ಕಾರ್ಯಾಚರಣೆಗಳನ್ನು ಆರಂಭಿಸಿದೆ. ಅಬು ಒಬೆದಾ ಮತ್ತು ಹೂಥಿ ನಾಯಕತ್ವದ ಮೇಲಿನ ಇಸ್ರೇಲ್ ದಾಳಿ ನಡೆಸುತ್ತಿದೆ.
ಹೂಥಿಗಳ ಮೇಲೆ ಇಸ್ರೇಲ್ ನಿಂದ ಅತಿದೊಡ್ಡ ದಾಳಿ, ಯೆಮನ್ ನಲ್ಲಿ ಪ್ರಧಾನಿ ಸೇರಿದಂತೆ ಅನೇಕ ಮಂತ್ರಿಗಳ ಹತ್ಯೆಈ ಕಾರ್ಯಾಚರಣೆಯ ಕೆಲವು ದಿನಗಳ ಮೊದಲು, ಇಸ್ರೇಲ್ ಯೆಮನ್ ನಲ್ಲಿ ಇರಾನ್ ಬೆಂಬಲಿತ ‘ಹೂಥಿ’ ಬಂಡುಕೋರರ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿತ್ತು. ರಾಜಧಾನಿ ಸನಾದಲ್ಲಿ ಆಗಸ್ಟ್ 28ರಂದು ಇಸ್ರೇಲ್ ನಡೆಸಿದ ದಿಟ್ಟ ಕಾರ್ಯಾಚರಣೆಯಲ್ಲಿ, ಹೂಥಿ ಪ್ರಧಾನಿ ಅಹ್ಮದ್ ಅಲ್ ರಹಾವಿ, 2 ಉಪಪ್ರಧಾನಿಗಳು, ವಿದೇಶಾಂಗ ಸಚಿವರು ಮತ್ತು ಇತರ 10 ಮಂತ್ರಿಗಳು ಹತರಾದರು. ಇದು ಹೂಥಿಗಳ ಮೇಲೆ ನಡೆದ ಇದುವರೆಗಿನ ಅತಿದೊಡ್ಡ ದಾಳಿ ಎಂದು ಪರಿಗಣಿಸಲಾಗಿದೆ. ಈ ದಾಳಿಯ ನಂತರ, ಹೂಥಿಗಳು ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಇಸ್ರೇಲ್ ಸರಕಾರವು ಪ್ರಧಾನಿ ನೆತನ್ಯಾಹು ಮತ್ತು ಇತರ ಮಂತ್ರಿಗಳ ಭದ್ರತೆಯನ್ನು ಹೆಚ್ಚಿಸಿದೆ. ಮತ್ತೊಂದೆಡೆ, ಹೂಥಿಗಳು ಇಸ್ರೇಲ್ ಗೆ ಸಹಾಯ ಮಾಡಿದ ಅನುಮಾನದ ಮೇಲೆ ಅನೇಕ ಯೆಮನಿ ನಾಗರಿಕರನ್ನು ಬಂಧಿಸಿದೆ. ಹೂಥಿಗಳು ವಿಶ್ವಸಂಸ್ಥೆಯ ಕಚೇರಿಗಳ ಮೇಲೂ ದಾಳಿ ನಡೆಸಿ 11 ಸಿಬ್ಬಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸನಾದಲ್ಲಿನ ದಾಳಿ ಕೇವಲ ಆರಂಭವಾಗಿದೆ ಮತ್ತು ಭಯೋತ್ಪಾದಕ ಜಾಲ ನಾಶವಾಗುವವರೆಗೆ ನಮ್ಮ ದಾಳಿಗಳು ಮುಂದುವರಿಯುತ್ತವೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ. |
ಸಂಪಾದಕೀಯ ನಿಲುವುಇಸ್ರೇಲ್ ಯಾವ ರೀತಿ ತನ್ನ ಶತ್ರುಗಳನ್ನು ಹಾಗೂ ಶತ್ರುಗಳಿಗೆ ಸಹಾಯ ಮಾಡುವವರನ್ನು ಹುಡುಕಿ ಸಾಯಿಸುವಂತೆ, ಭಾರತವೂ ಕೂಡ ಪಾಕಿಸ್ತಾನದ ವಿರುದ್ಧ ಇದೇ ರೀತಿಯ ದಿಟ್ಟ ಕ್ರಮ ಕೈಗೊಳ್ಳುವುದು ಅಪೇಕ್ಷಿತವಿದೆ, ಆಗ ಮಾತ್ರ ಪಾಕಿಸ್ತಾನವು ಸರಿ ದಾರಿಗೆ ಬರುವುದು. |
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
‘ಲವ್ ಜಿಹಾದ್’ನ ಅಂತರರಾಷ್ಟ್ರೀಯ ಪಿತೂರಿ ಪ್ರಕರಣ: 14 ಜನರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!