|

ಜೈಪುರ – ಮತಾಂತರವನ್ನು ತಡೆಗಟ್ಟಲು ಭಾಜಪ ಅಧಿಕಾರದಲ್ಲಿರುವ ರಾಜಸ್ಥಾನ ಸರಕಾರವು ಹೊಸ ಮತ್ತು ಹೆಚ್ಚು ಕಠಿಣ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರಲು ನಿರ್ಧರಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ರಾಜಸ್ಥಾನ ಅಕ್ರಮ ಮತಾಂತರ ತಡೆಗಟ್ಟುವಿಕೆ ಮಸೂದೆ 2025’ರ ಕರಡಿಗೆ ಅನುಮೋದನೆ ನೀಡಲಾಯಿತು. ಸೆಪ್ಟೆಂಬರ್ 1ರಿಂದ ಆರಂಭವಾದ ವಿಧಾನಸಭೆ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲಾಗುವುದು. ಫೆಬ್ರುವರಿ 2025ರಲ್ಲಿ ರಚಿಸಲಾದ ಈ ಕಾನೂನಿನ ಕರಡಿನಲ್ಲಿ ಗರಿಷ್ಠ 10 ವರ್ಷಗಳ ಶಿಕ್ಷೆಯ ಅವಕಾಶವಿತ್ತು, ಅದನ್ನು ಈಗ ಆಜೀವ ಕಾರಾವಾಸದವರೆಗೆ ಹೆಚ್ಚಿಸಲಾಗಿದೆ.
ಕಠಿಣ ಮತಾಂತರ ವಿರೋಧಿ ಮಸೂದೆಯ ಪ್ರಮುಖ ಅಂಶಗಳು !
1. ಯಾವುದೇ ವ್ಯಕ್ತಿಯನ್ನು ಸುಳ್ಳು ಕಾರಣಗಳಿಗಾಗಿ ಮತಾಂತರ ಮಾಡುವಂತಿಲ್ಲ!
ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ವಂಚನೆ, ಆಮಿಷ, ಬಲವಂತ, ಸುಳ್ಳು ಮಾಹಿತಿ ಅಥವಾ ವಿವಾಹದ ಸುಳ್ಳು ಭರವಸೆ ನೀಡಿ ಯಾವುದೇ ವ್ಯಕ್ತಿಯನ್ನು ಮತಾಂತರ ಮಾಡುವಂತಿಲ್ಲ.
2. ಆಮಿಷ/ಒತ್ತಡದಿಂದ ಮತಾಂತರ ಮಾಡಿದರೆ ಶಿಕ್ಷೆ ಏನು?
ಈ ರೀತಿ ಮತಾಂತರ ಮಾಡಿದರೆ ಕನಿಷ್ಠ 7 ರಿಂದ 14 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇದರ ಜೊತೆಗೆ, ₹5 ಲಕ್ಷದವರೆಗೆ ದಂಡವನ್ನೂ ವಿಧಿಸಬಹುದು. ಆದರೆ, ಮೂಲ ಧರ್ಮಕ್ಕೆ ಮರಳುವುದು ಈ ಕಾನೂನಿನಲ್ಲಿ ಅನ್ವಯಿಸುವುದಿಲ್ಲ. ಮತಾಂತರದ ಉದ್ದೇಶದಿಂದ ವಿವಾಹ ಮಾಡಿದ್ದರೆ, ಕುಟುಂಬ ನ್ಯಾಯಾಲಯ ಆ ವಿವಾಹವನ್ನು ಅಮಾನ್ಯ ಎಂದು ಘೋಷಿಸಬಹುದು.
3. ಸಾಮೂಹಿಕ ಮತಾಂತರಕ್ಕೆ ಹೆಚ್ಚು ಕಠಿಣ ಶಿಕ್ಷೆಯ ಅವಕಾಶ!
ಸಾಮೂಹಿಕ ಮತಾಂತರ ಪ್ರಕರಣಗಳಿಗೆ ಹೆಚ್ಚು ಕಠಿಣ ಶಿಕ್ಷೆಯ ಅವಕಾಶವಿದೆ. ಇದರಲ್ಲಿ, ತಪ್ಪಿತಸ್ಥರೆಂದು ಕಂಡುಬಂದವರಿಗೆ ಕನಿಷ್ಠ 20 ವರ್ಷದಿಂದ ಆಜೀವ ಕಾರಾವಾಸದವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಹಾಗೂ ಕನಿಷ್ಠ ₹25 ಲಕ್ಷದವರೆಗೆ ದಂಡ ವಿಧಿಸಲಾಗುವುದು.
4. ವಿದೇಶದಿಂದ ಬಂದ ಹಣದಿಂದ ಮತಾಂತರ ಮಾಡಿದರೆ ಶಿಕ್ಷೆ ಹೆಚ್ಚಳ!
ಮತಾಂತರಕ್ಕಾಗಿ ವಿದೇಶದಿಂದ ಅಥವಾ ಅಕ್ರಮ ಸಂಸ್ಥೆಗಳಿಂದ ಹಣ ಪಡೆದಿರುವುದು ಸಾಬೀತಾದರೆ, ಈ ಅಪರಾಧಕ್ಕಾಗಿ ಕನಿಷ್ಠ 10 ವರ್ಷದಿಂದ ಗರಿಷ್ಠ 20 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುವುದು. ಅಲ್ಲದೆ, ಕನಿಷ್ಠ ₹20 ಲಕ್ಷದ ದಂಡ ವಿಧಿಸಲಾಗುವುದು.
5. ಮಹಿಳಾ ಕಳ್ಳಸಾಗಣೆ ಮಾಡಿದರೆ ಹೆಚ್ಚು ಶಿಕ್ಷೆಯ ಅವಕಾಶ!
ಭಯ ತೋರಿಸಿ, ಬಲವಂತವಾಗಿ ಅಥವಾ ವಿವಾಹದ ಭರವಸೆ ನೀಡಿ ಅದನ್ನು ಪೂರೈಸದಿರುವುದು ಅಥವಾ ಮಹಿಳಾ ಕಳ್ಳಸಾಗಣೆ ಮಾಡುವುದಕ್ಕೆ ಹೆಚ್ಚು ಕಠಿಣ ಶಿಕ್ಷೆಗೆ ಅವಕಾಶಗಳಿವೆ. ಇಂತಹ ಅಪರಾಧಗಳಿಗೆ 20 ವರ್ಷದಿಂದ ಆಜೀವ ಕಾರಾವಾಸ, ಹಾಗೂ ಕನಿಷ್ಠ ₹30 ಲಕ್ಷದ ದಂಡ ಹೇರಲಾಗುವುದು. ಈ ರೀತಿಯ ಅಪರಾಧ ಪದೇ-ಪದೇ ಮಾಡುತ್ತಿರುವುದು ಸಾಬೀತಾದರೆ, ಆಜೀವ ಕಾರಾವಾಸದಿಂದ ಕನಿಷ್ಠ ₹50 ಲಕ್ಷದ ದಂಡ ವಿಧಿಸುವ ಅವಕಾಶವನ್ನು ಈ ಹೊಸ ಕಾನೂನಿನಲ್ಲಿ ಸೇರಿಸಲಾಗಿದೆ.
6. ಆರೋಪಿಯೇ ತನ್ನನ್ನು ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕು!
ಈ ಕಾನೂನಿನ ಪ್ರಮುಖ ವಿಷಯವೆಂದರೆ, ಮತಾಂತರದ ಆರೋಪ ಹೊತ್ತಿರುವ ವ್ಯಕ್ತಿಯೇ ತಾನು ನಿರ್ದೋಷಿ ಎಂದು ಸಾಬೀತುಪಡಿಸಬೇಕಾಗುತ್ತದೆ.
ಮತಾಂತರ ಸ್ಥಳದ ಮೇಲೆ ಬುಲ್ಡೋಜರ್ ಕ್ರಮ!ಅಕ್ರಮ ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಸಂಸ್ಥೆಯ ನೋಂದಣಿಯನ್ನು ರದ್ದುಪಡಿಸಲಾಗುವುದು, ಅಂದರೆ, ಅಂತಹ ಸಂಸ್ಥೆಗಳ ಮೇಲೆ ನಿಷೇಧ ಹೇರಲಾಗುವುದು. ಸಂಸ್ಥೆಗೆ ಬರುತ್ತಿರುವ ಸರಕಾರಿ ಅನುದಾನವನ್ನೂ ನಿಲ್ಲಿಸಲಾಗುವುದು. ಮತಾಂತರ ಮಾಡಿರುವ ಕಟ್ಟಡವನ್ನು ವಶಪಡಿಸಿಕೊಂಡು ತನಿಖೆ ನಡೆಸಲಾಗುವುದು ಅಥವಾ ಬುಲ್ಡೋಜರ್ ಕ್ರಮದ ಮೂಲಕ ಅದನ್ನು ನೆಲಸಮಗೊಳಿಸಲಾಗುವುದು. |
ಈ ಸಭೆಯಲ್ಲಿ ಮತ್ತೊಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದ 312 ನಗರ ಪ್ರದೇಶಗಳಲ್ಲಿ ಒಂದು ಲಕ್ಷದ ಬದಲಿಗೆ ಈಗ 2 ಲಕ್ಷ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಹಳೆಯ ಬೀದಿ ದೀಪಗಳನ್ನು ತೆಗೆದು ಹೊಸ ದೀಪಗಳನ್ನು ಅಳವಡಿಸಲು ಸುಮಾರು ₹160 ಕೋಟಿ ವೆಚ್ಚವಾಗಲಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!