ಪ್ರಧಾನಿ ಮೋದಿಯವರಿಂದ ಎಲ್ಲಾ ರೀತಿಯ ಸಹಾಯ ನೀಡುವ ಭರವಸೆ

ಜಲಾಲಾಬಾದ್ (ಅಫ್ಘಾನಿಸ್ತಾನ) – ಒಂದೇ ರಾತ್ರಿಯಲ್ಲಿ ಸಂಭವಿಸಿದ ೫ ಭೂಕಂಪಗಳಿಂದ ಅಫ್ಘಾನಿಸ್ತಾನವು ತೀವ್ರವಾಗಿ ತತ್ತರಿಸಿದ್ದು, ಈ ಭೂಕಂಪಗಳಲ್ಲಿ ಇದುವರೆಗೆ ಸುಮಾರು 800ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆಗಸ್ಟ್ 31ರ ರಾತ್ರಿ ಹನ್ನೊಂದು ಮುಕ್ಕಾಲು ಸುಮಾರಿಗೆ ಭೂಕಂಪ ಸಂಭವಿಸಿತು. ‘ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ’ ಪ್ರಕಾರ, ಭೂಕಂಪದ ಕೇಂದ್ರಬಿಂದು ಜಲಾಲಾಬಾದ್ ನಿಂದ 27 ಕಿ.ಮೀ. ಈಶಾನ್ಯಕ್ಕೆ ಮತ್ತು ಭೂಮಿಯೊಳಗೆ 8 ಕಿ.ಮೀ. ಆಳದಲ್ಲಿತ್ತು. ಮೊದಲ ಕಂಪನದ ನಂತರ ಕೇವಲ 20 ನಿಮಿಷಗಳಲ್ಲಿ 4.5 ಮತ್ತು 5.2 ರಿಕ್ಟರ್ ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿದವು. ನಂತರ ರಾತ್ರಿ 3 ಮತ್ತು 5 ಗಂಟೆಗಳಲ್ಲೂ ಭೂಕಂಪದ ಅನುಭವವಾಯಿತು. ಈ ಕಂಪನಗಳಿಂದ ಹಲವೆಡೆ ಕಟ್ಟಡಗಳು ಕುಸಿದಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ. ತಾಲಿಬಾನ್ ಸರಕಾರ ತಕ್ಷಣವೇ ಪರಿಹಾರ ಕಾರ್ಯಗಳನ್ನು ಆರಂಭಿಸಿದ್ದು, ರಾಜಧಾನಿ ಕಾಬೂಲ್ ಸೇರಿದಂತೆ ಇತರ ಪ್ರಾಂತ್ಯಗಳಿಂದ ಸಹಾಯ ತಂಡಗಳನ್ನು ಕಳುಹಿಸಲಾಗಿದೆ.
🚨 Tragedy in #Afghanistan
5 back-to-back earthquakes shake the nation 🌍💔 800+ lives lost 2800+ injured
🇮🇳 PM Modi assures full support & assistance to the Afghan people in this hour of grief.#AfghanistanEarthquake
VC: @arabiandailys pic.twitter.com/99Y0vyuQbt— Sanatan Prabhat (@SanatanPrabhat) September 1, 2025
ಪ್ರಧಾನಿ ಮೋದಿ ಅವರು ಚೀನಾದಲ್ಲಿರುವಾಗಲೇ ಅಫ್ಘಾನಿಸ್ತಾನಕ್ಕೆ ಈ ನೈಸರ್ಗಿಕ ವಿಕೋಪಕ್ಕಾಗಿ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಳೆದ ವರ್ಷವೂ ಭೂಕಂಪ ಸಂಭವಿಸಿತ್ತು
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ 6.3 ರಿಕ್ಟರ್ ತೀವ್ರತೆಯ ಭೂಕಂಪ ಸಂಭವಿಸಿ, 2 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಅಫ್ಘಾನಿಸ್ತಾನದಲ್ಲಿ ನಾಗರಿಕರ ಸುರಕ್ಷತೆಯ ಪ್ರಶ್ನೆ ಮತ್ತೊಮ್ಮೆ ಉದ್ಭವಿಸಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’