ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸಾಧಕರಿಗೆ ಸಾಧನೆಯ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಕೆಲವು ಸಾಧಕರ ಸಂಪೂರ್ಣ ಕುಟುಂಬದವರು ಸನಾತನ ಆಶ್ರಮಗಳಲ್ಲಿ ಉಳಿದುಕೊಂಡು ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿ ಕೆಲವು ಸಾಧಕರ ತಂದೆ-ತಾಯಿ ಅಥವಾ ಬೇರೆ ಕುಟುಂಬದವರು ಅನಾರೋಗ್ಯ ಪೀಡಿತರಾಗಿದ್ದರೆ ಕೌಶಲ್ಯದ ಸೇವೆ ಮಾಡುವ ಅವರ ಕುಟುಂಬದ ಸಾಧಕರಿಗೆ ಕೌಶಲ್ಯದ ಸೇವೆಯೊಂದಿಗೆ ಅವರ ಸೇವೆಯನ್ನೂ ಮಾಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಅವರ ಮನಸ್ಸು ಸಂಘರ್ಷದಲ್ಲಿರುತ್ತದೆ. ಆದುದರಿಂದ ‘ತಂದೆ-ತಾಯಿಯವರ ಸೇವೆಯಲ್ಲಿದ್ದರೆ ಅದರಿಂದ ಸಾಧನೆ ಹೇಗೆ ಮಾಡುವುದು ? ಆ ಸೇವೆಯಿಂದ ಆನಂದವನ್ನು ಪಡೆಯಲು ಯಾವ ದೃಷ್ಟಿಕೋನ ಇರಬೇಕು ? ಅದಕ್ಕಾಗಿ ಅನಾರೋಗ್ಯಪೀಡಿತ ತಂದೆ-ತಾಯಿಯವರ ಸೇವೆ ಮಾಡುವ ಸಾಧಕರು ಯಾವ ಪ್ರಯತ್ನಗಳನ್ನು ಮಾಡಬೇಕು ?’, ಈ ವಿಷಯದಲ್ಲಿ ಒಂದು ಸತ್ಸಂಗದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕೆಲವು ಸಾಧಕರ ಪ್ರಶ್ನೆಗಳಿಗೆ ಉತ್ತರ ನೀಡುವಾಗ ಮಾರ್ಗದರ್ಶನ ಮಾಡಿದ್ದರು. ಅದು ಎಲ್ಲ ಸಾಧಕರಿಗೂ ಸಾಧನೆಯ ದೃಷ್ಟಿಯಿಂದ ಉಪಯುಕ್ತವಾಗಲಿದೆ ಎನ್ನುವ ದೃಷ್ಟಿಯಿಂದ ಇಲ್ಲಿ ಕೊಡಲಾಗಿದೆ.
೧. ಅನಾರೋಗ್ಯಪೀಡಿತ ತಂದೆ-ತಾಯಿಯವರ ಸೇವೆ ಮಾಡುವುದರಿಂದಲೂ ಮಕ್ಕಳ ಸಾಧನೆಯಾಗುವುದು
ಒಬ್ಬ ಸಾಧಕ : ಈಗ ಅಪ್ಪನ ಆರೋಗ್ಯ ತುಂಬ ಹದಗೆಟ್ಟಿದೆ; ಆದುದರಿಂದ ಅವರಿಗೆ ಸತತ ಸಹಾಯ ಬೇಕಾಗುತ್ತದೆ. ಅವರನ್ನು ಎಬ್ಬಿಸಿ ಕೂರಿಸುವುದು, ಸ್ನಾನ ಮಾಡಿಸುವುದು ಇತ್ಯಾದಿ. (ಸಾಧಕನ ಕುಟುಂಬದವರು ರಾಮನಾಥಿ ಆಶ್ರಮದಲ್ಲಿ ಪೂರ್ಣಾವಧಿ ಸಾಧನೆ ಮಾಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಅವರು (ತಂದೆ) ತುಂಬಾ ಅನಾರೋಗ್ಯ ಪೀಡಿತರಾಗಿದ್ದಾರೆ. ಸಾಧಕನು ಅವರ ಸೇವೆಯನ್ನು ಮಾಡುತ್ತಾನೆ.)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದರಿಂದಲೂ ಸೇವೆಯಾಯಿತು. ಇಂದಿನ ಕಾಲದಲ್ಲಿ ಅನಾರೋಗ್ಯದಲ್ಲಿರುವ ತಂದೆ-ತಾಯಿಯವರ, ಮನೆಯವರ ಎಲ್ಲ ಕೆಲಸ ಮಾಡುವುದು ಸಹ ಸಾಧನೆಯಾಗಿದೆ. ಹಿಂದೆ ಎಲ್ಲರ ಕರ್ತವ್ಯವಾಗಿತ್ತು. ಹಿಂದೆ ಎಲ್ಲರೂ ತಂದೆ-ತಾಯಿಯವರ ಸೇವೆ ಮಾಡುತ್ತಿದ್ದರು. ಈಗ ಮಾಡುವುದಿಲ್ಲ. ಯಾರು ಮಾಡುತ್ತಾರೆಯೋ ಅದರಿಂದ ಅವರ ಸಾಧನೆಯಾಗುತ್ತದೆ.
೨. ಗಣಕಯಂತ್ರಕ್ಕೆ ಸಂಬಂಧಿಸಿದ (ಕೌಶಲ್ಯದ) ಸೇವೆಯಿಂದ ಸಿಗುವ ಆನಂದವು ತಂದೆ-ತಾಯಿಯವರ ಸೇವೆಯಿಂದಲೂ ಸಿಗಬೇಕು !
ಸಾಧಕ : ಕಳೆದ ವರ್ಷ ತುಂಬ ಕಷ್ಟದಿಂದ ಕೂಡಿತ್ತು. ಬಹಳ (ಮಾನಸಿಕ) ತೊಂದರೆಯಾಯಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಗಣಕಯಂತ್ರಕ್ಕೆ ಸಂಬಂಧಿಸಿದ ಸೇವೆಯನ್ನು ಮಾಡುವಾಗ ನಮಗೆ ಆನಂದ ಸಿಗುತ್ತದೆ. ಅದೇ ರೀತಿ ಆನಂದವು ಅಪ್ಪನ ಸೇವೆ ಮಾಡಿದಾಗಲೂ ಸಿಗಬೇಕು. ಯಾವುದೇ ಕೃತಿಯನ್ನು ಮಾಡುವಾಗ, ಉದಾ. ಮಹಿಳೆಯರು ಅಡುಗೆ ಮಾಡುತ್ತಾರೆ; ಅವರಿಗೂ ಅದೇ ರೀತಿ ಆನಂದ ಸಿಗಬೇಕು. ‘ಮನೆಯವರಿಗಾಗಿ ನಾನು ಅಡುಗೆ ಮಾಡುತ್ತೇನೆ. ಅದು ನನ್ನ ಸೇವೆಯಾಗಿದೆ.’ ಪ್ರತಿಯೊಂದು ವಿಷಯದಲ್ಲಿ ಆನಂದ ಸಿಕ್ಕರೆ, ಜೀವನವೇ ಆನಂದಮಯವಾಗುತ್ತದೆ.
೩. ಸೇವೆಯಲ್ಲಿ ಕಿರಿಕಿರಿ ಆದರೆ ಅದು ಸೇವೆಯಾಗದೇ ಕೆಲಸವಾಗುವುದು
ಸಾಧಕನ ಸಹೋದರಿ : ಅಪ್ಪನ ಸೇವೆಯಿದ್ದರೆ, ಅಣ್ಣನಿಗೆ ಕಿರಿಕಿರಿ ಆಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಸೇವೆಯಲ್ಲಿ ಎಂದಿಗೂ ಯಾರಿಗೂ ಕಿರಿಕಿರಿ ಆಗಬಾರದು. ಕಿರಿಕಿರಿ ಆದರೆ ಅದನ್ನು ಸೇವೆ ಎಂದು ಕರೆಯುವುದೇ ಇಲ್ಲ, ಅದು ಕೆಲಸ ಮಾಡುವುದಾಯಿತು.
೪. ಸ್ವ-ಇಚ್ಛೆಯಿಂದ ಕೌಶಲ್ಯದ ಸೇವೆಯನ್ನು ಮಾಡುವುದಕ್ಕಿಂತ ತಂದೆ-ತಾಯಿಯವರೊಂದಿಗೆ ಇರುವ ಕೊಡು-ಕೊಳ್ಳುವಿಕೆ ಲೆಕ್ಕವನ್ನು ಅವರ ಸೇವೆ ಮಾಡಿ ಪೂರ್ತಿ ಮಾಡಿದರೆ ಅದರಿಂದ ಸಾಧನೆಯಾಗುತ್ತದೆ
ಸಾಧಕನ ಸಹೋದರಿ : ಅವನಿಂದ ಹಾಗೆಯೇ ಆಗುತ್ತದೆ. ಅವನಿಗೆ ಇಲ್ಲಿಗೆ (ಗಣಕಯಂತ್ರದ ಸೇವೆಗೆ) ಬರಲು ಸಾಧ್ಯವಾಗುವುದಿಲ್ಲ ಅಥವಾ ಯಾವಾಗಲಾದರೊಮ್ಮೆ ಬರಲು ಸಿಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಅದು ಸ್ವ-ಇಚ್ಛೆಯಾಯಿತು. ಸಾಧನೆಯಲ್ಲಿ ಸ್ವ-ಇಚ್ಛೆ, ಪರೇಚ್ಛೆ ಮತ್ತು ಈಶ್ವರೇಚ್ಛೆ ಇರುತ್ತವೆ. ನಮ್ಮ ಸ್ವ-ಇಚ್ಛೆಯನ್ನು ಬಿಟ್ಟರೆ, ನಾವು ಪರೇಚ್ಛೆಯಿಂದ ವರ್ತಿಸಲು ಪ್ರಾರಂಭಿಸುತ್ತೇವೆ, ಅಂದರೆ ನಮ್ಮ ಮನೋಲಯವಾಗಲು ಪ್ರಾರಂಭವಾಗುತ್ತದೆ. ನಮ್ಮ ಮನಸ್ಸಿನಲ್ಲಿ ಏನೂ ಇರುವುದಿಲ್ಲ. ‘ಅವನು ಕಿರಿಕಿರಿ ಮಾಡುತ್ತಿದ್ದರೆ, ಅವನಿಗೆ ನೀವು ಹೇಳಬೇಕು’, ಇದು ನಿಮಗೆ ಗಮನಕ್ಕೆ ಬರಬೇಕಾಗಿತ್ತು. ಗಣಕಯಂತ್ರದಲ್ಲಿ ಸೇವೆ ಮಾಡುವುದು ಸೇವೆಯಲ್ಲ. ತಂದೆಯವರ ಸೇವೆ ಹೆಚ್ಚು ಮಹತ್ವದ್ದಾಗಿದೆ. ಗಣಕಯಂತ್ರ ಮತ್ತು ನಮ್ಮಲ್ಲಿ ಕೊಡುಕೊಳ್ಳುವಿಕೆ ಲೆಕ್ಕವಿರುವುದಿಲ್ಲ. ತಂದೆ-ತಾಯಿ ಮತ್ತು ನಮ್ಮಲ್ಲಿ ಕೊಡುಕೊಳ್ಳುವಿಕೆ ಲೆಕ್ಕ ಇರುತ್ತದೆ. ಅದನ್ನು ನಾವು ಪೂರ್ತಿ ಮಾಡಬೇಕು, ಅಂದರೆ ಸಾಧನೆಯಾಯಿತು. ಅದರಿಂದ ಪ್ರಗತಿ ಬೇಗನೇ ಆಗುತ್ತದೆ. ಗಣಕಯಂತ್ರದಲ್ಲಿ ಸೇವೆ ಮಾಡುತ್ತ ಕುಳಿತುಕೊಂಡರೆ ಮತ್ತು ತಂದೆ-ತಾಯಿಯವರ ಕಡೆಗೆ ದುರ್ಲಕ್ಷ ಮಾಡಿದರೆ ಅದರಿಂದ ಪ್ರಗತಿ ಹೇಗೆ ಆಗುತ್ತದೆ ?
೫. ತಂದೆ-ತಾಯಿಯವರ ಸೇವೆ ‘ಮಹತ್ವದ ಸೇವೆ’ ಆಗಿದೆ ಎಂದು ಸ್ವಯಂ-ಸೂಚನೆಗಳನ್ನು ಕೊಟ್ಟರೆ ಮನಸ್ಸಿನ ನಿರಾಶೆ ದೂರವಾಗುವುದು !
ಸಾಧಕನ ತಾಯಿ : ಪರಮಪೂಜ್ಯ, ಅವನು ಕೆಲವು ಬಾರಿ ತುಂಬ ನಿರಾಶೆಯಲ್ಲಿರುತ್ತಾನೆ ಮತ್ತು ತುಂಬಾ ವಿಚಾರ ಮಾಡುತ್ತಿರುತ್ತಾನೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು; ಆದರೆ ಅದಕ್ಕಾಗಿ ‘ಗಣಕಯಂತ್ರದ ಸೇವೆಗಿಂತ ತಂದೆ-ತಾಯಿಯವರ ಸೇವೆ ಮಹತ್ವದ್ದಾಗಿದೆ’, ಎಂದು ಸ್ವಯಂಸೂಚನೆ ಕೊಡಬೇಕು. ತಂದೆಯವರ ಸೇವೆಯನ್ನು ಹೆಚ್ಚೆಚ್ಚು ಮಾಡಲು ಪ್ರಯತ್ನ ಮಾಡಬೇಕು. ಅದನ್ನು ಮಾಡುವಾಗ ಮನಸ್ಸಿಗೆ ಆನಂದವೆನಿಸಬೇಕು. ಆಗ ಅವನು ಸಾಧನೆಯಲ್ಲಿ ಬೇಗ ಮುಂದೆ ಹೋಗುವನು
೬. ತಾಯಿ-ತಂದೆಯರ ಸೇವೆಯಿಂದಲೇ ಭಾವ-ಭಕ್ತಿ ನಿರ್ಮಾಣವಾಗುತ್ತದೆ !
ಸಾಧಕ : ನಾಮಸ್ಮರಣೆ ಆಗುವುದಿಲ್ಲ. ಮನಸ್ಸಿನಲ್ಲಿ ಭಾವಭಕ್ತಿ ಹೀಗೆನೂ ಅನಿಸುವುದಿಲ್ಲ. ಅಂದರೆ ಮನಸ್ಸಿನಲ್ಲಿ ಏನೂ ಇಲ್ಲದ ಹಾಗೆ ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ನಮ್ಮಿಂದ ಏನೆಲ್ಲ ಆಗುವುದಿಲ್ಲವೋ, ಅದಕ್ಕೆ ಸ್ವಯಂಸೂಚನೆಗಳನ್ನು ಕೊಡುವುದು ಒಂದೇ ಮಾರ್ಗವಿದೆ. ಬೇರೆ ಯಾವುದೇ ಮಾರ್ಗವಿಲ್ಲ. ಭಾವ-ಭಕ್ತಿಯು ತಾಯಿ-ತಂದೆಯರ ಸೇವೆಯಿಂದಲೇ ನಿರ್ಮಾಣ ಆಗುವುದು. ಗಣಕಯಂತ್ರವನ್ನು ದುರಸ್ತಿ ಮಾಡಿ ಭಾವ-ಭಕ್ತಿ ನಿರ್ಮಾಣ ಆಗುವುದಿಲ್ಲ. ನೀನು ತಂದೆಯವರ ಸೇವೆಯನ್ನು ಮಾಡಿದರೆ ಭಾವ-ಭಕ್ತಿ ನಿರ್ಮಾಣವಾಗುವುದು.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !