ಬ್ರಿಟನ್ ನಲ್ಲಿ ಪಾಕಿಸ್ತಾನಿ ‘ರೇಪ್ ಗ್ಯಾಂಗ್’ ಸಕ್ರಿಯ: ಅಪ್ರಾಪ್ತ ಹುಡುಗಿಯರ ಮೇಲೆ ಅತ್ಯಾಚಾರ!

(ರೇಪ್ ಗ್ಯಾಂಗ್ ಅಂದರೆ ಬಲಾತ್ಕಾರ ಮಾಡುವ ಗುಂಪುಗಳು)

ಲಂಡನ್ – ಬ್ರಿಟನ್‌ನ ಅನೇಕ ಪ್ರದೇಶಗಳಲ್ಲಿ ಪಾಕಿಸ್ತಾನಿ ‘ರೇಪ್ ಗ್ಯಾಂಗ್ ಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ಮುಸ್ಲಿಂ ಬಲಾತ್ಕಾರಿ ಗ್ಯಾಂಗ್‌ಗಳು ಅಪ್ರಾಪ್ತ ವಯಸ್ಸಿನ ಹುಡುಗಿಯರಿಗೆ ಮಾದಕ ವಸ್ತುಗಳನ್ನು ನೀಡಿ, ಚಟ ಹಚ್ಚಿಸಿ, ಅವರ ಮೇಲೆ ಬಲಾತ್ಕಾರ ಮಾಡುತ್ತವೆ. ಬ್ರಿಟನ್‌ನ 85 ಪ್ರದೇಶಗಳಲ್ಲಿ ಅಪ್ರಾಪ್ತ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತಿಳಿದುಬಂದಿದೆ. ಈ ಬಲಾತ್ಕಾರಿ ಗ್ಯಾಂಗ್‌ಗಳಲ್ಲಿ ಹೆಚ್ಚಿನ ಸದಸ್ಯರು ಪಾಕಿಸ್ತಾನಿ ಮೂಲದವರು ಎಂದು ಸಂಸದ ರೂಪರ್ಟ್ ಲೋವೆ ಹೇಳಿದ್ದಾರೆ. ಈ ಜನರು ಹಲವು ವರ್ಷಗಳಿಂದ ಅಪರಾಧಗಳನ್ನು ಮಾಡುತ್ತಿದ್ದರೂ, ಪೊಲೀಸರು ಮತ್ತು ಸರ್ಕಾರ ಇದನ್ನು ನಿರ್ಲಕ್ಷಿಸಿದೆ ಎಂದು ಸಂಸದ ರೂಪರ್ಟ್ ಕಳವಳ ವ್ಯಕ್ತಪಡಿಸಿದ್ದಾರೆ.

1. ಒಂದು ವರದಿಯ ಪ್ರಕಾರ, ಈ ಬಲಾತ್ಕಾರಿ ಗ್ಯಾಂಗ್‌ಗಳು ಬಿಳಿ ಹುಡುಗಿಯರನ್ನು ಗುರಿಯಾಗಿಸಿಕೊಳ್ಳುತ್ತಾರೆ. ಕೆಲವು ಸಂತ್ರಸ್ತೆಯರು ತಮ್ಮನ್ನು ಬಾಲ್ಯದಿಂದಲೇ ಈ ಗ್ಯಾಂಗ್ ನವರು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಮೊದಲು ಅವರಿಗೆ ಮಾದಕ ವಸ್ತುಗಳ ಚಟ ಹಚ್ಚಿಸಿ, ನಂತರ ಬಲಾತ್ಕಾರ ಮಾಡಿ ಸುಮ್ಮನಿರುವಂತೆ ಬೆದರಿಕೆ ಹಾಕಲಾಗಿದೆ.

2. ಈ ಘಟನೆಗಳು ಮೊದಲಿಗಿಂತಲೂ ಈಗ ಹೆಚ್ಚಾಗಿವೆ. ಈ ಬಲಾತ್ಕಾರಿ ಗುಂಪುಗಳಿಂದ ಲಕ್ಷಾಂತರ ಜನರ ಜೀವನ ಹಾಳಾಗಿದೆ ಎಂದು ಲೋವೆ ಹೇಳಿದರು.

3. ಜನವರಿ 2025ರಲ್ಲಿ, ‘ಟೆಸ್ಲಾ’ ಕಂಪನಿಯ ಮಾಲೀಕ ಮಸ್ಕ್ ಅವರು ಬ್ರಿಟನ್‌ನ ‘ಗ್ರೂಮಿಂಗ್ ಗ್ಯಾಂಗ್ಸ್’ ಮೇಲೆ ಟೀಕೆ ಮಾಡಿದ್ದರು.

4. 2024 ರಲ್ಲಿ, ಬಲಾತ್ಕಾರದ ಪ್ರಕರಣಗಳಲ್ಲಿ 19 ಮುಸ್ಲಿಮರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

ಸಂಪಾದಕೀಯ ನಿಲುವು

ಪಾಕಿಸ್ತಾನ ಎಂದೂ ಯಾವ ದೇಶದಲ್ಲಿಯೂ ಶಾಂತಿ ನೆಲೆಸಲು ಬಿಡುವುದಿಲ್ಲ. ಜಾಗತಿಕ ದೇಶಗಳೂ ಈಗಲಾದರೂ ಇದನ್ನು ಅರ್ಥಮಾಡಿಕೊಂಡು ಪಾಕಿಸ್ತಾನದ ವಿರುದ್ಧ ಒಗ್ಗೂಡಿ ಪಾಠ ಕಲಿಸಬೇಕು.