ಕಂಪನಿಯು ತಕ್ಷಣವೇ ಈ ಜಾಹೀರಾತನ್ನು ತೆಗೆದುಹಾಕಿ, ಹಿಂದೂಗಳ ಕ್ಷಮೆ ಕೇಳಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆ!

| ಮೇಲೆ ಪ್ರಕಟಿಸಿದ ಚಿತ್ರದ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೇ ನೈಜ ಸ್ಥಿತಿ ತಿಳಿಸುವುದಾಗಿದೆ – ಸಂಪಾದಕರು |
ಪುಣೆ – ಗಣೇಶೋತ್ಸವದ ಹಿನ್ನೆಲೆಯಲ್ಲಿ, ಆಕ್ಸಿರಿಚ್ (Oxyrich) ಕಂಪನಿಯು ತನ್ನ ನೀರಿನ ಬಾಟಲಿಯನ್ನು ಬಳಸಿ ಗಣೇಶನ ಚಿತ್ರವನ್ನು ತೋರಿಸುವ ಜಾಹೀರಾತು ಫಲಕವನ್ನು ಪ್ರಕಟಿಸಿದೆ. ಶಿಂಧೆ ಪಾರ್ ಚೌಕ್, ಶನಿವಾರ ಪೇಟ್, ಕಸ್ಬಾ ಪೇಟ್, ನೂತನ್ ಮರಾಠಿ ವಿದ್ಯಾಲಯದ ಹತ್ತಿರ, ಬಾಜಿರಾವ್ ರೋಡ್, ವಿಶ್ರಾಮಬಾಗ್ ವಾಡಾ ಮುಂತಾದ ವಿವಿಧ ಸ್ಥಳಗಳಲ್ಲಿ ಈ ಫಲಕಗಳನ್ನು ಅಳವಡಿಸಲಾಗಿದೆ. ‘ಗಣೇಶ ಭಕ್ತರಿಗೆ ಹಾರ್ದಿಕ ಸ್ವಾಗತ’ ಎಂದು ಫಲಕಗಳನ್ನು ಹಾಕಿದ್ದರೂ, ವಾಸ್ತವವಾಗಿ ಗಣೇಶನ ವಿಡಂಬನೆ ಮಾಡಲಾಗಿದೆ.
📍PUNE: श्री गणेशाचे विडंबन करणाऱ्या ऑक्सिरीच कंपनीचा जाहीर निषेध !
🛑या जाहिरातीमुळे हिंदूंच्या धार्मिक भावना दुखावल्या आहेत, याचा या आस्थापनाने विचार करावा आणि ही जाहिरात लवकर काढून घ्यावी. समस्त हिंदूंची जाहीर माफी मागावी !@HinduJagrutiOrg @SG_HJS | #Ganpati #Pune pic.twitter.com/TUszLkzKe8
— Parag Gokhale (@Parag_hjs) August 29, 2025
1. ‘ಕಂಪನಿಯು ಸ್ವಾಗತ ಫಲಕದಲ್ಲಿ ಗಣೇಶನ ವಿಡಂಬನೆ ಮಾಡುವ ಮೂಲಕ ಏನು ಸಾಧಿಸಲು ಹೊರಟಿದೆ?’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಗುತ್ತಿದೆ. ‘ಗಣೇಶನ ವಿಡಂಬನೆ ಸಹಿಸಲಾಗದು’ ಎಂದು ಹಿಂದೂಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
2. ಹಿಂದೂ ಜನಜಾಗೃತಿ ಸಮಿತಿಯು ಈ ಫಲಕವನ್ನು ತೀವ್ರವಾಗಿ ಖಂಡಿಸಿದೆ. ಸಮಿತಿಯ ಶ್ರೀ ಪರಾಗ್ ಗೋಖಲೆ ಅವರು ಈ ಬಗ್ಗೆ ‘ಎಕ್ಸ್’ (X) ನಲ್ಲಿ ಟ್ವೀಟ್ ಮಾಡಿ, ‘ಗಣೇಶನಂತಹ ಆರಾಧ್ಯ ದೇವತೆಯ ವಿಡಂಬನೆ ಮಾಡುವುದು ಹಿಂದೂಗಳ ಶ್ರದ್ಧೆಯ ಮೇಲೆ ನೇರ ಆಘಾತವಾಗಿದೆ. ಆಕ್ಸಿರಿಚ್ ಕಂಪನಿಯು ತಕ್ಷಣವೇ ಈ ಜಾಹೀರಾತನ್ನು ತೆಗೆದುಹಾಕಿ ಹಿಂದೂಗಳ ಬಹಿರಂಗ ಕ್ಷಮೆ ಕೇಳಬೇಕು’ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳಿಗೆ ಧರ್ಮದ ಶಿಕ್ಷಣ ಇಲ್ಲದ ಕಾರಣ, ಅವರು ಕೆಲವೊಮ್ಮೆ ಕಲೆಯ ಹೆಸರಿನಲ್ಲಿ, ಮತ್ತೆ ಕೆಲವೊಮ್ಮೆ ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಅವಮಾನ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕ! |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !