ಪಾಕಿಸ್ತಾನದ ಸಚಿವರಿಂದ ಭಾರತದ ಮೇಲೆ ಹುರುಳಿಲ್ಲದ ಆರೋಪ

ಇಸ್ಲಾಮಾಬಾದ – ಪಾಕಿಸ್ತಾನದ ಶಾಹಬಾಜ ಸರಕಾರದಲ್ಲಿ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ ಇಕ್ಬಾಲ್ ಅವರು ಪಾಕಿಸ್ತಾನದಲ್ಲಿನ ಪ್ರವಾಹಕ್ಕೆ ಭಾರತವನ್ನು ಹೊಣೆಗಾರರನ್ನಾಗಿ ಮಾಡಿದ್ದಾರೆ. ‘ಭಾರತವು ಪಾಕಿಸ್ತಾನದ ವಿರುದ್ಧ ನೀರನ್ನು ಶಸ್ತ್ರಾಸ್ತ್ರದಂತೆ ಬಳಸಿದೆ. ಭಾರತವು ತನ್ನ ಆಣೆಕಟ್ಟುಗಳಿಂದ ಹಠಾತ್ತಾಗಿ ಮತ್ತು ಉದ್ದೇಶಪೂರ್ವಕವಾಗಿ ನೀರನ್ನು ಬಿಟ್ಟಿದೆ’ ಎಂದು ಅವರು ಆರೋಪಿಸಿದ್ದಾರೆ. ಅವರು ಪಾಕಿಸ್ತಾನದ ಪಂಜಾಬನಲ್ಲಿನ ವಿನಾಶಕಾರಿ ಪ್ರವಾಹದ ಕುರಿತು ಮಾತನಾಡುತ್ತಿದ್ದರು. ರವಿ, ಸಟ್ಲೆಜ ಮತ್ತು ಚೀನಾಬ ನದಿಗಳ ನೀರಿನ ಮಟ್ಟ ಹೆಚ್ಚಾದ ಕಾರಣ, ಪಂಜಾಬನ ದೊಡ್ಡ ಪ್ರದೇಶವು ನೀರಿನಲ್ಲಿ ಮುಳುಗಿದೆ. ಪಾಕಿಸ್ತಾನಿ ವಿಜ್ಞಾನಿ ರವೂಫ್ ಕ್ಲಾಸ್ರಾ ಅವರು ಈ ಪ್ರವಾಹದ ಪರಿಣಾಮಗಳಿಗೆ ಪಾಕಿಸ್ತಾನದ ಶಾಹಬಾಜ ಷರೀಫ ಸರಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
1. ಸಚಿವ ಅಹ್ಸಾನ ಇಕ್ಬಾಲ ಅವರು ಭಾರತದ ಮೇಲೆ ಜಲ ಆಕ್ರಮಣದ ಆರೋಪ ಮಾಡಿದ್ದಾರೆ. ಅವರು ಭಾರತವು ನದಿಗಳಲ್ಲಿನ ನೀರನ್ನು ಸಂಗ್ರಹಿಸಿ, ಹಠಾತ್ತಾಗಿ ಬಿಡುತ್ತದೆ ಎಂದಿದ್ದಾರೆ.
2. ಇಕ್ಬಾಲ್ ಅವರು ಪ್ರವಾಹದ ಬಗ್ಗೆ ಭಾರತವು ಪೂರ್ವಸೂಚನೆ ನೀಡಿಲ್ಲ ಎಂದು ಆರೋಪಿಸಿದ್ದಾರೆ; ಆದರೆ ಇಕ್ಬಾಲ್ ಅವರ ಹೇಳಿಕೆ ಸುಳ್ಳು; ಏಕೆಂದರೆ ಭಾರತವು ಈ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡಿತ್ತು.
3. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದೊಂದಿಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಈ ಒಪ್ಪಂದದ ಪ್ರಕಾರ ಕಾಶ್ಮೀರದಲ್ಲಿ ನದಿಗಳ ನೀರಿನ ಮಟ್ಟ ಹೆಚ್ಚಿದಾಗ ಅದರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡುವುದು ಕಡ್ಡಾಯವಾಗಿತ್ತು.
ಸಂಪಾದಕೀಯ ನಿಲುವುಪಾಕಿಸ್ತಾನದಲ್ಲಿ ನಡೆಯುವ ಪ್ರತಿಯೊಂದು ವಿಷಯಕ್ಕೂ ಭಾರತವನ್ನು ಹೊಣೆಗಾರರನ್ನಾಗಿ ಮಾಡುವುದು ಪಾಕಿಸ್ತಾನದ ಹಳೆಯ ಚಾಳಿ. ಇಂತಹ ದೇಶವನ್ನು ಯಾರು ನಂಬುತ್ತಾರೆ? |
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid