
ಇಸ್ಲಾಮಾಬಾದ್ (ಪಾಕಿಸ್ತಾನ) – ‘ಮೂವಮೆಂಟ್ ಫಾರ್ ಸಾಲಿಡಾರಿಟಿ ಆ್ಯಂಡ್ ಪೀಸ್’ ನೀಡಿದ ಮಾಹಿತಿಯ ಪ್ರಕಾರ ಪಾಕಿಸ್ತಾನದಲ್ಲಿ ಪ್ರತಿವರ್ಷ ಸುಮಾರು 1 ಸಾವಿರ ಅಲ್ಪಸಂಖ್ಯಾತ ಹೆಣ್ಣುಮಕ್ಕಳನ್ನು ಬಲವಂತವಾಗಿ ಅಪಹರಿಸಿ ಮತಾಂತರ ಮಾಡಲಾಗುತ್ತದೆ. ಈ ಹೆಣ್ಣುಮಕ್ಕಳ ವಯಸ್ಸು ಸಾಮಾನ್ಯವಾಗಿ 12 ರಿಂದ 25 ವರ್ಷಗಳಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಪೊಲೀಸರು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಾರೆ.
ಮಾನವ ಹಕ್ಕುಗಳ ಸಂಸ್ಥೆಗಳಾದ ‘ಜೂಬಿಲಿ ಕ್ಯಾಂಪೇನ್’ ಮತ್ತು ‘ಓಪನ್ ಡೋರ್ಸ್’ ಪ್ರಕಾರ ಇಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. 2024ರಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಹೆಣ್ಣುಮಕ್ಕಳನ್ನು ಅಪಹರಿಸಲಾಗಿದೆ. ಈ ಕಿರುಕುಳದಿಂದಾಗಿ ಅನೇಕ ಹೆಣ್ಣುಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತರಾಗಿದ್ದಾರೆ. ಆದರೆ ಆರೋಪಿಗಳು ಮಾತ್ರ ಯಾವುದೇ ಭೀತಿ ಇಲ್ಲದೆ ಓಡಾಡುತ್ತಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ಹೆಚ್ಚಾಗಿ ‘ಹೆಣ್ಣುಮಗಳು ಸ್ವಇಚ್ಛೆಯಿಂದ ಮತಾಂತರಗೊಂಡು ಮದುವೆಯಾಗಿದ್ದಾಳೆ’ ಎಂದು ಆರೋಪಿಗಳು ಹೇಳುವ ವಾದವನ್ನು ಒಪ್ಪಿಕೊಳ್ಳುತ್ತದೆ.
ಅಲ್ಪಸಂಖ್ಯಾತರ ವಿರುದ್ಧ ದೇವನಿಂದೆಯ ಕಾನೂನುಗಳ ಬಳಕೆ
‘ದಿ ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಿಟಿ’ ಈ ವಿಷಯಕ್ಕೆ ಸಂಬಂಧಿಸಿದಂತೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ಈ ಸಂಸ್ಥೆಯು ‘ಭಯದ ಬೀದಿಗಳು: 2024-25ರಲ್ಲಿ ಧರ್ಮ ಅಥವಾ ನಂಬಿಕೆಗಳ ಸ್ವಾತಂತ್ರ್ಯ’ ಎಂಬ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಹಿಂದೂ, ಕ್ರೈಸ್ತ ಮತ್ತು ಅಹ್ಮದಿ (ಮುಸ್ಲಿಮರಲ್ಲಿ ಒಂದು ಗುಂಪು)ಗಳ ಮೇಲಿನ ಹಿಂಸಾಚಾರವು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ದೇವಸ್ಥಾನಗಳು ಮತ್ತು ಚರ್ಚ್‌ಗಳನ್ನು ನಾಶಪಡಿಸಲಾಗಿದೆ, ಅಲ್ಲದೇ ಕೆಲ ಜನರನ್ನು ಹತ್ಯೆ ಸಹ ಮಾಡಲಾಗಿದೆ.
ಅಪ್ರಾಪ್ತ ಹೆಣ್ಣುಮಕ್ಕಳ ರಕ್ಷಣೆಯ ಕಾನೂನುಗಳು ನಿಷ್ಪ್ರಯೋಜಕ
‘ದಿ ವಾಯ್ಸ್ ಆಫ್ ಪಾಕಿಸ್ತಾನ್ ಮೈನಾರಿಟಿ’ ಸಂಸ್ಥೆಯ ಪ್ರಕಾರ ಬಲವಂತದ ಮತಾಂತರ ಮತ್ತು ಬಾಲ್ಯ ವಿವಾಹದ ಪ್ರಕರಣಗಳು ಮುಂದುವರಿದಿವೆ. ಪಾಕ್ ನಲ್ಲಿ ಬಾಲ್ಯ ವಿವಾಹ ವಿರೋಧಿ ಕಾನೂನುಗಳಿಗೆ ಯಾವುದೇ ಬೆಲೆಯಿಲ್ಲ. ದೇವನಿಂದೆಯ ಕಾನೂನು ಬಂದ ನಂತರ ಅಲ್ಪಸಂಖ್ಯಾತರ ಪರಿಸ್ಥಿತಿ ಇನ್ನಷ್ಟು ದಯನೀಯವಾಗಿದೆ. ಇಸ್ಲಾಮಿ ಗುಂಪುಗಳು ಯಾರನ್ನಾದರೂ ಬಲಿಪಶು ಮಾಡಬಹುದು. ನ್ಯಾಯಾಲಯದಲ್ಲಿನ ನ್ಯಾಯವಾದಿಗಳ ಸಂಘಟನೆಗಳೂ ಕೂಡ ಹೆಚ್ಚಾಗಿ ಮುಸ್ಲಿಮರ ಪರವಾಗಿರುತ್ತವೆ. ಯಾವುದೇ ಗುಂಪು ಇಂತಹ ಬಲವಾದ ಸಿದ್ಧಾಂತದ ವಿರುದ್ಧ ಮಾತನಾಡುತ್ತಿಲ್ಲ. ಈ ಪರಿಸ್ಥಿತಿಯು ‘ಅತ್ಯಂತ ಅಪಾಯಕಾರಿ’ ಎಂದು ಈ ವರದಿಯಲ್ಲಿ ಹೇಳಲಾಗಿದೆ. ಈ ವರದಿಯಲ್ಲಿ ಅಲ್ಪಸಂಖ್ಯಾತರನ್ನು ಸಿಲುಕಿಸುವ ಪ್ರಕರಣಗಳ ತನಿಖೆಗಾಗಿ ಸ್ವತಂತ್ರ ಆಯೋಗವನ್ನು ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ. ಮದರಸಾಗಳ ಮೇಲೆ ನಿಯಂತ್ರಣ ಇಡುವಂತೆ ಮನವಿ ಮಾಡಲಾಗಿದೆ; ಏಕೆಂದರೆ ಮದರಸಾಗಳು ಅಪ್ರಾಪ್ತ ಹೆಣ್ಣುಮಕ್ಕಳ ಮತಾಂತರದಲ್ಲಿ ಭಾಗಿಯಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಅಮೇರಿಕಾದ ‘ಸೆಂಟರ್ ಫಾರ್ ದ ಸ್ಟಡಿ ಆಫ್ ಆರ್ಗನೈಸ್ಡ್ ಹೇಟ್’ ವರದಿಯಲ್ಲಿ ಪಾಕಿಸ್ತಾನದಲ್ಲಿ ಹಿಂದೂ, ಸಿಖ್, ಕ್ರೈಸ್ತ, ಅಹ್ಮದಿ ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಲಾಗುತ್ತಿದೆ ಎಂದು ತಿಳಿಸಲಾಗಿದೆ.
ಸಂಪಾದಕೀಯ ನಿಲುವುಈ ಬಗ್ಗೆ ಪಾಕಿಸ್ತಾನವನ್ನು ಯಾರೂ ಪ್ರಶ್ನಿಸುವುದಿಲ್ಲ, ಆದರೆ ಭಾರತದಲ್ಲಿ ಯಾರಾದರೂ ಮುಸ್ಲಿಮರು ಹಿಂದೂ ಧರ್ಮಕ್ಕೆ ಮರಳಿದರೆ ದೊಡ್ಡ ರಾದ್ದಾಂತ ಮಾಡಲಾಗುತ್ತದೆ. |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ