ಟ್ರಂಪ್‌ರವರ ಮುಖ್ಯ ವ್ಯಾಪಾರ ಸಲಹೆಗಾರ ಪೀಟರ್ ನವಾರೋರವರ ಆಕ್ರೋಶ!

ವಾಷಿಂಗ್ಟನ್ (ಅಮೆರಿಕಾ) – ಟ್ರಂಪ್‌ರವರ ವ್ಯಾಪಾರ ಸಲಹೆಗಾರ ಪೀಟರ್ ನವಾರೋ ಅವರು ರಷ್ಯಾ-ಉಕ್ರೇನ್ ಯುದ್ಧವನ್ನು ‘ಮೋದಿ ವಾರ್’ ಎಂದು ಕರೆದಿದ್ದಾರೆ. ‘ಬ್ಲೂಮ್‌ಬರ್ಗ್ ಟೆಲಿವಿಷನ್’ಗೆ ನೀಡಿದ ಸಂದರ್ಶನದಲ್ಲಿ ನವಾರೋ ಅವರು, ಭಾರತ ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿಸಿ, ಅದನ್ನು ಶುದ್ಧೀಕರಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತದೆ. ಇದರಿಂದ ರಷ್ಯಾಗೆ ಯುದ್ಧಕ್ಕೆ ಹಣ ಸಿಗುತ್ತದೆ ಮತ್ತು ಅದರ ಮೂಲಕ ಅದು ಉಕ್ರೇನ್ ಮೇಲೆ ದಾಳಿ ಮಾಡುತ್ತದೆ. ಆಗ ಉಕ್ರೇನ್ ನಮ್ಮ ಮತ್ತು ಯುರೋಪ್ ಕಡೆಗೆ ಬರುತ್ತದೆ. ಅದು ನಮಗೆ ಹೆಚ್ಚು ಹಣ ನೀಡಿ ಎಂದು ಹೇಳುತ್ತದೆ. ಈ ರೀತಿ ಅಮೆರಿಕಾದ ತೆರಿಗೆದಾರರು ನಷ್ಟವನ್ನು ಅನುಭವಿಸಬೇಕಾಗುತ್ತದೆ. (ಇದರ ಅರ್ಥ ಭಾರತೀಯ ಆರ್ಥಿಕತೆಗೆ ಹಾನಿಯಾದರೂ ಪರವಾಗಿಲ್ಲ, ಆದರೆ ಅಮೆರಿಕಾ ನಾಗರಿಕರ ಹಾನಿ ಆಗಬಾರದು! – ಸಂಪಾದಕರು) ನವಾರೋ ಅವರ ಈ ಹೇಳಿಕೆ, ಅಮೆರಿಕಾ ಭಾರತೀಯ ವಸ್ತುಗಳ ಮೇಲೆ 50% ಆಮದು ಸುಂಕ ವಿಧಿಸಿರುವ ಸಮಯದಲ್ಲಿ ಬಂದಿದೆ. ಇದರಿಂದ ಭಾರತದ ಅಮೆರಿಕಾಗೆ ಆಗುವ ಒಟ್ಟು ರಫ್ತಿನ 66% ರಷ್ಟು ರಫ್ತಿನ ಮೇಲೆ ಪರಿಣಾಮ ಬೀರಬಹುದು.
🚨 Trump’s Trade Counselor Peter Navarro throws a tantrum; calls the Russia–Ukraine war a “Modi War”!
🇨🇳 China takes 47% of Russia’s oil exports
🇮🇳 India takes 38%👉 Yet America blames ONLY India!
US has now crossed all limits with its double standards.#ModiWar #USHypocrisy… pic.twitter.com/i0ieVOoDir
— Sanatan Prabhat (@SanatanPrabhat) August 28, 2025
ಪೀಟರ್ ನವಾರೋ ಅವರು ಮಂಡಿಸಿದ ಅಂಶಗಳು!
1. ಭಾರತ, ನೀವು ಸರ್ವಾಧಿಕಾರಿಗಳನ್ನು (ಚೀನಾ ಮತ್ತು ರಷ್ಯಾ ಮುಖ್ಯಸ್ಥರು) ಭೇಟಿಯಾಗುತ್ತಿದ್ದೀರಿ. ಚೀನಾ ‘ಅಕ್ಸಾಯ್ ಚಿನ್’ ಮತ್ತು ನಿಮ್ಮ ಅನೇಕ ಪ್ರದೇಶಗಳನ್ನು ವಶಪಡಿಸಿಕೊಂಡಿದೆ. ಮತ್ತು ರಷ್ಯಾ? ಅದನ್ನು ಮರೆತುಬಿಡಿ. ಅದು ನಿಮ್ಮ ಮಿತ್ರನಲ್ಲ!
2. ಮೋದಿ ಒಬ್ಬ ಶ್ರೇಷ್ಠ ನಾಯಕ. ಭಾರತ ಒಂದು ಪ್ರಜಾಪ್ರಭುತ್ವ ದೇಶ, ಆದರೂ ಅದು ನಮ್ಮನ್ನು ನಿರ್ಲಕ್ಷಿಸಿ ನಾವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸುವುದಿಲ್ಲ ಎಂದು ಹೇಳುತ್ತದೆ. ಇದರ ಅರ್ಥವೇನು?
3. ಭಾರತ ಪ್ರತಿದಿನ ರಷ್ಯಾದಿಂದ 15 ಲಕ್ಷ ಬ್ಯಾರೆಲ್ ತೈಲ ಖರೀದಿಸುತ್ತಿದೆ, ಇದು ಉಕ್ರೇನ್ ಜನರನ್ನು ಕೊಲ್ಲಲು ಶಸ್ತ್ರಾಸ್ತ್ರ, ಡ್ರೋನ್ ಮತ್ತು ಬಾಂಬ್ ಖರೀದಿಸಲು ಸಾಕಾಗುತ್ತದೆ.
‘ಭಾರತ ವ್ಯಾಪಾರದಲ್ಲಿ ವಂಚನೆ ಮಾಡುತ್ತದೆ!’ – (ಅಂತೆ) ನವಾರೋ

ಸುಂಕ ಹೆಚ್ಚಳವನ್ನು ಸಮರ್ಥಿಸಿಕೊಳ್ಳುತ್ತಾ, ನವಾರೋ ಅವರು ಭಾರತೀಯ ವ್ಯಾಪಾರ ನೀತಿಗಳನ್ನು ಅನ್ಯಾಯದಾಯಕ ಎಂದು ಕರೆದಿದ್ದಾರೆ. ಅವರು, ಭಾರತ ವ್ಯಾಪಾರದಲ್ಲಿ ನಮಗೆ ವಂಚನೆ ಮಾಡಿದೆ. ಇದಕ್ಕಾಗಿ ಅದರ ಮೇಲೆ 25% ಸುಂಕ ವಿಧಿಸಲಾಗಿದೆ. ನಂತರ ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಹೆಚ್ಚುವರಿ 25% ಸುಂಕ ವಿಧಿಸಲಾಗಿದೆ.
ಸಂಪಾದಕೀಯ ನಿಲುವು
|
ಬಾಂಗ್ಲಾದೇಶ: ಸೆರೆಮನೆಯಲ್ಲಿರುವ ಚಿನ್ಮಯ್ ಪ್ರಭು ಅವರ ಜೀವಕ್ಕೆ ಅಪಾಯ!
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara