‘ಚಾಮುಂಡೇಶ್ವರಿ ದೇವಿಯು ಕೇವಲ ಹಿಂದೂಗಳಿಗೆ ಸೇರಿದ್ದಲ್ಲ!’ – ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿವಾದಾತ್ಮಕ ಹೇಳಿಕೆ

ಬೆಂಗಳೂರು – ಚಾಮುಂಡೇಶ್ವರಿ ದೇವಿ ಕೇವಲ ಹಿಂದೂಗಳಿಗೆ ಸೇರಿದ್ದಲ್ಲ. ದಸರಾ ಧಾರ್ಮಿಕ ಹಬ್ಬವಲ್ಲ, ಅದು ಸಾಂಸ್ಕೃತಿಕ ಹಬ್ಬವಾಗಿದೆ. (ದಸರಾ ಧರ್ಮದ ವಿಜಯದ ಸಂಕೇತವಾಗಿದೆ, ಅಂದರೆ ಸನಾತನ ಧರ್ಮದ ವಿಜಯದ ಸಂಕೇತವಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! – ಸಂಪಾದಕರು) ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದರೆ ತಪ್ಪೇನು? ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಲೇಖಕಿ ಬಾನು ಮುಷ್ತಾಕ್ ಅವರನ್ನು ಮಾಡಿದ ಆಯ್ಕೆಗೆ ಭಾಜಪ ವಿರೋಧಿಸಿದ್ದರಿಂದ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಶಿವಕುಮಾರ್ ಅವರು ಮಾತು ಮುಂದುವರೆಸಿ,

೧. ಚಾಮುಂಡಿ ಬೆಟ್ಟ, ಚಾಮುಂಡಿದೇವಿ ಎಲ್ಲ ಧರ್ಮಗಳಿಗೂ ಸೇರಿದ್ದು. ಎಲ್ಲ ಸಮುದಾಯದ ಜನರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತಾರೆ. ಅದು ಅವರ ಶ್ರದ್ಧೆಯಾಗಿದೆ. ನಾವು ಮಸೀದಿ, ಚರ್ಚ್, ಜೈನ ಮಂದಿರ, ಗುರುದ್ವಾರಗಳಿಗೆ ಹೋಗುತ್ತೇವೆ. ಗುರುದ್ವಾರಕ್ಕೆ ಹೋಗುವುದು ತಪ್ಪೇ? ಹಾಗಾದರೆ ಇತರ ಧರ್ಮದವರು ಹಿಂದೂ ದೇವಸ್ಥಾನಕ್ಕೆ ಹೋದರೆ ಯಾಕೆ ವಿರೋಧ?

೨. ಅನೇಕ ಹಿಂದೂಗಳು ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲವೇ? (ಹಿಂದೂಗಳನ್ನು ಖಡ್ಗದ ಬಲದಿಂದ ಮತಾಂತರಗೊಳಿಸಲಾಗಿದೆ ಎಂಬುದು ಇತಿಹಾಸವಾಗಿದೆ. ದೌರ್ಜನ್ಯವೆಸಗಿದ ಮುಸ್ಲಿಂ ಆಕ್ರಮಣಕಾರರು ಹಿಂದೂಗಳನ್ನು ಮತಾಂತರಗೊಳಿಸಿದರು. ಹಾಗಾಗಿ ಅರ್ಧ ಸತ್ಯ ಹೇಳಿ ಸಮಾಜದ ಬುದ್ಧಿಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರನ್ನು ಖಂಡಿಸಿ! – ಸಂಪಾದಕರು) ಕೆಲವು ಹಿಂದೂ ಸಂಪ್ರದಾಯಗಳನ್ನು ಮುಸ್ಲಿಮರು ಅನುಸರಿಸುವುದಿಲ್ಲವೇ? (ಹಿಂದೂಗಳು ಮುಸ್ಲಿಮರ ಸಂಪ್ರದಾಯಗಳನ್ನು ಅನುಸರಿಸಬೇಕು ಎಂದು ಇದರರ್ಥ ಎಲ್ಲಿದೆ? – ಸಂಪಾದಕರು) ಇದೆಲ್ಲ ರಾಜಕೀಯವಾಗಿದೆ. ಹಾಗಾದರೆ ಬೆಟ್ಟ ಏರಲು ಏನು ಅಭ್ಯಂತರ? ಉದ್ಘಾಟಿಸಲು ಏನು ಅಭ್ಯಂತರ? ಎಂದು ಉಪಮುಖ್ಯಮಂತ್ರಿ ಶಿವಕುಮಾರ್ ಮರುಪ್ರಶ್ನಿಸಿದ್ದಾರೆ. (ಹಿಂದೂಗಳಿಗೆ ಅಭ್ಯಂತರವಿದೆ! – ಸಂಪಾದಕರು) ಅಯೋಧ್ಯೆಗೆ ಕೇವಲ ಹಿಂದೂಗಳು ಮಾತ್ರ ಬರಬೇಕು ಎಂದು ಬೋರ್ಡ್ ಎಲ್ಲಿದೆ? (ಗೋಮಾಂಸ ತಿನ್ನುವವರು ಮತ್ತು ವಿಗ್ರಹಾರಾಧನೆ ಮಾಡದವರು ಹಿಂದೂ ದೇವಸ್ಥಾನದಲ್ಲಿ ಏನು ಕೆಲಸ? – ಸಂಪಾದಕರು)

ನೀವು (ಕಾಂಗ್ರೆಸ್ಸಿಗರು) ಒಂದೇ ಕುಟುಂಬವನ್ನು ನಿಮ್ಮ ದೇವರನ್ನಾಗಿ ಸ್ವೀಕರಿಸಿದ್ದೀರಿ! – ಸಂಸದ ಯದುವೀರ ಒಡೆಯರ್

ಚಾಮುಂಡಿ ಬೆಟ್ಟ ಎಲ್ಲ ಧರ್ಮ ಮತ್ತು ಸಮುದಾಯಗಳಿಗೆ ತೆರೆದಿದೆ. ದೇವಿಯನ್ನು ಪೂಜಿಸುವ, ಅವಳಲ್ಲಿ ವಿಶ್ವಾಸವಿಟ್ಟಿರುವ ಮತ್ತು ಅವಳನ್ನು ಗೌರವಿಸುವ ಜನರು ಎಲ್ಲ ಜಾತಿ ಮತ್ತು ಧರ್ಮಗಳಲ್ಲಿ ಇದ್ದಾರೆ; ಆದರೆ ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠವಾಗಿದೆ. ಚಾಮುಂಡೇಶ್ವರಿ ದೇವಿ ಹಿಂದೂಗಳ ದೇವಿ ಮತ್ತು ಅವಳ ಉಲ್ಲೇಖ ಹಿಂದೂ ಧರ್ಮಗ್ರಂಥವಾದ ಮಾರ್ಕಂಡೇಯ ಪುರಾಣದ ‘ದೇವಿ ಮಹಾತ್ಮೆ’ದಲ್ಲಿದೆ, ಬೇರೆ ಯಾವುದೇ ಧರ್ಮಗ್ರಂಥಗಳಲ್ಲಿ ಇಲ್ಲ. ಇಲ್ಲಿ ಪ್ರತಿದಿನ ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಪೂಜೆ ಮತ್ತು ಸಂಪ್ರದಾಯಗಳು ನಡೆಯುತ್ತವೆ.

ಇಲ್ಲಿಗೆ ಬರುವ ಎಲ್ಲರೂ ಅವಳನ್ನು ಹಿಂದೂ ದೇವಿ ಎಂದೇ ಪೂಜಿಸುತ್ತಾರೆ. ದಸರಾ ನಮ್ಮ ದೇಶದ ಅತಿದೊಡ್ಡ ಸಾಂಸ್ಕೃತಿಕ ಹಬ್ಬವಾಗಿದೆ. ಎಲ್ಲ ಧರ್ಮದ ಜನರು ಇದರಲ್ಲಿ ಭಾಗವಹಿಸಬಹುದು; ಆದರೆ ಮೂಲತಃ ಇದು ಒಂದು ಹಿಂದೂ ಹಬ್ಬವಾಗಿದೆ. ಇದರ ದಿನಾಂಕವನ್ನು ಹಿಂದೂ ಪಂಚಾಂಗದ ಪ್ರಕಾರ ನಿರ್ಧರಿಸಲಾಗುತ್ತದೆ. ಇದು ಯಾರ ಇಚ್ಛೆ ಅಥವಾ ಭಾವನೆಗಳಿಗೆ ಅನುಗುಣವಾಗಿ ಬದಲಾಯಿಸಬಹುದಾದ ಹಬ್ಬವಲ್ಲ. ನೀವು ಒಂದೇ ಕುಟುಂಬವನ್ನು ನಿಮ್ಮ ದೇವರನ್ನಾಗಿ ಸ್ವೀಕರಿಸಿದ್ದೀರಿ. ಇಂತಹ ಪರಿಸ್ಥಿತಿಯಲ್ಲಿ, ನೀವು ದೇವಿಯ ಹಿಂದೂ ಸ್ವರೂಪ ಮತ್ತು ದಸರಾದ ಧಾರ್ಮಿಕ ಪರಂಪರೆಯನ್ನು ತಿರಸ್ಕರಿಸುವ ಧೈರ್ಯ ಮಾಡಬೇಡಿ. ನಾವು ರಾಜಕೀಯ ಮಾಡುತ್ತಿಲ್ಲ. ನೀವು ಓಲೈಕೆ ರಾಜಕಾರಣಕ್ಕಾಗಿ ನಮ್ಮ ಧರ್ಮದ ಮೇಲೆ ಆಕ್ರಮಣ ಮಾಡಿದಾಗ, ನಾವು ಅದನ್ನು ರಕ್ಷಿಸಲು ನಿಂತಿದ್ದೇವೆ, ಎಂದು ಮೈಸೂರಿನ ಭಾಜಪ ಸಂಸದ ಶ್ರೀ. ಯದುವೀರ ಒಡೆಯರ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಸರ್ವಧರ್ಮ ಸಮಭಾವದ ಹೆಸರಿನಲ್ಲಿ ಕಾಂಗ್ರೆಸ್ ಈಗ ಹಿಂದೂ ದೇವರುಗಳನ್ನು ‘ಜಾತ್ಯತೀತ’ಗೊಳಿಸಲು ಹೊರಟಿದೆ! ಹಿಂದೂಗಳು ಈ ದುಷ್ಟ ಸೈದ್ಧಾಂತಿಕ ಭಯೋತ್ಪಾದನೆಯನ್ನು ತೀವ್ರವಾಗಿ ವಿರೋಧಿಸಬೇಕು!
  • ‘ಅಲ್ಲಾ ಇಸ್ಲಾಂ ಅನ್ನು ಅನುಸರಿಸದವರ ಸ್ವತ್ತು’ ಎಂದು ಡಿ.ಕೆ. ಶಿವಕುಮಾರ್ ಏಕೆ ಹೇಳುವುದಿಲ್ಲ ಮತ್ತು ಈದ್ ದಿನದಂದು ಮುಸ್ಲಿಮರು ಆಯೋಜಿಸಿದ ಕಾರ್ಯಕ್ರಮದ ಉದ್ಘಾಟನೆಗೆ ಪ್ರಖರ ಹಿಂದೂಗಳನ್ನು ಆಹ್ವಾನಿಸುವ ಧೈರ್ಯವನ್ನು ಏಕೆ ತೋರಿಸುವುದಿಲ್ಲ?
  • ಹಿಂದೂ ದೇವರುಗಳ ಬಗ್ಗೆ ಮಾತನಾಡಲು ಜಾತ್ಯತೀತ ಕಾಂಗ್ರೆಸ್‌ಗೆ ಯಾರು ಅಧಿಕಾರ ಕೊಟ್ಟಿದ್ದಾರೆ? ಈ ಆಘಾತವನ್ನು ಹಿಮ್ಮೆಟ್ಟಿಸಲು ಈಗ ಶಂಕರಾಚಾರ್ಯರು, ಧರ್ಮಾಚಾರ್ಯರು ಮತ್ತು ಸಂತರು ಹಿಂದೂಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಅವರ ಚರಣಗಳಲ್ಲಿ ಹಿಂದೂಗಳ ಪ್ರಾರ್ಥನೆಯಾಗಿದೆ !