ಅತ್ಯಾಚಾರದ ನಂತರದ ಕೊಲೆಗಳಿಗಿಂತಲೂ ವರದಕ್ಷಿಣೆ ಕಿರುಕುಳದಿಂದಲೇ ಮಹಿಳೆಯರ ಸಾವು ಹೆಚ್ಚು! – Dowry Harassment Case

ನವದೆಹಲಿ – ಇತ್ತೀಚೆಗೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ 28 ವರ್ಷದ ನಿಕ್ಕಿ ಭಾಟಿ ಇವರನ್ನು ವರದಕ್ಷಿಣೆಗಾಗಿ ಅವರ ಅತ್ತೆಯ ಮನೆಯವರು ಜೀವಂತವಾಗಿ ಸುಟ್ಟಿದ್ದಾರೆ. ಈ ಘಟನೆಯ ನಂತರ, ಮಹಿಳೆಯರ ಮೇಲಿನ ಅಪರಾಧಗಳ ಕುರಿತು ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗವು ಅಂಕಿಅಂಶಗಳನ್ನು ಪ್ರಕಟಿಸಿದೆ. ಅದರ ಪ್ರಕಾರ, 2022 ರಲ್ಲಿ ಭಾರತದಲ್ಲಿ ವರದಕ್ಷಿಣೆಗಾಗಿ ನಡೆದ ಹಿಂಸೆಯಿಂದ 6 ಸಾವಿರ516 ಮಹಿಳೆಯರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆಯು ಬಲಾತ್ಕಾರದ ನಂತರ ಅಥವಾ ಸಾಮೂಹಿಕ ಬಲಾತ್ಕಾರದ ನಂತರ ನಡೆದ ಕೊಲೆಗಳಿಗಿಂತ 25 ಪಟ್ಟು ಅಧಿಕವಾಗಿದೆ.

1. 2022 ರ ವರದಿಯ ಪ್ರಕಾರ, ವರದಕ್ಷಿಣೆಗಾಗಿ ಹಿಂಸೆ ನಡೆದ 13 ಸಾವಿರದ 641 ಪ್ರಕರಣಗಳು ದಾಖಲಾಗಿವೆ. ಪ್ರತ್ಯಕ್ಷವಾಗಿ ದೇಶಾದ್ಯಂತ ಪ್ರತಿಯೊಂದು ಪ್ರಕರಣವನ್ನು ದಾಖಲಿಸಿದ್ದರೆ, ಮಹಿಳೆಯರ ಸಾವಿನಲ್ಲಿ ಸುಮಾರು ಮೂರನೇ ಒಂದು ಭಾಗವು ವರದಕ್ಷಿಣೆಯಿಂದಲೇ ಸಂಭವಿಸುತ್ತಿದೆ ಎಂದು ಸ್ಪಷ್ಟವಾಗುತ್ತಿತ್ತು.

2. ವರದಕ್ಷಿಣೆಗಾಗಿ ನಡೆದ ಹತ್ಯೆಯ ಪ್ರಕರಣಗಳಲ್ಲಿ ನ್ಯಾಯ ಸಿಗುವ ವೇಗ ಬಹಳ ಕಡಿಮೆಯಾಗಿದೆ. 2022 ರ ಅಂತ್ಯದ ವೇಳೆಗೆ, ದೇಶದ ನ್ಯಾಯಾಲಯಗಳಲ್ಲಿ ವರದಕ್ಷಿಣೆಗಾಗಿ ನಡೆದ ಹತ್ಯೆಗಳ 60 ಸಾವಿರ 577 ಪ್ರಕರಣಗಳು ಬಾಕಿ ಇದ್ದವು. ಅವುಗಳಲ್ಲಿ 54 ಸಾವಿರದ 416 ಪ್ರಕರಣಗಳು 2022 ಕ್ಕಿಂತ ಮೊದಲಿನವು. 2022 ರಲ್ಲಿ, 3 ಸಾವಿರದ 689 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿತು. ಅವುಗಳಲ್ಲಿ ಕೇವಲ ಶೇ.33  ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಯಿತು. ಅದೇ ವರ್ಷ, ವರದಕ್ಷಿಣೆಗಾಗಿ ನಡೆದ ಹಿಂಸೆಯ 6 ಸಾವಿರ 161 ಪ್ರಕರಣಗಳ ವಿಚಾರಣೆ ನಡೆಯಿತು; ಆದರೆ ಕೇವಲ 99 ಪ್ರಕರಣಗಳಲ್ಲಿ ಅಪರಾಧ ಸಾಬೀತಾಯಿತು.

ಸಂಪಾದಕೀಯ ನಿಲುವು

ವರದಕ್ಷಿಣೆ ವಿರುದ್ಧ ಈಗ ಗಲ್ಲು ಶಿಕ್ಷೆ ವಿಧಿಸುವ ಕಾನೂನು ಮಾಡುವುದು ಅವಶ್ಯಕವಾಗಿದೆ!