ಗೋಹತ್ಯೆಯಿಂದ ಜನರ ಭಾವನೆಗಳಿಗೆ ಧಕ್ಕೆಯಾಗಿ ಸಮಾಜದ ಶಾಂತಿ ಕದಡಬಹುದು! – ಪಂಜಾಬ್-ಹರಿಯಾಣ ಉಚ್ಚ ನ್ಯಾಯಾಲಯ Punjab Haryana High Court Order

ಚಂಡೀಗಢ – ಗೋಹತ್ಯೆ ಅಪರಾಧವು ಕೇವಲ ಕಾನೂನಿಗೆ ಸೀಮಿತವಲ್ಲ, ಇದು ಭಾವನಾತ್ಮಕ ಮತ್ತು ಸಾಂಸ್ಕೃತಿಕ ಅಂಶಗಳೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ಭಾರತೀಯ ಸಮಾಜದಲ್ಲಿ ಗೋವಿಗೆ ಒಂದು ವಿಶಿಷ್ಟ ಸ್ಥಾನವಿದೆ. ಬಹುಸಂಸ್ಕೃತಿಗಳಿರುವ ಸಮಾಜದಲ್ಲಿ ಕೆಲವು ವೈಯಕ್ತಿಕ ಕೃತಿಗಳು ಜನರ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದರೆ ಸಮಾಜದ ಶಾಂತಿಯನ್ನು ಕದಡಬಹುದು ಎಂದು ಪಂಜಾಬ್-ಹರಿಯಾಣ ಉಚ್ಚ ನ್ಯಾಯಾಲಯವು ಒಂದು ವಿಚಾರಣೆಯ ಸಮಯದಲ್ಲಿ ಹೇಳಿದೆ. ಈ ಪ್ರಕರಣದಲ್ಲಿ ಆಸಿಫ್ ಸೇರಿದಂತೆ ಕೆಲವು ವ್ಯಕ್ತಿಗಳ ಮೇಲೆ ರಾಜಸ್ಥಾನದಲ್ಲಿ ಗೋಹತ್ಯೆ ಮಾಡಿದ ಆರೋಪವಿತ್ತು. ಈ ಘಟನೆಯು ಹರಿಯಾಣ ಗೋವುಗಳ ಸಂರಕ್ಷಣಾ ಕಾಯಿದೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕಾಯಿದೆಗೆ ವಿರುದ್ಧವಾಗಿತ್ತು.

೧. ನ್ಯಾಯಾಲಯವು, ಆರೋಪಿಯು ಉದ್ದೇಶಪೂರ್ವಕವಾಗಿ ಅಸ್ತಿತ್ವದಲ್ಲಿರುವ ಕಾನೂನನ್ನು ಉಲ್ಲಂಘಿಸಿ ಸಮಾಜದ ಭಾವನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾನೆ ಎಂದು ಗಮನಿಸಿದೆ. ಆದ್ದರಿಂದ ಅವನಿಗೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ.

೨. ಈ ಆರೋಪಿಯು ಇದೇ ಮೊದಲ ಬಾರಿಗೆ ಇಂತಹ ಅಪರಾಧದಲ್ಲಿ ಭಾಗಿಯಾಗಿಲ್ಲ ಎಂಬುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಅವನ ವಿರುದ್ಧ ಈಗಾಗಲೇ ಇದೇ ರೀತಿಯ ಮೂರು ಅಪರಾಧಗಳು ದಾಖಲಾಗಿವೆ. ಆ ಪ್ರಕರಣಗಳಲ್ಲಿ ಅವನಿಗೆ ವಿಶ್ವಾಸದ ಆಧಾರದ ಮೇಲೆ ಜಾಮೀನು ದೊರಕಿತ್ತು, ಆದರೆ ಅವನು ಆ ವಿಶ್ವಾಸವನ್ನು ಗೌರವಿಸುವ ಬದಲು ದುರುಪಯೋಗಪಡಿಸಿಕೊಂಡಿದ್ದಾನೆ.

೩. ನ್ಯಾಯಾಲಯವು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ ೪೮೨ ರ ಅಡಿಯಲ್ಲಿ ನೀಡಲಾಗುವ ರಕ್ಷಣೆಯು ಕಾನೂನನ್ನು ನಿರಂತರವಾಗಿ ಉಲ್ಲಂಘಿಸುವವರಿಗೆ ಆಶ್ರಯ ತಾಣವಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮಧ್ಯಂತರ ಜಾಮೀನು ಅಮಾಯಕ ವ್ಯಕ್ತಿಗಳನ್ನು ಅನ್ಯಾಯದ ಬಂಧನದಿಂದ ರಕ್ಷಿಸಲು ಉದ್ದೇಶಿಸಿದೆ, ಅಪರಾಧಿಗಳಿಗೆ ಪದೇ ಪದೇ ಕಾನೂನು ಉಲ್ಲಂಘಿಸಲು ಅವಕಾಶ ನೀಡಲು ಅಲ್ಲ. ಸ್ವಾತಂತ್ರ್ಯ ಮತ್ತು ನ್ಯಾಯದ ನಡುವೆ ಸಮತೋಲನ ಸಾಧಿಸಲು ಮಧ್ಯಂತರ ಜಾಮೀನು ಎಚ್ಚರಿಕೆಯಿಂದ ಬಳಸುವ ಅಧಿಕಾರವಾಗಿದೆ. ಆರೋಪಿಯ ಮೇಲೆ ಗಂಭೀರ ಮತ್ತು ನೈತಿಕ ಪತನಕ್ಕೆ ಸಂಬಂಧಿಸಿದ ಆರೋಪಗಳಿವೆ ಮತ್ತು ಅವನು ಒಬ್ಬ ನುರಿತ ಅಪರಾಧಿಯಂತೆ ಕಾಣುತ್ತಾನೆ. ಭವಿಷ್ಯದಲ್ಲಿಯೂ ಅವನು ಇಂತಹ ದುಷ್ಕೃತ್ಯಗಳನ್ನು ಮಾಡಬಹುದು ಅಥವಾ ತನಿಖೆಗೆ ಅಡ್ಡಿಪಡಿಸಬಹುದು ಎಂಬ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದ್ದರಿಂದ ಅವನ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಸಂಪಾದಕೀಯ ನಿಲುವು

ಇದರಿಂದಾಗಿ ಇಡೀ ದೇಶದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಗೆ ತರುವುದು ಅವಶ್ಯಕವಾಗಿದೆ. ಭಾರತಕ್ಕೆ ಆಕ್ರಮಣಕಾರಿ ಮುಸ್ಲಿಮರು ಮತ್ತು ಬ್ರಿಟಿಷರು ಬರುವ ಮೊದಲು ಗೋಹತ್ಯೆ ನಡೆಯುತ್ತಿರಲಿಲ್ಲ ಎಂಬುದನ್ನು ಗಮನದಲ್ಲಿಡಬೇಕು!