|

ವಾಷಿಂಗ್ಟನ್ (ಅಮೆರಿಕ) – ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್ 25 ರಂದು, ‘ಚೀನಾವು ಅಮೆರಿಕಾಗೆ ವಾಹನ, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ಉದ್ಯಮಗಳಿಗೆ ಅಗತ್ಯವಿರುವ ಮ್ಯಾಗ್ನೆಟ್‌ಗಳನ್ನು (ಕಾಂತ) ನೀಡದಿದ್ದರೆ, ನಾವು ಚೀನಾದ ಮೇಲೆ ಶೇಕಡ 200 ರಷ್ಟು ಆಮದು ಸುಂಕವನ್ನು ವಿಧಿಸುತ್ತೇವೆ. ಚೀನಾ ನಮಗೆ ಮ್ಯಾಗ್ನೆಟ್ ನೀಡಲೇಬೇಕು.’ ಟ್ರಂಪ್ ಅವರು ಅಮೆರಿಕಾದ ಸರಕಾರದ ಮುಖ್ಯ ಕಚೇರಿ ವೈಟ್ ಹೌಸ್‌ನಲ್ಲಿ ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೆ ಮ್ಯುಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದಾಗ ಮಾತನಾಡುತ್ತಿದ್ದರು.
🚨 Trump warns China again!
🇺🇸 “No magnets, then 200% import duty.”
⚡ Claims he holds cards that could destroy China.
🔹 Current tariff: 30% (10% + 20% over fentanyl supply)
🔹 Deadline extended by 90 days (was Aug 12).#Trump #ChinaTariffs #Geopolitics pic.twitter.com/JPtUiZkCdc
— Sanatan Prabhat (@SanatanPrabhat) August 26, 2025
ಟ್ರಂಪ್ ಅವರು ಮಾತು ಮುಂದುವರೆಸಿ, ಅಮೆರಿಕವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳುತ್ತದೆ. ನಮ್ಮಲ್ಲಿ ಚೀನಾವನ್ನು ನಾಶ ಮಾಡಲು ಸಾಧ್ಯವಿರುವಂತಹ ಕಾರ್ಡ್‌ಗಳಿವೆ; ಆದರೆ ನಾವು ಅದನ್ನು ಮಾಡುವುದಿಲ್ಲ. ಚೀನಾ ಬಳಿಯೂ ಕೆಲವು ಕಾರ್ಡ್‌ಗಳಿವೆ; ಆದರೆ ನಮ್ಮ ಬಳಿ ಉತ್ತಮ ಕಾರ್ಡ್‌ಗಳಿವೆ.
ಪ್ರಸ್ತುತ ಚೀನಾದ ಮೇಲಿನ ಆಮದು ಸುಂಕ ಶೇಕಡ 30 ರಷ್ಟು ಇದೆ !
ಟ್ರಂಪ್ ಅವರು ಇತ್ತೀಚೆಗೆ ಚೀನಾಕ್ಕೆ ಆಮದು ಸುಂಕದ ಗಡುವನ್ನು 90 ದಿನಗಳವರೆಗೆ ವಿಸ್ತರಿಸಿದ್ದಾರೆ. ಇದಕ್ಕೂ ಮೊದಲು, ಗಡುವು ಆಗಸ್ಟ್ 12 ಆಗಿತ್ತು. ‘ಫೆಂಟಾನಿಲ್’ (ಹಾನಿಕಾರಕ ರಾಸಾಯನಿಕ) ಕಳುಹಿಸಿದ್ದಕ್ಕಾಗಿ ಅಮೆರಿಕಾವು ಚೀನಾದ ಮೇಲೆ ಶೇಕಡ 20 ರಷ್ಟು ಆಮದು ಸುಂಕವನ್ನು ವಿಧಿಸಿತ್ತು. ಮೂಲ ಸುಂಕವು ಶೇಕಡ 10 ರಷ್ಟು ಆಗಿದ್ದರಿಂದ, ಚೀನಾದ ಆಮದುಗಳ ಮೇಲಿನ ಅಮೆರಿಕಾದ ಒಟ್ಟು ಸುಂಕವು ಪ್ರಸ್ತುತ ಶೇಕಡ 30 ರಷ್ಟು ಆಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara