1971 ರ ದೌರ್ಜನ್ಯಗಳ ಬಗ್ಗೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಉದ್ವಿಗ್ನ ! – Pakistan Bangladesh Relations

ದೌರ್ಜನ್ಯದ ಸಮಸ್ಯೆ ಬಗೆಹರಿದಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಬಾಂಗ್ಲಾದೇಶ ತಿರಸ್ಕರಿಸಿದೆ!

ಬಾಂಗ್ಲಾದೇಶ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹೊಸೈನ್

ಢಾಕಾ (ಬಾಂಗ್ಲಾದೇಶ) – ಪ್ರಸ್ತುತ ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವ ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ಡಾರ್ ಅವರು 1971 ರಲ್ಲಿ ಪಾಕಿಸ್ತಾನ ಸೇನೆಯು ಬಾಂಗ್ಲಾದೇಶದವರ ಮೇಲೆ ಮಾಡಿದ ದೌರ್ಜನ್ಯಗಳ ಕುರಿತು ಪಾಕಿಸ್ತಾನ ಕ್ಷಮೆಯಾಚಿಸಬೇಕೆಂಬ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇಶಾಕ್ ಡಾರ್ ಅವರು ‘ಹೋಟೆಲ್ ಸೊನಾರ್ಗಾಂವ್’ನಲ್ಲಿ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್ ಅವರನ್ನು ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡೂ ದೇಶಗಳ ನಡುವಿನ ಬಾಕಿ ಇರುವ ಸಮಸ್ಯೆಗಳ ಬಗ್ಗೆ ಕೇಳಿದಾಗ, “ಎರಡು ದೇಶಗಳ ನಡುವಿನ ಮೊದಲ ಒಪ್ಪಂದವು 1974 ರಲ್ಲಿ ಆಗಿತ್ತು. ಆ ಸಮಯದ ದಾಖಲೆಗಳು ಎರಡೂ ದೇಶಗಳಿಗೆ ಐತಿಹಾಸಿಕವಾಗಿವೆ. ನಂತರ ಪಾಕಿಸ್ತಾನದ ಅಂದಿನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಇಲ್ಲಿಗೆ ಬಂದು ಬಹಿರಂಗವಾಗಿ ದೌರ್ಜನ್ಯದ ವಿಷಯವನ್ನು ಎತ್ತಿದರು. ಹೀಗಾಗಿ, ಈ ವಿಷಯವು ಎರಡು ಬಾರಿ ಬಗೆಹರಿದಿದೆ, ಒಮ್ಮೆ 1974 ರಲ್ಲಿ ಮತ್ತು ಇನ್ನೊಮ್ಮೆ 2000 ರ ದಶಕದ ಆರಂಭದಲ್ಲಿ!” ಎಂದು ಹೇಳಿದರು. ಡಾರ್ ಅವರ ಈ ಹೇಳಿಕೆಯನ್ನು ತೌಹಿದ್ ಹುಸೇನ್ ತಳ್ಳಿಹಾಕಿದ್ದಾರೆ. ಎರಡೂ ದೇಶಗಳು ಭವಿಷ್ಯದಲ್ಲಿ ಬಾಕಿ ಉಳಿದಿರುವ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚೆಯನ್ನು ಮುಂದುವರಿಸುತ್ತವೆ ಎಂದು ಅವರು ಹೇಳಿದರು. ಈ ಹೇಳಿಕೆಯು ಎರಡೂ ದೇಶಗಳ ನಡುವಿನ ಸಂಬಂಧ ಇನ್ನೂ ನಂಬಿಕೆಯಿಲ್ಲದ್ದೇ ಇದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

ಪಾಕಿಸ್ತಾನವು ಬಾಂಗ್ಲಾದೇಶದ ಬಳಿ ಕ್ಷಮೆಯಾಚನೆ ಬೇಕು!

ತೌಹಿದ್ ಹುಸೇನ್ ಮಾತನಾಡುತ್ತಾ, ಇಲ್ಲಿ ನಡೆದ ನರಮೇಧವನ್ನು ಪಾಕಿಸ್ತಾನ ಒಪ್ಪಿಕೊಳ್ಳಬೇಕು ಮತ್ತು ಕ್ಷಮೆಯಾಚಿಸಬೇಕು. ಹಾಗೆಯೇ, ಇಲ್ಲಿ ಸಿಕ್ಕಿಹಾಕಿಕೊಂಡಿರುವ ಜನರನ್ನು ಪಾಕಿಸ್ತಾನ ಹಿಂದಕ್ಕೆ ಕರೆಸಿಕೊಳ್ಳಬೇಕು. ನಾನು ಬಾಂಗ್ಲಾದೇಶದ ನಿಲುವನ್ನು ಸ್ಪಷ್ಟವಾಗಿ ಮತ್ತು ದೃಢವಾಗಿ ಮಂಡಿಸಿದ್ದೇನೆ. 54 ವರ್ಷಗಳಿಂದ ಬಾಕಿ ಉಳಿದಿರುವ ಸಮಸ್ಯೆಗಳು ಒಂದೇ ಸಭೆಯಲ್ಲಿ ಬಗೆಹರಿಯುತ್ತವೆ ಎಂದು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಇದು ಅಧಿಕೃತ ದ್ವಿಪಕ್ಷೀಯ ಸಭೆಯೂ ಆಗಿರಲಿಲ್ಲ. “ಒಂದು ಗಂಟೆ ಕುಳಿತುಕೊಂಡರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ” ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಈ ಸಮಸ್ಯೆಗಳು ಎರಡು ಬಾರಿ ಬಗೆಹರಿದಿದೆ ಎಂಬ ಡಾರ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಒಂದು ವೇಳೆ ನಾನು ಒಪ್ಪಿಕೊಂಡಿದ್ದರೆ, ಸಮಸ್ಯೆಯು ಈಗಾಗಲೇ ಬಗೆಹರಿಯುತ್ತಿತ್ತು. ನಾವು ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ ಮತ್ತು ಅವರು ತಮ್ಮ ನಿಲುವನ್ನು ಕಷ್ಟಪಡಿಸಿದ್ದಾರೆ.

ಸಂಪಾದಕೀಯ ನಿಲುವು

ಎರಡೂ ದೇಶಗಳು ಇಸ್ಲಾಮಿಕ್ ಆಗಿದ್ದರೂ ಭಾಷಾ ವ್ಯತ್ಯಾಸವಿರುವುದರಿಂದ ಅವುಗಳ ಸಂಬಂಧ ಎಂದಿಗೂ ಸೌಹಾರ್ದಯುತವಾಗಿರಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಅವುಗಳ ವಿಭಜನೆಯಾಯಿತು. ಪಾಕಿಸ್ತಾನದಲ್ಲಿಯೇ ಐದು ಪ್ರಾಂತ್ಯಗಳಿದ್ದು, ಅವುಗಳಲ್ಲಿ ಏಕತೆಯಿಲ್ಲ ಮತ್ತು ಪರಸ್ಪರ ಜಗಳವಾಡುತ್ತವೆ, ಹೀಗಿರುವಾಗ ಪಾಕಿಸ್ತಾನವು ಬಾಂಗ್ಲಾದೇಶದೊಂದಿಗೆ ಎಂದಾದರೂ ಉತ್ತಮ ಸಂಬಂಧವನ್ನು ಮತ್ತೆ ಬೆಸೆಯಲು ಸಾಧ್ಯವೇ?