ಹಿಂದೂಗಳ ಪ್ರತಿಭಟನೆಯ ನಂತರ, ಸರಪಂಚ ಸೇರಿ 4 ಜನರ ಬಂಧನ

ಫರೂಕಾಬಾದ್ (ಉತ್ತರ ಪ್ರದೇಶ) – ಚಿಂಗಟ್‌ಪುರ ಗ್ರಾಮದಲ್ಲಿ, ನೆರೆ ಸಂತ್ರಸ್ತರಿಗೆ ಸಹಾಯ ಮಾಡುವ ನೆಪದಲ್ಲಿ, ಸರಪಂಚ ಶಮಿ ಮಹಮ್ಮದ್ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನದಂದು ಮಾಂಸಾಹಾರಿ ಬಿರಿಯಾನಿ ವಿತರಿಸಿದರು. ಆ ದಿನ ಹಿಂದೂಗಳು ಉಪವಾಸ ಮಾಡುತ್ತಿದ್ದರು. ಊಟದಲ್ಲಿ ಮಾಂಸ ನೋಡಿದ ಜನರು ಆಕ್ರೋಶಗೊಂಡರು. ಗ್ರಾಮದ ಸುನಿಲ್ ಎಂಬವರು ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಈ ವಿಷಯ ಬಹಿರಂಗಪಡಿಸಿದರು. ನಂತರ, ಫರೂಕಾಬಾದ್ ಪೊಲೀಸರು ಶಮಿ ಮಹಮ್ಮದ್, ಅವರ ಪುತ್ರರಾದ ಸೈಫ್ ಮತ್ತು ತಾಲಿಬ್, ಹಾಗೂ ಮಹಮ್ಮದ್ ಸಾಮಿ ಅಲಿಯಾಸ್ ಮುಸ್ತಫಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 196 (ಧರ್ಮ, ಜಾತಿ ಅಥವಾ ಸಮುದಾಯಗಳ ನಡುವೆ ದ್ವೇಷ ಹರಡುವುದು), 352 (ಶಾಂತಿ ಭಂಗ) ಮತ್ತು 351 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಫರೂಕಾಬಾದ್ ಜಿಲ್ಲೆಯ ಗಂಗಾ ನದಿಯಲ್ಲಿ ಪ್ರವಾಹ ಬಂದ ಕಾರಣ, ಸುಮಾರು 50ಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿವೆ. ರಾಯಪುರ ಚಿಂಗಟ್‌ಪುರ ಗ್ರಾಮದಲ್ಲಿಯೂ ಪ್ರವಾಹದ ಪರಿಸ್ಥಿತಿಯಿದೆ.
ಇಂತಹ ಪರಿಸ್ಥಿತಿಯಲ್ಲಿ, ಚಿಂಗಟ್‌ಪುರ ಗ್ರಾಮದ ಸರಪಂಚ ಶಮಿ ಮಹಮ್ಮದ್ ಅವರು ನೆರೆ ಸಂತ್ರಸ್ತರಿಗೆ ಬಿರಿಯಾನಿ ಆಹಾರ ವಿತರಿಸಿದ್ದರು. ಈ ಬಿರಿಯಾನಿಯಲ್ಲಿ ಮಾಂಸ ಕಂಡುಬಂದಿದೆ. ನಂತರ, ಸುನಿಲ್ ಅವರು ಶಮಿ ಅವರಿಗೆ ದೂರವಾಣಿ ಕರೆ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಅದಾದ ನಂತರ ಅವರು ಈ ಘಟನೆಯ ವಿಡಿಯೋ ಮಾಡಿ ಪ್ರಸಾರ ಮಾಡಿದರು. ಇದರಿಂದ ಹಿಂದೂ ಮಹಾಸಭಾ, ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಬೀದಿಗಿಳಿದು ಪೊಲೀಸ್ ಠಾಣೆಯನ್ನು ಮುತ್ತಿಗೆ ಹಾಕಿದರು ಮತ್ತು ದೂರು ದಾಖಲಿಸಿದರು. ನಂತರ ಪೊಲೀಸರು ಕ್ರಮ ಕೈಗೊಂಡರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!