‘ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಪ್ರತಿ ಭಯೋತ್ಪಾದಕ ಕೇವಲ ಮುಸಲ್ಮಾನನೇ ಏಕೆ?'(ಅಂತೆ) Pakistan Blames India Terrorism United Nations Council

ಇಸ್ಲಾಂನ ಹೆಸರಿನಲ್ಲಿ ಭಯೋತ್ಪಾದಕರನ್ನು ರಕ್ಷಿಸಲು ಪಾಕಿಸ್ತಾನದ ಪ್ರಯತ್ನ

ನ್ಯೂಯಾರ್ಕ್ (ಅಮೆರಿಕಾ) – ವಿಶ್ವಸಂಸ್ಥೆಯ ಭಯೋತ್ಪಾದಕರ ಕುರಿತ ಪಟ್ಟಿಯ ಬಗ್ಗೆ ಪಾಕಿಸ್ತಾನ ಪ್ರಶ್ನೆಗಳನ್ನು ಎತ್ತಿದೆ. ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಅಸೀಮ್ ಇಫ್ತಿಖಾರ ಅವರು ಮಾತನಾಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದಕರ ಪಟ್ಟಿಯಲ್ಲಿರುವ ಪ್ರತಿ ಹೆಸರೂ ಮುಸಲ್ಮಾನರದ್ದಾಗಿದೆ. ಇದು ಅರ್ಥಮಾಡಿಕೊಳ್ಳಲು ಅಸಾಧ್ಯ ಮತ್ತು ವಾಸ್ತವದಲ್ಲಿ ಸ್ವೀಕಾರಾರ್ಹವಲ್ಲ. ಈ ಪಟ್ಟಿಯಲ್ಲಿ ಒಬ್ಬರೂ ಮುಸಲ್ಮಾನರಲ್ಲದವರ ಹೆಸರಿಲ್ಲ. ‘ಇದು ಇಸ್ಲಾಂ ಮತ್ತು ಮುಸಲ್ಮಾನರನ್ನು ಕೆಣಕುವ ಪ್ರಯತ್ನ’ ಎಂದು ಹೇಳಿ, ಬಲಪಂಥೀಯ ಭಯೋತ್ಪಾದಕ ಸಂಘಟನೆಗಳು ಮತ್ತು ಮೂಲಭೂತವಾದಿ (ಫ್ಯಾಸಿಸ್ಟ್) ಚಳುವಳಿಗಳ ಕಡೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗಮನ ಸೆಳೆಯಲು ಪ್ರಯತ್ನಿಸಿದರು.

ಈ ಸಭೆಯನ್ನು ‘ಭಯೋತ್ಪಾದಕ ಕೃತ್ಯಗಳಿಂದ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಪಾಯ’ ಎಂಬ ವಿಷಯದ ಕುರಿತು ಆಯೋಜಿಸಲಾಗಿತ್ತು. ಈ ಪಟ್ಟಿಯಲ್ಲಿ ಹೊಸ ಮತ್ತು ಉದಯೋನ್ಮುಖ ಅಪಾಯಗಳನ್ನು ಸೇರಿಸಲು ನಿರ್ಬಂಧ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವಂತೆ ಪಾಕಿಸ್ತಾನ ಆಗ್ರಹಿಸಿತು.

ಪ್ರತಿಯೊಬ್ಬ ಭಯೋತ್ಪಾದಕ ಮುಸಲ್ಮಾನನೇ ಏಕೆ?

ಅಸೀಮ್ ಇಫ್ತಿಖಾರ್ ಮಾತನಾಡಿ, ‘ಜಗತ್ತಿನ ಅನೇಕ ದೇಶಗಳಲ್ಲಿ ಬಲಪಂಥೀಯ ಸಿದ್ಧಾಂತ, ಭಯೋತ್ಪಾದಕ ಮತ್ತು ಮೂಲಭೂತವಾದಿ ಚಳುವಳಿಗಳು ಉದಯಿಸಿವೆ, ಇದರಿಂದ ಹಿಂಸಾಚಾರ ಹೆಚ್ಚುತ್ತಿದೆ. ಆದರೂ ನಾವು ಮುಸಲ್ಮಾನರಲ್ಲದವರ ಕೃತ್ಯಗಳನ್ನು ‘ಭಯೋತ್ಪಾದನೆ’ ಎಂದು ನೋಡದೆ ಸಾಮಾನ್ಯವಾಗಿ ಹಿಂಸಾತ್ಮಕ ಅಪರಾಧ ಎಂದು ನೋಡುತ್ತೇವೆ. ಭಯೋತ್ಪಾದನೆ ಒಂದು ಜಾಗತಿಕ ಘಟನೆಯಾಗಿದೆ ಮತ್ತು ಅದನ್ನು ಯಾವುದೇ ಧರ್ಮ, ರಾಷ್ಟ್ರೀಯತೆ, ಸಂಸ್ಕೃತಿ ಅಥವಾ ಜನಾಂಗೀಯ ಸಮೂಹದೊಂದಿಗೆ ಜೋಡಿಸಬಾರದು.’ (ಭಯೋತ್ಪಾದನೆಗೆ ಸದ್ಯಕ್ಕೆ ಒಂದೇ ಧರ್ಮವಿರುವುದರಿಂದ ಅದನ್ನೇ ಹೇಳಲಾಗುತ್ತದೆ ಎಂಬುದನ್ನು ಪಾಕಿಸ್ತಾನ ಯಾವಾಗಲೂ ನೆನಪಿಟ್ಟುಕೊಳ್ಳಬೇಕು! – ಸಂಪಾದಕರು)

ಭಾರತದ ಮೇಲೆ ಆರೋಪ

ಅಸೀಮ್ ಇಫ್ತಿಖಾರ ಈ ಸಂದರ್ಭದಲ್ಲಿ ಭಾರತದ ಮೇಲೆ ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸಿರುವ ಆರೋಪ ಮಾಡಿದರು. ಅವರು ಭಯೋತ್ಪಾದಕರಿಗೆ ಹಣ ಮತ್ತು ಬೆಂಬಲ ನೀಡುತ್ತಿರುವ ಆರೋಪ ಮಾಡಿದರು. (ಇದಕ್ಕೆ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುತ್ತಾರೆ! – ಸಂಪಾದಕರು) ಅಲ್ಲದೆ, ಅವರು ಸುಮಾರು 6 ಸಾವಿರ ಭಯೋತ್ಪಾದಕರನ್ನು ಹೊಂದಿರುವ ‘ತಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್’ (ಟಿಟಿಪಿ) ಅಫ್ಘಾನಿಸ್ತಾನದ ಭೂಮಿಯಿಂದ ಪಾಕಿಸ್ತಾನದಲ್ಲಿ ಚಟುವಟಿಕೆ ನಡೆಸುತ್ತಿರುವ ವಿಶ್ವಸಂಸ್ಥೆಯು ಘೋಷಿಸಿರುವ ಅತಿ ದೊಡ್ಡ ಭಯೋತ್ಪಾದಕ ಗುಂಪು ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ಜಾಗತಿಕ ಮಟ್ಟದಲ್ಲಿ ಯಾವುದು ಸತ್ಯ ಮತ್ತು ವಾಸ್ತವವೋ, ಅದೇ ವಿಶ್ವಸಂಸ್ಥೆಯ ಪಟ್ಟಿಯಲ್ಲಿದೆ. ಅದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ. ಪಾಕಿಸ್ತಾನವೇ ಸ್ವತಃ ಭಯೋತ್ಪಾದಕರ ಕಾರ್ಖಾನೆ ಮತ್ತು ಅದರ ಭಯೋತ್ಪಾದಕರು ವಿಶ್ವಾದ್ಯಂತದ ಚಟುವಟಿಕೆಗಳಲ್ಲಿ ಇರುವುದು ಹೊರಬರುತ್ತಿರುತ್ತದೆ. ಪಾಕಿಸ್ತಾನಕ್ಕೆ ಇದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಕೂಗಾಡುತ್ತಿದೆ ಎಂಬುದು ಗಮನಕ್ಕೆ ಬರುತ್ತದೆ!