ಅಮೆರಿಕದ ಸಹಾಯದೊಂದಿಗೆ ಪಿತೂರಿ ರೂಪಿಸಿದ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್!

ಢಾಕಾ (ಬಾಂಗ್ಲಾದೇಶ) – 1971 ರಲ್ಲಿ ಪಾಕಿಸ್ತಾನದ ವಿಭಜನೆಯ ನಂತರ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ರಚನೆಯಾಯಿತು; ಆದರೆ ಕಳೆದ ವರ್ಷ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ನಂತರ, ಪಾಕಿಸ್ತಾನವು ಮತ್ತೆ ಅಲ್ಲಿ ತನ್ನ ಹಿಡಿತ ಸಾಧಿಸಲು ಮತ್ತು ಬಾಂಗ್ಲಾದೇಶವನ್ನು ಪಾಕಿಸ್ತಾನದ ಭಾಗವನ್ನಾಗಿ ಮಾಡಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ. ಇದಕ್ಕಾಗಿ ಪಾಕಿಸ್ತಾನಿ ಸೇನೆಯ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಪಿತೂರಿ ರೂಪಿಸಿದ್ದಾರೆ ಎಂದು ಬಹಿರಂಗವಾಗಿದೆ. ಈ ಮಾಹಿತಿಯನ್ನು ಬಾಂಗ್ಲಾದೇಶದ ಖ್ಯಾತ ಪತ್ರಕರ್ತ ಸಲಾಹುದ್ದೀನ್ ಶೋಯೆಬ್ ಚೌಧರಿ ನೀಡಿದ್ದಾರೆ. ಅಲ್ಲದೆ, ಈ ಪಿತೂರಿಗೆ ಸಮಯಕ್ಕೆ ಸರಿಯಾಗಿ ವಿರೋಧ ವ್ಯಕ್ತಪಡಿಸದಿದ್ದರೆ, ಇಡೀ ದಕ್ಷಿಣ ಏಷ್ಯಾ ಅಸ್ಥಿರಗೊಳ್ಳಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
1. ಸಲಾಹುದ್ದೀನ್ ಶೋಯೆಬ್ ಚೌಧರಿ ಅವರು ಒಂದು ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ, ಕಳೆದ ವರ್ಷ ಆಗಸ್ಟ್‌ನಲ್ಲಿ ಮಹಮ್ಮದ್ ಯುನೂಸ್ ಅವರ ನೇತೃತ್ವದಲ್ಲಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರ ರಚನೆಯಾದಾಗಿನಿಂದ, ಪಾಕಿಸ್ತಾನಿ ಸೇನೆ ಮತ್ತು ಅದರ ಗುಪ್ತಚರ ಸಂಸ್ಥೆ ಐ.ಎಸ್.ಐ. ಬಾಂಗ್ಲಾದೇಶದಲ್ಲಿ ಮತ್ತೆ ಸಕ್ರಿಯವಾಗಿವೆ ಎಂದು ಹೇಳಿಕೊಂಡಿದ್ದಾರೆ. ಅಲ್ಲಿನ ಅಸ್ಥಿರತೆಯ ಲಾಭ ಪಡೆದುಕೊಂಡು, ಬಾಂಗ್ಲಾದೇಶದಲ್ಲಿ ಪ್ರಭಾವಿ ನಿಯಂತ್ರಣ ಸ್ಥಾಪಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಒಂದು ನೆಲೆಯನ್ನು ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ.
2. ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುನ್‌ಖ್ವಾ ಪ್ರದೇಶಗಳಲ್ಲಿ ತೈಲ ನಿಕ್ಷೇಪಗಳ ಶೋಧದ ಬದಲಾಗಿ, ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದೇಶವನ್ನು ಪಾಕಿಸ್ತಾನಕ್ಕೆ ಒಂದು ವಿಶ್ವಾಸಾರ್ಹ ಸಹಕಾರಿಯಾಗಿ ಹಸ್ತಾಂತರಿಸಬೇಕು ಮತ್ತು ಅದು ಪಾಕಿಸ್ತಾನದ ನಿಯಂತ್ರಣದಲ್ಲಿರಬೇಕು ಎಂದು ಮುನೀರ್ ಟ್ರಂಪ್ ಅವರೊಂದಿಗಿನ ಭೇಟಿಯಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ.
3. ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಕಾರ್ ಉಲ್ ಜಮಾ ಅವರ ಬದಲಿಗೆ ಪಾಕಿಸ್ತಾನಿ ಬೆಂಬಲಿಗ ಅಧಿಕಾರಿಯೊಬ್ಬರು ಇರಬೇಕೆಂದು ಮುನೀರ್ ಅವರು ಟ್ರಂಪ್ ಅವರ ಬಳಿ ಆಶಯ ವ್ಯಕ್ತಪಡಿಸಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನ ಮತ್ತು ಅಮೆರಿಕ ಬಾಂಗ್ಲಾದೇಶದಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗಿರುವಾಗ, ಭಾರತವು ಮೂಕಪ್ರೇಕ್ಷಕನಾಗಿ ಹೇಗೆ ನೋಡಬಹುದು? ಭಾರತವು ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತವಾಗುವುದು ಅವಶ್ಯಕ. ಇಲ್ಲದಿದ್ದರೆ, ಇದು ಭಾರತದ ಭದ್ರತೆಗೆ ಅಪಾಯಕಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation