‘ಕ್ರಿಮಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಬಿಡುಗಡೆ: ಸಾಕ್ಷ್ಯಚಿತ್ರದ ಮೂಲಕ ಪ್ರಶ್ನೆ.ಪ್ರಸಿದ್ಧ ಪತ್ರಕರ್ತ ಮಯಾಂಕ್ ಜೈನ್ ಅವರ ಲೇಖನ ಮತ್ತು ನಿರ್ದೇಶನ |

ನವದೆಹಲಿ – ‘ಕ್ರಿಮಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಎಂಬ ಹೆಸರಿನ ಸಾಕ್ಷ್ಯಚಿತ್ರವೊಂದು ಇತ್ತೀಚೆಗೆ ಪ್ರದರ್ಶನಗೊಂಡಿದೆ. ರಾಜಧಾನಿಯ ‘ಪ್ರೆಸ್ ಕ್ಲಬ್ ಆಫ್ ಇಂಡಿಯಾ’ ದಲ್ಲಿ ಈ ಒಂದೂ ಮೂಕ್ಕಾಲು ಗಂಟೆಯ ಇಂಗ್ಲಿಷ್ ಭಾಷೆಯ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಲಾಯಿತು. ‘ಸೌದಿ ಅರೇಬಿಯಾದ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ (ಎಂ.ಬಿ.ಎಸ್) ಅವರು ಇಸ್ಲಾಮಿಕ್ ಜಗತ್ತಿನಲ್ಲಿ ಅತ್ಯಂತ ಮಹತ್ವದ ಸೈದ್ಧಾಂತಿಕ ಬದಲಾವಣೆಯನ್ನು ಶಾಂತಿಯುತವಾಗಿ ತರಬಹುದೇ?’ ಎಂಬ ಪ್ರಶ್ನೆಯನ್ನು ಈ ಸಾಕ್ಷ್ಯಚಿತ್ರದಲ್ಲಿ ಕೇಳಲಾಗಿದೆ. ಅನೇಕ ದಶಕಗಳಿಂದ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ದೇಶಗಳ ಮದರಸಾಗಳಲ್ಲಿ ಕಟ್ಟರ್ ವಹಾಬಿ ಸಿದ್ಧಾಂತವನ್ನು (ಕುರಾನ್ ಮತ್ತು ಸುನ್ನತ್ ನಲ್ಲಿನ ವಿಷಯಗಳ ಅಕ್ಷರಶಃ ಅರ್ಥಗಳಿಗೆ ಒತ್ತು ನೀಡುವ ವಹಾಬಿ ಸಿದ್ಧಾಂತ) ಹರಡುತ್ತಿರುವ ಸೌದಿ ಅರೇಬಿಯಾ ಇಂದು ಎಂಬಿಎಸ್ ಅವರ ನಾಯಕತ್ವದಲ್ಲಿ ಕಟ್ಟರ್ ಇಸ್ಲಾಮ್ ಅನ್ನು ಸುಧಾರಿಸುತ್ತದೆಯೇ? ಎಂಬ ಆಲೋಚನೆಯನ್ನು ಸಹ ಈ ಸಾಕ್ಷ್ಯಚಿತ್ರದ ಮೂಲಕ ಪ್ರಸಿದ್ಧ ನಿರ್ದೇಶಕ ಮತ್ತು ಪತ್ರಕರ್ತ ಮಯಾಂಕ್ ಜೈನ್ ಅವರು ವ್ಯಕ್ತಪಡಿಸಿದ್ದಾರೆ. ಜೈನ್ ಅವರು ಈ ಸಾಕ್ಷ್ಯಚಿತ್ರದ ಲೇಖಕರು ಮತ್ತು ನಿರ್ದೇಶಕರಾಗಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ರಾಬರ್ಟ್ ಸ್ಪೆನ್ಸರ್ ಅವರ ‘ಜಿಹಾದ್ ವಾಚ್’, ‘ಸಂಗಮ್ ಟಾಕ್ಸ್’, ‘ಸುದರ್ಶನ್ ನ್ಯೂಸ್’, ನೀರಜ್ ಅತ್ರಿ ಅವರ ‘ಪೊಲಿಟಿಕಲಿ ಇನ್ ಕರೆಕ್ಟ್’, ‘ಅಪ್ ವರ್ಡ್’, ‘ಪೊಲಿಟಿಕಲ್ ಅಡ್ಡಾ’ ಮುಂತಾದ ವಿವಿಧ ಪ್ರಸಿದ್ಧ ಯೂಟ್ಯೂಬ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗಿದ್ದು, ಇದಕ್ಕೆ ಸಾವಿರಾರು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೆಚ್ಚೆಚ್ಚು ಜನರಿಗೆ ಈ ‘ಕ್ರಿಮಸನ್ ಕ್ರೆಸೆಂಟ್’ ಸಾಕ್ಷ್ಯಚಿತ್ರವನ್ನು ತಲುಪಿಸಲು ನಿರ್ದೇಶಕ ಮಯಾಂಕ್ ಜೈನ್ ಅವರು ಹಿಂದೂ ಸಂಘಟನೆಗಳಿಗೆ ಕರೆ ನೀಡಿದ್ದಾರೆ!‘ಸನಾತನ ಪ್ರಭಾತ’ವು ಈ ಸಾಕ್ಷ್ಯಚಿತ್ರದ ಕುರಿತು ಶ್ರೀ. ಮಯಾಂಕ್ ಜೈನ್ ಅವರನ್ನು ಸಂದರ್ಶಿಸಿತು. ಈ ವೇಳೆ ಮಾತನಾಡಿದ ಜೈನ್, ಈ ಸಾಕ್ಷ್ಯಚಿತ್ರವನ್ನು ಹೆಚ್ಚು ಜನರಿಗೆ ತಲುಪಿಸಲು ಹಿಂದೂ ಸಂಘಟನೆಗಳು ಮುಂದೆ ಬರಬೇಕು ಎಂದರು. ಸಾಕ್ಷ್ಯಚಿತ್ರವು ಸಮಾಜ ಜಾಗೃತಿಗೆ ಉತ್ತಮ ಮಾಧ್ಯಮವಾಗಿದೆ. ನಾನು ಈ ಸಾಕ್ಷ್ಯಚಿತ್ರಕ್ಕಾಗಿ ಹಗಲಿರುಳು ಶ್ರಮಿಸಿದ್ದೇನೆ ಎಂದರು. |
ಸಾಕ್ಷ್ಯಚಿತ್ರದ ಪ್ರಮುಖ ಅಂಶಗಳು:
1. ನಿಯೋಮ್: ಮರುಭೂಮಿಯಲ್ಲಿನ ಬದಲಾವಣೆಯ ಕನ್ನಡಿ?
1989 ರಲ್ಲಿ ಬರ್ಲಿನ್ ಗೋಡೆಯನ್ನು ಕೆಡವಿ ಕಮ್ಯುನಿಸ್ಟ್ ಪೂರ್ವ ಜರ್ಮನಿ ಮತ್ತು ಪ್ರಜಾಪ್ರಭುತ್ವದ ಪಶ್ಚಿಮ ಜರ್ಮನಿ ಒಂದುಗೂಡಿದವು. ಅದೇ ರೀತಿ, ಸೌದಿ ಅರೇಬಿಯಾದ ಮರುಭೂಮಿಯಲ್ಲಿ ‘ನಿಯೋಮ್’ ಹೆಸರಿನ ಮಹತ್ವಾಕಾಂಕ್ಷೆಯ ಮತ್ತು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಉತ್ತೇಜನ ನೀಡುವ ‘ಸ್ಮಾರ್ಟ್ ಸಿಟಿ’ ನಿರ್ಮಿಸುವ ಮೂಲಕ ಸೌದಿ ಅರೇಬಿಯಾ ಕಟ್ಟರ್ ಇಸ್ಲಾಮ್ ನ ಗೋಡೆಗೆ ಬಿರುಕು ಮೂಡಿಸುತ್ತದೆಯೇ? ಎಂಬ ಆಳವಾದ ಪ್ರಶ್ನೆಯನ್ನು ಈ ಸಾಕ್ಷ್ಯಚಿತ್ರದ ಮೂಲಕ ಕೇಳಲಾಗಿದೆ. ಈ ‘ಸ್ಮಾರ್ಟ್ ಸಿಟಿ’ಯ ನಿರ್ಮಾಣಕ್ಕೆ ಸುಮಾರು ಒಂದೂವರೆ ಟ್ರಿಲಿಯನ್ ಡಾಲರ್ ಅಂದರೆ, 131 ಲಕ್ಷ ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದರಿಂದ ವಹಾಬಿ ಸಿದ್ಧಾಂತದ ಪ್ರಚಾರಕ್ಕೆ ಸೌದಿ ಅರೇಬಿಯಾ ಬಳಿ ಹಣ ಉಳಿದಿಲ್ಲ ಎಂದು ‘ಕ್ರಿಮಸನ್ ಕ್ರೆಸೆಂಟ್’ ಮೂಲಕ ಹೇಳಲಾಗಿದೆ. ಜೈನ್ ಹೇಳುವಂತೆ, ಇದರಿಂದಾಗಿ ‘ನಿಯೋಮ್’ ಕೇವಲ ಒಂದು ನಗರವಾಗಿ ಉಳಿಯದೆ, ಶಾಂತಿ ಮತ್ತು ತಂತ್ರಜ್ಞಾನವನ್ನು ಒಂದುಗೂಡಿಸುವ ಒಂದು ಕ್ರಾಂತಿಕಾರಿ ಸಾಧನವಾಗುತ್ತದೆ.
2. ವಿವಿಧ ಸಮೀಕ್ಷೆಗಳ ಮೂಲಕ ಮದರಸಾಗಳು ಹಿಂಸಾಚಾರಕ್ಕೆ ಹೇಗೆ ಪ್ರೋತ್ಸಾಹ ನೀಡುತ್ತವೆ? ಎಂಬುದರ ಮೇಲೆ ಬೆಳಕು
‘ಕ್ರಿಮಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಒಂದು ಕಠಿಣ ಪ್ರಶ್ನೆಯನ್ನು ಕೇಳುತ್ತದೆ. ಮದರಸಾಗಳಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುವ ಸಾಧ್ಯತೆ ಹೆಚ್ಚಿದೆಯೇ? ‘ಕಾಂಬಾಟಿಂಗ್ ಟೆರರಿಸಂ ಸೆಂಟರ್ ಅಂಡ್ ಇಂಟರ್ ನ್ಯಾಷನಲ್ ಕ್ರೈಸಿಸ್ ಗ್ರೂಪ್’ (ಭಯೋತ್ಪಾದನೆಯನ್ನು ಎದುರಿಸುವ ಕೇಂದ್ರ ಮತ್ತು ಅಂತರಾಷ್ಟ್ರೀಯ ಬಿಕ್ಕಟ್ಟು ಗುಂಪು) ಪ್ರಸಾರ ಮಾಡಿರುವ ವರದಿಯ ಪ್ರಕಾರ, ಇಂಡೋನೇಷ್ಯಾದ ಮದರಸಾಗಳಲ್ಲಿನ ಶೇ.91%ರಷ್ಟು ವಿದ್ಯಾರ್ಥಿಗಳು ಧಾರ್ಮಿಕ ಪ್ರೇರಿತ ಮುಸ್ಲಿಮೇತರರ ಹತ್ಯೆಯನ್ನು ಬಹಿರಂಗವಾಗಿ ಬೆಂಬಲಿಸಿದ್ದಾರೆ. ಇವೆಲ್ಲವೂ ಮುಖ್ಯವಾಹಿನಿಯ ಇಸ್ಲಾಮಿಕ್ ಮದರಸಾಗಳಾಗಿವೆ. ಈ ಹಿಂಸಾತ್ಮಕ ಮನಸ್ಥಿತಿಯು ತರಗತಿಗಳಿಗೆ ಮಾತ್ರ ಸೀಮಿತವಾಗಿಲ್ಲ, ನೇರವಾಗಿ ನಡೆಯುವ ಹಿಂಸಾಚಾರಕ್ಕೆ ನಂಟನ್ನು ಹೊಂದಿದೆ. ಈ ಸಾಕ್ಷ್ಯಚಿತ್ರದಲ್ಲಿ 2024ರಲ್ಲಿ ಗಣೇಶ ವಿಸರ್ಜನೆಯ ದಿನದಂದು ಭಾರತದ 17 ನಗರಗಳಲ್ಲಿ ಮೆರವಣಿಗೆಗಳ ಮೇಲೆ ನಡೆದ 17 ಸಂಘಟಿತ ದಾಳಿಗಳು ಮದರಸಾಗಳಲ್ಲಿನ ಕಟ್ಟರ್ ಶಿಕ್ಷಣದ ಪುರಾವೆಯಾಗಿದೆ ಎಂದು ಹೇಳಲಾಗಿದೆ. ಇದು ಅಮೂರ್ತ ತೀವ್ರವಾದವಲ್ಲ, ಆದರೆ ಶಿಕ್ಷಣದ ಆಯುಧವಾಗಿದೆ.
3. ಮುಸ್ಲಿಮರೇ ಬಲಿ !
ಜಿಹಾದಿ ಭಯೋತ್ಪಾದಕ ದಾಳಿಗಳಲ್ಲಿ ಹತ್ಯೆಯಾದವರಲ್ಲಿ ಶೇ.91% ರಷ್ಟು ಮುಸ್ಲಿಮರೇ ಆಗಿದ್ದಾರೆ. ಇದರ ಮೂಲಕ ಈ ಸಾಕ್ಷ್ಯಚಿತ್ರವು ‘ಇಸ್ಲಾಮ್ ಅನ್ನು ರಕ್ಷಿಸುವ ಎಂದು ಹೇಳಿಕೊಳ್ಳುವ ಸಿದ್ಧಾಂತವು ವಾಸ್ತವವಾಗಿ ಮುಸ್ಲಿಮ್ ಜಗತ್ತಿನ ಮೇಲೆ ಆಳವಾದ ರಾಜಕೀಯ, ಆಧ್ಯಾತ್ಮಿಕ ಮತ್ತು ಜನಸಂಖ್ಯಾಶಾಸ್ತ್ರದ ಗಾಯಗಳನ್ನು ಮಾಡಿದೆ’ ಎಂಬ ವಾಸ್ತವವನ್ನು ತೆರೆದಿಡುತ್ತದೆ.
4. ಉಘೂರ್ ಹತ್ಯಾಕಾಂಡದ ಮೇಲೆ ಇಸ್ಲಾಮಿಕ್ ಜಗತ್ತಿನ ಮೌನ; ನೈತಿಕ ಹೊಣೆಗಾರಿಕೆಯ ಪತನ!
ಈ ಸಾಕ್ಷ್ಯಚಿತ್ರದ ಅತ್ಯಂತ ಸೂಕ್ಷ್ಮ ಭಾಗಗಳಲ್ಲಿ ಒಂದೆಂದರೆ, ಚೀನಾದ ಶಿನ್ ಜಿಯಾಂಗ್ ಪ್ರಾಂತ್ಯದಲ್ಲಿನ ಒಂದು ಕೋಟಿಗೂ ಹೆಚ್ಚು ಉಘೂರ್ ಮುಸ್ಲಿಮರು ಚೀನೀ ಆಡಳಿತದಿಂದ ಎದುರಿಸುತ್ತಿರುವ ಅಸಹನೀಯ ದೌರ್ಜನ್ಯಗಳ ಮೇಲೆ ಮುಸ್ಲಿಮ್ ಬಹುಸಂಖ್ಯಾತ ದೇಶಗಳ ಮೌನ. ಈ ಮೌನವನ್ನು ಸಾಕ್ಷ್ಯಚಿತ್ರದಲ್ಲಿ ರಾಜಕೀಯ ತಪ್ಪು ಎಂದು ಕರೆಯದೆ, ನೈತಿಕ ಹೊಣೆಗಾರಿಕೆಯ ಪತನ ಎಂದು ಹೇಳಲಾಗಿದೆ.
5. ಜಿಹಾದಿ ಭಯೋತ್ಪಾದನೆಯಿಂದ ಭಾರತಕ್ಕೆ ಆದ ನಷ್ಟದ ಅವಲೋಕನ!
ಸಾಕ್ಷ್ಯಚಿತ್ರದಲ್ಲಿ ‘ಅಸೋಚೆಮ್’, ‘ಏಷ್ಯಾ ಇಕಾನಾಮಿಕ್ಸ್ ಇನ್ಸಟಿಟ್ಯೂಟ್’ ಮತ್ತು ‘ಇನ್ಸಟಿಟ್ಯೂಟ್ ಫಾರ್ ಇಕಾನಾಮಿಕ್ಸ್ ಅಂಡ್ ಪೀಸ್’ ಮುಂತಾದ ರಾಷ್ಟ್ರೀಯ-ಅಂತರಾಷ್ಟ್ರೀಯ ಸಂಸ್ಥೆಗಳು ನೀಡಿದ ಅಂಕಿ-ಅಂಶಗಳನ್ನು ವಿವರಿಸಲಾಗಿದೆ.
5 ಅ. ಕೇವಲ ಮುಂಬಯಿಯಲ್ಲಿನ 26/11 ದಾಳಿಯಿಂದ ಭಾರತವು 9 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿತು:
26/11 ರ ಮುಂಬಯಿ ದಾಳಿಯಿಂದ ಭಾರತವು 100 ಬಿಲಿಯನ್ ಡಾಲರ್ (9 ಲಕ್ಷ ಕೋಟಿ ರೂಪಾಯಿ) ನಷ್ಟ ಅನುಭವಿಸಿತು. ಇದರಲ್ಲಿ ಭಾರತವು 20 ಬಿಲಿಯನ್ ಡಾಲರ್ (1.8ಲಕ್ಷ ಕೋಟಿ ರೂಪಾಯಿ) ವಿದೇಶಿ ಹೂಡಿಕೆಯನ್ನೂ ಕಳೆದುಕೊಂಡಿತು.
5 ಆ. ‘ಪಿಪಿಪಿ’ ಮಟ್ಟದಲ್ಲಿ ಬಿಲಿಯನ್ ರೂಪಾಯಿಗಳ ನಷ್ಟ:
2017 ರಲ್ಲಿ ಭಯೋತ್ಪಾದನೆ ಮತ್ತು ಕೋಮು ಹಿಂಸಾಚಾರದಿಂದಾಗಿ ಭಾರತವು ‘ಪಿಪಿಪಿ’ಗೆ ಸಂಬಂಧಿಸಿದಂತೆ ಸುಮಾರು 1 ಟ್ರಿಲಿಯನ್ ಡಾಲರ್ (87 ಲಕ್ಷ 50 ಸಾವಿರ ಕೋಟಿ ರೂಪಾಯಿ) ನಷ್ಟ ಅನುಭವಿಸಿತು. ಈ ಅಂಕಿ-ಅಂಶವು ‘ಜಿಡಿಪಿ’ (ಒಟ್ಟು ದೇಶೀಯ ಉತ್ಪನ್ನ)ಯ ಸುಮಾರು ಶೇ.9% ರಷ್ಟಿತ್ತು. 2020ರಲ್ಲಿ 646 ಬಿಲಿಯನ್ ಡಾಲರ್ (56 ಲಕ್ಷ 23 ಸಾವಿರ ಕೋಟಿ ರೂಪಾಯಿ) ನಷ್ಟವಾಗಿದೆ. (ಪಿಪಿಪಿ ಎಂದರೆ ಪರ್ಚೇಸಿಂಗ್ ಪವರ್ ಪ್ಯಾರಿಟಿ, ಅಂದರೆ ವಿವಿಧ ದೇಶಗಳಲ್ಲಿ ನಿರ್ದಿಷ್ಟ ವಸ್ತುವನ್ನು ಖರೀದಿಸಲು ಎಷ್ಟು ಹಣವನ್ನು ಪಾವತಿಸಬೇಕು ಎಂಬುದನ್ನು ಅಧ್ಯಯನ ಮಾಡಿ, ಆ ಮಾಹಿತಿಯ ಆಧಾರದ ಮೇಲೆ ಕರೆನ್ಸಿಗಳನ್ನು ವಸ್ತುನಿಷ್ಠವಾಗಿ ಹೋಲಿಸುವ ವಿಧಾನ. ಇದರ ಆಧಾರದ ಮೇಲೆ ದೇಶದ ಆರ್ಥಿಕ ಉತ್ಪಾದಕತೆ ಮತ್ತು ಜೀವನ ಮಟ್ಟವನ್ನು ನಿರ್ಧರಿಸಬಹುದು.)
5 ಇ. ಸೌದಿ ಅರೇಬಿಯಾ ನಷ್ಟ ಪರಿಹಾರ ನೀಡುತ್ತದೆಯೇ?:
ಒಂದು ವೇಳೆ ಸೌದಿ ಅರೇಬಿಯಾ ನಿಜವಾಗಿಯೂ ವಹಾಬಿ ಸಿದ್ಧಾಂತಕ್ಕೆ ಇನ್ನು ಮುಂದೆ ಹಣಕಾಸು ಒದಗಿಸದಿದ್ದರೆ, ಕಳೆದ ಹಲವು ದಶಕಗಳಿಂದ ಈ ಸಿದ್ಧಾಂತದಿಂದ ಭಾರತಕ್ಕೆ ಆದ ಹಾನಿಗೆ ಪರಿಹಾರ ನೀಡುತ್ತದೆಯೇ? ಎಂಬ ವಾದವನ್ನು ಸಾಕ್ಷ್ಯಚಿತ್ರದ ಮೂಲಕ ಮಂಡಿಸಲಾಗಿದೆ.
6. ‘ಕ್ರಿಮಸನ್ ಕ್ರೆಸೆಂಟ್’ 20 ವರ್ಷಗಳ ಹಿಂದಿನ ‘ದಿ ಬಾಂಗ್ಲಾ ಕ್ರೆಸೆಂಟ್’ ಸಾಕ್ಷ್ಯಚಿತ್ರದ ಮುಂದಿನ ಸೈದ್ಧಾಂತಿಕ ಭಾಗ !
‘ಕ್ರಿಮಸನ್ ಕ್ರೆಸೆಂಟ್ – ದಿ ಲಾಸ್ಟ್ ಕ್ವಾರ್ಟರ್’ ಸಾಕ್ಷ್ಯಚಿತ್ರವು ಮಯಾಂಕ್ ಜೈನ್ ಅವರೇ 2 ದಶಕಗಳ ಹಿಂದೆ ನಿರ್ದೇಶಿಸಿದ ‘ದಿ ಬಾಂಗ್ಲಾ ಕ್ರೆಸೆಂಟ್ – ಐ.ಎಸ್.ಐ., ಮದರಸಾಗಳು ಮತ್ತು ಒಳನುಸುಳುವಿಕೆ’ ಎಂಬ ಸಾಕ್ಷ್ಯಚಿತ್ರದ ಮುಂದಿನ ಸೈದ್ಧಾಂತಿಕ ಭಾಗವಾಗಿದೆ. ‘ಬಾಂಗ್ಲಾ ಕ್ರೆಸೆಂಟ್’ ಚಿತ್ರವು ಮುಂದೆ ಏನಾಗಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿದರೆ, ‘ಕ್ರಿಮಸನ್ ಕ್ರೆಸೆಂಟ್’ ಇಲ್ಲಿವರೆಗೆ ಏನಾಗಿದೆ ಮತ್ತು ಈಗ ಅಂತಿಮವಾಗಿ ಏನಾಗುತ್ತಿದೆ ಎಂಬುದನ್ನು ವಿವರಿಸಿದೆ. ನಿರ್ಭಯ ವರದಿಗಾರಿಕೆ ಮತ್ತು ಆಳವಾದ ‘ಗ್ರೌಂಡ್ ರಿಪೋರ್ಟಿಂಗ್’ ಈ ಎರಡೂ ಸಾಕ್ಷ್ಯಚಿತ್ರಗಳ ಪ್ರಮುಖ ಅಂಶಗಳು ಎಂದು ಹೇಳಬಹುದು.
ರಾಜಧಾನಿ ದೆಹಲಿಯ ಒಂದು ಮದರಸಾದಲ್ಲಿ ‘ಕಾಫಿರ್’ ಪದದ ಬಗ್ಗೆ ಕೇಳಿದಾಗ ನಿರ್ದೇಶಕರಿಗೆ ಬೆದರಿಕೆ.ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕಾಗಿ ನಿರ್ದೇಶಕ ಶ್ರೀ. ಮಯಾಂಕ್ ಜೈನ್ ಅವರು ಹರಿಯಾಣದ ನೂಹ್, ರಾಜಧಾನಿ ದೆಹಲಿಯ ಸುಂದರನಗರಿ, ಮತ್ತು ಬಂಗಾಳ ಹಾಗೂ ಆಸ್ಸಾಂನ ಕೆಲವು ಭಾಗಗಳಿಗೆ ಪ್ರಯಾಣಿಸಿದರು. ಆಗ ಅವರು ಮನೆಗಳು, ಮದರಸಾಗಳು ಮತ್ತು ನಗರದ ಒಳಗಿನ ಪ್ರದೇಶಗಳಲ್ಲಿ ಕ್ಯಾಮೆರಾದ ಮೂಲಕ ಸಂಭಾಷಣೆಗಳನ್ನು ಸೆರೆಹಿಡಿದರು. ಅನೇಕ ಸಂದರ್ಶನಗಳಲ್ಲಿ ಮದರಸಾಗಳ ವಿದ್ಯಾರ್ಥಿಗಳು ಮುಸ್ಲಿಮೇತರರನ್ನು ‘ಕಾಫಿರ್’ (ಅಲ್ಲಾಹ್ ಅನ್ನು ನಂಬದವರು) ಎಂದು ಸ್ಪಷ್ಟವಾಗಿ ಉಲ್ಲೇಖಿಸಿದರು, ಹಾಗೂ ‘ದಾವತ್’ (ದಾವಾಹ, ಅಂದರೆ ಮುಸ್ಲಿಮೇತರರನ್ನು ಇಸ್ಲಾಮ್ ಗೆ ಆಹ್ವಾನಿಸುವ ಕಾರ್ಯ) ಮತ್ತು ‘ಜಿಹಾದ್’ (ಮುಸ್ಲಿಮೇತರರ ವಿರುದ್ಧದ ಯುದ್ಧ) ಕುರಿತೂ ವಿದ್ಯಾರ್ಥಿಗಳು ಮಾತನಾಡಿದರು. ಸುಂದರ್ ನಗರಿ ಯಲ್ಲಿ ಜೈನ್ ಅವರು ಒಂದು ಮದರಸಾದ ಶಿಕ್ಷಕ ಮತ್ತು ವಿದ್ಯಾರ್ಥಿಗಳನ್ನು ‘ಕಾಫಿರ್’ ಪರಿಕಲ್ಪನೆಯ ಬಗ್ಗೆ ಸಂದರ್ಶಿಸುವಾಗ ಜನಸಂದಣಿ ಸೇರಲು ಪ್ರಾರಂಭಿಸಿತು. ಜನರು ಕೂಗಲು ಶುರು ಮಾಡಿದರು. ಇದರಿಂದ ಸಂದರ್ಶನವನ್ನು ಇದ್ದಕ್ಕಿದ್ದಂತೆ ನಿಲ್ಲಿಸಬೇಕಾಯಿತು. ಗುಂಪಿನ ನಿಲುವು ಬೆದರಿಕೆಯಾಗಿದ್ದರೂ, ಸಂದೇಶ ಸ್ಪಷ್ಟವಾಗಿತ್ತು: ‘ಇಂತಹ ಪ್ರಶ್ನೆಗಳನ್ನು ಕೇಳಬಾರದು’. ಈ ಘಟನೆಯ ಚಿತ್ರಣವನ್ನು ಸಹ ಈ ಸಾಕ್ಷ್ಯಚಿತ್ರದಲ್ಲಿ ತೋರಿಸಲಾಗಿದೆ. |
ಸಾಕ್ಷ್ಯಚಿತ್ರ ನೋಡಲು ಭೇಟಿ ನೀಡಿ:
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!