ಸರ್ವೋಚ್ಚ ನ್ಯಾಯಾಲಯವು ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ!

ನವದೆಹಲಿ – ವಯಸ್ಸಿಗೆ ಬಂದ ಅಥವಾ 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿ ಪೋಕ್ಸೋ ಕಾಯ್ದೆಯ ನಿಬಂಧನೆಗಳಿದ್ದರೂ ಸಹ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಮದುವೆಯಾಗಲು ಸಮರ್ಥಳು ಎಂದು 2022ರಲ್ಲಿ ಪಂಜಾಬ ಮತ್ತು ಹರಿಯಾಣ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ತೀರ್ಪಿನ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಅರ್ಜಿಯನ್ನು ದಾಖಲಿಸಿತ್ತು.
🚨 SC upholds Punjab & Haryana HC ruling
👉 A 15-year-old Muslim girl can marry under Muslim personal law.
⚖️ Hindu girls can marry only after 18.
This glaring double standard is outright discrimination. Citizens must demand Govt act & bring a #UniformCivilCode.
📌 In 2022,… pic.twitter.com/hKMqwPoSZH
— Sanatan Prabhat (@SanatanPrabhat) August 19, 2025
1. ಸರ್ವೋಚ್ಚ ನ್ಯಾಯಾಲಯವು, ಆಯೋಗವು ಈ ಪ್ರಕರಣಕ್ಕೆ ಸಂಬಂಧಿಸಿಲ್ಲ ಮತ್ತು ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಲು ಅದಕ್ಕೆ ಹಕ್ಕಿಲ್ಲ. ಉಚ್ಚ ನ್ಯಾಯಾಲಯವು ಜಾವೇದ ಮತ್ತು ಆಶಿಯಾನಾ ಹಾಗೂ ಅವರ ಮಗುವಿಗೆ ಹಾನಿಯುಂಟು ಮಾಡುವವರಿಂದ ಅಥವಾ ಬೆದರಿಕೆಯೊಡ್ಡುವವರಿಂದ ಅವರು ಸುರಕ್ಷಿತವಾಗಿರಲಿ ಎಂದು ರಕ್ಷಣೆ ನೀಡಿತ್ತು. ‘ಜೀವನ ಮತ್ತು ಸ್ವಾತಂತ್ರ್ಯದ ರಕ್ಷಣೆಗಾಗಿ ನೀಡಿದ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಆಯೋಗಕ್ಕೆ ಏಕೆ ಅಗತ್ಯವೆನಿಸಿತು?’ ಎಂದು ನ್ಯಾಯಾಲಯ ಪ್ರಶ್ನಿಸಿತು.
2. ಆಯೋಗದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಟ್ಟಿ ಅವರು ಮಾತನಾಡಿ, ನ್ಯಾಯಾಲಯವು ರಕ್ಷಣೆ ನೀಡುವುದನ್ನು ಮುಂದುವರಿಸಬಹುದು; ಆದರೆ ಕಾನೂನಿನ ಪ್ರಶ್ನೆಯನ್ನು ತೆರೆದಿಡಬೇಕು, ಅಂದರೆ, 15 ವರ್ಷದ ಹುಡುಗಿ ವೈಯಕ್ತಿಕ ಕಾನೂನಿನ ಆಧಾರದ ಮೇಲೆ ಮದುವೆಯಾಗಬಹುದೇ? ಎನ್ನುವುದನ್ನು ನಿರ್ಧರಿಸಬೇಕು ಎಂದು ಹೇಳಿದರು.
3. ಸರ್ವೋಚ್ಚ ನ್ಯಾಯಾಲಯವು ಈ ಅಭಿಪ್ರಾಯವನ್ನು ಒಪ್ಪಲಿಲ್ಲ. ಜೀವನ ಸುರಕ್ಷತೆಯ ಬಗ್ಗೆ ನೀಡಿದ ಆದೇಶವನ್ನು ಪರಿಗಣಿಸುವಾಗ ಕಾನೂನಿನ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ನಿಮಗೆ ಈ ಪ್ರಶ್ನೆಯ ಬಗ್ಗೆ ಚರ್ಚೆ ಮಾಡಬೇಕಿದ್ದರೆ, ಸೂಕ್ತ ಪ್ರಕರಣದೊಂದಿಗೆ ನ್ಯಾಯಾಲಯಕ್ಕೆ ಬನ್ನಿ. ಈ ಪ್ರಕರಣದಲ್ಲಿ ಕಾನೂನಿನ ಪ್ರಶ್ನೆ ಉದ್ಭವಿಸುವುದಿಲ್ಲ. ಒಂದು ವೇಳೆ ಉಚ್ಚ ನ್ಯಾಯಾಲಯ ಸಂವಿಧಾನದ ಕಲಂ 226ರ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು ಆದೇಶ ನೀಡಿದ್ದರೆ, ನೀವು ಅದನ್ನು ಹೇಗೆ ಪ್ರಶ್ನಿಸಬಹುದು? ‘ಹುಡುಗಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಾಳೆ ಮತ್ತು ಅವಳಿಗೆ ಒಂದು ಮಗುವೂ ಇದೆ; ಹಾಗಾದರೆ ನಿಮಗೆ ನಿಖರವಾಗಿ ಏನು ತೊಂದರೆಯಿದೆ?’ ಎಂದು ನ್ಯಾಯಾಲಯ ಪ್ರಶ್ನಿಸಿತು.
ಸಂಪಾದಕೀಯ ನಿಲುವುಹಿಂದೂ ಹುಡುಗಿಯರಿಗೆ 18 ವರ್ಷ ತುಂಬಿದ ನಂತರವೇ ಮದುವೆಯಾಗಲು ಹಕ್ಕಿದೆ, ಆದರೆ ಮುಸ್ಲಿಂ ಹುಡುಗಿಯರಿಗೆ 15 ನೇ ವಯಸ್ಸಿನಲ್ಲಿ ಮದುವೆಯಾಗಲು ಅನುಮತಿ ದೊರೆಯುತ್ತದೆ. ಇದು ದೇಶದಲ್ಲಿನ ತಾರತಮ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸರಕಾರ ಇದನ್ನು ಗಮನದಲ್ಲಿಟ್ಟುಕೊಂಡು ಏಕರೂಪ ನಾಗರಿಕ ಕಾನೂನು ಜಾರಿಗೆ ತರಲು ಪ್ರಯತ್ನಿಸಬೇಕು ಎಂದು ಪ್ರಜ್ಞಾವಂತ ನಾಗರಿಕರಿಗೆ ಅನಿಸುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!