ಅಮೇರಿಕಾದ ಅಧ್ಯಕ್ಷರ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ಅವರ ಆಕ್ಷೇಪ

ವಾಷಿಂಗ್ಟನ್ (ಅಮೇರಿಕಾ) – ಭಾರತವು ರಷ್ಯಾದ ತೈಲವನ್ನು ಖರೀದಿಸುತ್ತಿರುವುದರಿಂದಲೇ ರಷ್ಯಾಗೆ ಉಕ್ರೇನ್ ನೊಂದಿಗೆ ಯುದ್ಧವನ್ನು ಮುಂದುವರಿಸಲು ಆರ್ಥಿಕ ಸಹಾಯ ಸಿಗುತ್ತಿದೆಯೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಲಹೆಗಾರ ಪೀಟರ್ ನವಾರೊ ಅವರು ಒಂದು ಲೇಖನದಲ್ಲಿ ಹೇಳಿದ್ದಾರೆ. ನವಾರೊ ಅವರ ಲೇಖನದ ಶೀರ್ಷಿಕೆಯೇ ‘ಭಾರತದ ತೈಲ ಶಕ್ತಿಯು ಪುಟಿನ್ ಅವರ ಯುದ್ಧ ಯಂತ್ರಕ್ಕೆ ಹಣಕಾಸು ಒದಗಿಸುತ್ತಿದೆ!’ ಎಂದು ತೀಕ್ಷ್ಣವಾಗಿದ್ದು ಭಾರತ ವಿರೋಧಿಯಾಗಿದೆ. ಅವರು ತಮ್ಮ ಲೇಖನದಲ್ಲಿ ಭಾರತದ ಆರ್ಥಿಕ ಬೆಂಬಲದಿಂದಾಗಿ ರಷ್ಯಾ ಉಕ್ರೇನ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ, ಇದರಿಂದ ಅಮೇರಿಕಾ ಮತ್ತು ಯುರೋಪಿನ ತೆರಿಗೆದಾರರು ಉಕ್ರೇನ್ ಅನ್ನು ರಕ್ಷಿಸಲು ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಬೇಕಾಗಿದೆ ಎಂದು ಬರೆದಿದ್ದಾರೆ.
ನವಾರೊ ಅವರು ಲೇಖನದಲ್ಲಿ, ಭಾರತ ರಷ್ಯಾಕ್ಕೆ ನೀಡುತ್ತಿರುವ ಆರ್ಥಿಕ ಸಹಾಯದಿಂದಾಗಿಯೇ ಅಮೇರಿಕಾ ಭಾರತದ ಮೇಲೆ ಹೆಚ್ಚಿನ ಆಮದು ತೆರಿಗೆಯನ್ನು ಹೇರಿದೆ. ವ್ಯಾಪಾರದ ಅಡೆತಡೆಗಳಿಂದಾಗಿ, ಭಾರತವೇ ಅಮೇರಿಕಾದ ರಫ್ತುಗಳಿಗೆ ತನ್ನ ಬಾಗಿಲುಗಳನ್ನು ಮುಚ್ಚಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
‘ಭಾರತವು ರಷ್ಯಾ ಮತ್ತು ಚೀನಾ ಜೊತೆಗಿನ ನಿಕಟತೆಯನ್ನು ನಿಲ್ಲಿಸಬೇಕು!’
ನವಾರೊ ಅವರು ತಮ್ಮ ಲೇಖನದಲ್ಲಿ, ಅಮೇರಿಕಾದ ಕಾರ್ಯತಂತ್ರದ ಪಾಲುದಾರನಾಗಲು ಭಾರತವು ರಷ್ಯಾ ಮತ್ತು ಚೀನಾ ಜೊತೆಗಿನ ತನ್ನ ನಿಕಟತೆಯನ್ನು ಕೊನೆಗೊಳಿಸಬೇಕು. ಸಂಪೂರ್ಣ ಲೇಖನದಲ್ಲಿ ನವಾರೊ ಅವರು ಭಾರತಕ್ಕೆ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಒಟ್ಟಾರೆಯಾಗಿ, ನವಾರೊ ಅವರು ತಮ್ಮ ಲೇಖನದ ಮೂಲಕ ಭಾರತವನ್ನು ಖಳನಾಯಕನಂತೆ ಬಿಂಬಿಸಲು ಪ್ರಯತ್ನ ಮಾಡಿದ್ದಾರೆ.
ಸಂಪಾದಕೀಯ ನಿಲುವುಭಾರತಕ್ಕೆ ಸರಿಯಾಗಿಯೇ ತಿಳಿದಿದೆ, ರಷ್ಯಾ-ಉಕ್ರೇನ್ ಯುದ್ಧ ಕೇವಲ ಒಂದು ನೆಪವಾಗಿದ್ದು, ಅಮೇರಿಕಾ ದೇಶವು ಭಾರತದ ಕೃಷಿ ಮಾರುಕಟ್ಟೆಯಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸಲು ಬಯಸುತ್ತಿದೆ. ಆದ್ದರಿಂದ, ಅಮೇರಿಕಾದವರು ಈ ರೀತಿಯಾಗಿ ಎಷ್ಟೇ ಒತ್ತಡ ಹೇರಿದರೂ, ಭಾರತ ಅದಕ್ಕೆ ಬಗ್ಗುವುದಿಲ್ಲ ಎಂಬುದನ್ನು ಅಮೇರಿಕಾ ಅರ್ಥಮಾಡಿಕೊಳ್ಳಬೇಕು. |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation