ಶಿಕ್ಷಣ ಸಚಿವರು ತಪ್ಪನ್ನು ಒಪ್ಪಿಕೊಂಡು, ಪುಸ್ತಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು

ತಿರುವನಂತಪುರಂ (ಕೇರಳ) – ಕೇರಳ ರಾಜ್ಯದ ಶಾಲಾ ಪುಸ್ತಕದಲ್ಲಿ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಬ್ರಿಟಿಷರಿಗೆ ಹೆದರಿ ಜರ್ಮನಿಗೆ ಓಡಿಹೋದರು ಎಂದು ಹೇಳಲಾಗಿತ್ತು. ಕೇರಳ ಸರಕಾರವು ಈ ತಪ್ಪನ್ನು ಒಪ್ಪಿಕೊಂಡಿದ್ದು, ಅದನ್ನು ಸರಿಪಡಿಸಲಾಗಿದೆ ಎಂದು ಹೇಳಿಕೊಂಡಿದೆ. ನಾಲ್ಕನೇ ತರಗತಿಯ ಶಿಕ್ಷಕರಿಗೆ ನೀಡಿದ ಪುಸ್ತಕದಲ್ಲಿ (‘ಶಿಕ್ಷಕರ ಕೈಪಿಡಿ’ಯಲ್ಲಿ) ಈ ತಪ್ಪು ಕಂಡುಬಂದಿತ್ತು. ವಿರೋಧ ಪಕ್ಷಗಳು ಸರಕಾರವನ್ನು ಪ್ರಶ್ನಿಸಿದಾಗ, ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ತಪ್ಪನ್ನು ಒಪ್ಪಿಕೊಂಡರು. ಈ ಪುಸ್ತಕವನ್ನು ತಯಾರಿಸಿದ ಸಮಿತಿಯ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು. ಭವಿಷ್ಯದಲ್ಲಿ ಅವರಿಗೆ ಸಮಿತಿಯಲ್ಲಿ ಸ್ಥಾನ ನೀಡುವುದಿಲ್ಲ ಎಂದು ಸಹ ಘೋಷಿಸಿದರು.
ಮಾರುಕಟ್ಟೆ ಅಥವಾ ಶಾಲೆಗಳಲ್ಲಿನ ಶಿಕ್ಷಕರಿಗೆ ತಲುಪಿದ ಪುಸ್ತಕಗಳನ್ನು ಹಿಂಪಡೆಯಲಾಗಿದೆ, ಮತ್ತು ತಿದ್ದುಪಡಿ ಮಾಡಿದ ಹೊಸ ಪುಸ್ತಕಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಜೊತೆಗೆ, ಆನ್‌ಲೈನ್‌ನಲ್ಲಿ ಲಭ್ಯವಿರುವ ಪುಸ್ತಕದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದರು.
Press Release –
ABVP compels Kerala Government to correct false slander on Netaji Subhas Chandra Bose; Distorted history to be corrected after ABVP’s strong interventionABVP’s resistance forces Kerala Government to rectify anti-national blunders in textbooks maligning Netaji… pic.twitter.com/iYZzna2yyA
— ABVP (@ABVPVoice) August 18, 2025
ಸಂಪಾದಕೀಯ ನಿಲುವುವಾಸ್ತವದಲ್ಲಿ ಇಂತಹ ತಪ್ಪು ಹೇಗೆ ಆಗುತ್ತದೆ? ಈ ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಆವಶ್ಯಕ! |
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ