ಹಿಂದೂ ಸಂಘಟನೆಗಳಿಂದ ಆಕ್ಷೇಪ

ಗಾಜಿಯಾಬಾದ (ಉತ್ತರ ಪ್ರದೇಶ) – ನಗರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸೊಹೈಲ್ ಖಾನನಿಂದ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿರುವ ವಿಡಿಯೊ ಒಂದು ವೈರಲ್ ಆಗಿದೆ. ಇದರಲ್ಲಿ ಆತ ಜನ್ಮಾಷ್ಟಮಿಯ ದಿನದಂದು ದೇವಸ್ಥಾನದೊಳಗೆ ನಿಂತು, ‘ಅಲ್ಲಾಹ ಒಬ್ಬನೇ, ಅವನ ಹೊರತು ಪೂಜೆಗೆ ಬೇರೆ ಯಾರೂ ಯೋಗ್ಯರಲ್ಲ’ ಎಂಬಂತಹ ಸಾಲುಗಳಿರುವ ಹಾಡನ್ನು ಹಾಕಿ ಅದರ ವಿಡಿಯೊ ಮಾಡಿದ್ದಾನೆ. ಹಿಂದೂ ಸಂಘಟನೆಗಳು ಇದನ್ನು ಧಾರ್ಮಿಕ ಸೌಹಾರ್ದಕ್ಕೆ ವಿರುದ್ಧವಾದದ್ದು ಎಂದು ಆಕ್ಷೇಪ ವ್ಯಕ್ತಪಡಿಸಿವೆ. ಹಿಂದೂಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಸೊಹೈಲ್ ಖಾನ್ ವಿರುದ್ಧ ಗಾಜಿಯಾಬಾದ ಪೊಲೀಸರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. (ವಾಸ್ತವವಾಗಿ, ಹಿಂದೂಗಳಿಗೆ ಇಂತಹ ಬೇಡಿಕೆಗಳನ್ನು ಸಲ್ಲಿಸುವ ಪರಿಸ್ಥಿತಿ ಏಕೆ ಬರುತ್ತದೆ? ಇಂತಹ ಮತಾಂಧ ಪೊಲೀಸ್ ಸಿಪಾಯಿ ಮೇಲೆ ಪೊಲೀಸರು ಏಕೆ ಕ್ರಮ ಕೈಗೊಳ್ಳುವುದಿಲ್ಲ? – ಸಂಪಾದಕರು) ಕೆಲವು ಹಿಂದೂಗಳು ಈ ಬಗ್ಗೆ ಗಾಜಿಯಾಬಾದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗಾಜಿಯಾಬಾದ ಪೊಲೀಸ್ ಆಯುಕ್ತರು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ‘ಹಿಂದೂ ರಕ್ಷಾ ದಳ’ದ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪಿಂಕಿ ಚೌಧರಿ ಅವರು ‘ಎಕ್ಸ್’ ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಗಾಜಿಯಾಬಾದ ಪೊಲೀಸ್ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಸೊಹೈಲ್ ಖಾನ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗಾಜಿಯಾಬಾದ್ ಪೊಲೀಸರು ಈ ವಿಡಿಯೊ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ತಪ್ಪು ಕೃತ್ಯಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇಂತಹ ಪೊಲೀಸರನ್ನು ಹೊಂದಿರುವ ಪೊಲೀಸ್ ಪಡೆಯು ಗಲಭೆಯ ಸಮಯದಲ್ಲಿ ಸಂತ್ರಸ್ತ ಹಿಂದೂಗಳನ್ನು ರಕ್ಷಿಸುತ್ತದೆಯೇ? ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!