|

ಡೆಹರಾಡೂನ (ಉತ್ತರಾಖಂಡ) – ರಾಜ್ಯದ ಭಾಜಪ ಸರಕಾರವು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸ್ಥಾಪಿಸಲಾದ ಮದರಸಾ ಶಿಕ್ಷಣ ಮಂಡಳಿ ಕಾಯ್ದೆಯನ್ನು ರದ್ದುಗೊಳಿಸಲು ಸಂಪುಟದ ವಿಶೇಷ ಸಭೆಯಲ್ಲಿ ನಿರ್ಧರಿಸಿದೆ. ಈ ಮಂಡಳಿಯ ಬದಲಾಗಿ ‘ಉತ್ತರಾಖಂಡ ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಗಳ ವಿಧೇಯಕ, 2025’ ಅನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗುವುದು. ಇದರಿಂದಾಗಿ ಇಲ್ಲಿಯವರೆಗೆ ಕೇವಲ ಮುಸ್ಲಿಂ ಮದರಸಾಗಳಿಗೆ ಮಾತ್ರ ದೊರೆಯುತ್ತಿದ್ದ ಅಲ್ಪಸಂಖ್ಯಾತ ಸಂಸ್ಥೆಯ ಪ್ರಯೋಜನವು ಈಗ ಸಿಖ್, ಜೈನರು ಮತ್ತು ಇತರ ಅಲ್ಪಸಂಖ್ಯಾತ ಧರ್ಮಗಳ ಶಿಕ್ಷಣ ಸಂಸ್ಥೆಗಳಿಗೂ ಲಭ್ಯವಾಗಲಿವೆ.
1. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ‘ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ, 2016’ ಮತ್ತು ‘ಉತ್ತರಾಖಂಡ ಸರಕಾರೇತರ ಅರಬಿ ಮತ್ತು ಪರ್ಷಿಯನ್ ಮದರಸಾ ಮಾನ್ಯತೆ ನಿಯಮಗಳು, 2019’ ಅನ್ನು 1 ಜುಲೈ 2026 ರಿಂದ ರದ್ದುಗೊಳಿಸಲಾಗುವುದು. ಇದರ ನಂತರ, ರಾಜ್ಯ ಸರಕಾರದ ಅಲ್ಪಸಂಖ್ಯಾತ ಸಂಸ್ಥೆಯ ಪ್ರಯೋಜನವನ್ನು ಪಡೆಯಲು, ಎಲ್ಲಾ ಸಂಸ್ಥೆಗಳು ಒಂದು ಮಂಡಳಿಯಿಂದ ಅನುಮತಿ ಪಡೆಯಬೇಕಾಗುತ್ತದೆ ಮತ್ತು ನೋಂದಾಯಿಸಿಕೊಳ್ಳಬೇಕಾಗುತ್ತದೆ, ಜೊತೆಗೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಗುರುಮುಖಿ ಮತ್ತು ಪಾಲಿ ಭಾಷೆಗಳ ಅಧ್ಯಯನ ಸಾಧ್ಯವಾಗಲಿದೆ. ಇದರ ಪರಿಣಾಮವಾಗಿ ಈ ಭಾಷೆಗಳ ಅಭಿವೃದ್ಧಿಗೆ ಮಾರ್ಗ ಸುಗಮವಾಗಲಿದೆ.

2. ‘ಉತ್ತರಾಖಂಡ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಪ್ರಾಧಿಕಾರ’ ಎಂಬ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು, ಇದು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯ ಸ್ಥಾನಮಾನವನ್ನು ಒದಗಿಸುತ್ತದೆ. ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಅಥವಾ ಪಾರ್ಸಿ ಸಮುದಾಯಗಳು ಸ್ಥಾಪಿಸಿದ ಯಾವುದೇ ಶೈಕ್ಷಣಿಕ ಸಂಸ್ಥೆಯು ‘ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆಯ ಸ್ಥಾನಮಾನ’ ಪಡೆಯಬೇಕಾದರೆ ಈ ಪ್ರಾಧಿಕಾರದಿಂದ ಮಾನ್ಯತೆ ಪಡೆಯುವುದು ಕಡ್ಡಾಯವಾಗಿದೆ.
ಸಂಪಾದಕೀಯ ನಿಲುವುಉತ್ತರಾಖಂಡದ ಭಾಜಪ ಸರಕಾರ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾದರೆ, ಇತರ ರಾಜ್ಯಗಳ ಸರಕಾರಗಳೂ ಕೂಡ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!