9 ವರ್ಷಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ 3 ಸಾವಿರದ 405ರಷ್ಟು ಕೈದಿಗಳ ಸಂಖ್ಯೆ ಹೆಚ್ಚಾಗಿದೆ

ನವದೆಹಲಿ – ಪ್ರಪಂಚದಾದ್ಯಂತದ 70ಕ್ಕೂ ಹೆಚ್ಚು ದೇಶಗಳಲ್ಲಿ 10 ಸಾವಿರದ 574 ಭಾರತೀಯ ನಾಗರಿಕರು ಜೈಲಿನಲ್ಲಿದ್ದಾರೆ. ಇವುಗಳಲ್ಲಿ 14 ದೇಶಗಳಲ್ಲಿ 100ಕ್ಕಿಂತ ಹೆಚ್ಚು ಭಾರತೀಯರು ಜೈಲಿನಲ್ಲಿದ್ದಾರೆ. ಅಲ್ಲದೆ, 11 ದೇಶಗಳಲ್ಲಿ 43 ಭಾರತೀಯರಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದೆ.
ಹಲವು ದೇಶಗಳಲ್ಲಿನ ಕಠಿಣ ಗೌಪ್ಯತೆ ಕಾನೂನುಗಳಿಂದಾಗಿ ಎಲ್ಲ ಪ್ರಕರಣಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವುದು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಅನೇಕ ದೇಶಗಳಲ್ಲಿ, ಸಂಬಂಧಿಸಿದ ಕೈದಿಯ ಅನುಮತಿಯಿಲ್ಲದೆ ಮಾಹಿತಿಯನ್ನು ಬಹಿರಂಗಪಡಿಸಲಾಗುವುದಿಲ್ಲ.
ವಿದೇಶಿ ಜೈಲುಗಳಲ್ಲಿ ಮರಣದಂಡನೆಗೆ ಒಳಗಾದ 43 ಭಾರತೀಯರಲ್ಲಿ, ಅತಿ ಹೆಚ್ಚು 21 ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ, ನಂತರ ಸೌದಿ ಅರೇಬಿಯಾದಲ್ಲಿ 7, ಚೀನಾದಲ್ಲಿ 4, ಇಂಡೋನೇಷ್ಯಾದಲ್ಲಿ 3, ಯೆಮೆನ್‌ನಲ್ಲಿ 1 ಮತ್ತು ಇತರ ಕೆಲವು ದೇಶಗಳಸಮಾವೇಶ ಇದೆ. ಶ್ರೀಲಂಕಾದ ಜೈಲಿನಲ್ಲಿ 28 ಭಾರತೀಯ ಮೀನುಗಾರರು ಬಂಧಿತರಾಗಿದ್ದಾರೆ. ಕಳೆದ 9 ವರ್ಷಗಳಲ್ಲಿ, ಕೊಲ್ಲಿ ರಾಷ್ಟ್ರಗಳಲ್ಲಿ 3 ಸಾವಿರದ 405 ರಷ್ಟು ಕೈದಿಗಳ ಸಂಖ್ಯೆ ಹೆಚ್ಚಾಗಿದೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft