
ನವದೆಹಲಿ – ಇಸ್ರೇಲ್ ಗಾಜಾದಲ್ಲಿ 60 ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ, ಅದರಲ್ಲಿ 18 ಸಾವಿರದ 430 ಮಕ್ಕಳು ಸೇರಿದ್ದಾರೆ. ಇಸ್ರೇಲ್ ನಾಗರಿಕರ ಮೇಲೆ ದಾಳಿಗಳನ್ನು ಮಾಡುತ್ತಿರುವಾಗ, ಭಾರತ ಸರಕಾರ ಪ್ಯಾಲೆಸ್ತೀನ್ ಜನರ ದುಃಖದ ಬಗ್ಗೆ ಮೌನವಾಗಿ ಕುಳಿತಿದೆ. ಗಾಜಾದಲ್ಲಿ ನೂರಾರು ಜನರು ಹಸಿವಿನಿಂದ ಸತ್ತಿದ್ದಾರೆ ಮತ್ತು ಲಕ್ಷಾಂತರ ಜನರು ಹಸಿವಿನ ಅಪಾಯದಲ್ಲಿದ್ದಾರೆ. ಮೌನದಿಂದ ಇಂತಹ ಅಪರಾಧಗಳನ್ನು ಉತ್ತೇಜಿಸುವುದು ಕೂಡ ಒಂದು ಅಪರಾಧ ಎಂದು ಪ್ರಿಯಾಂಕಾ ವಾಡ್ರಾ ಅವರು ಭಾರತ ಸರಕಾರವನ್ನು ಟೀಕಿಸಿದ್ದಾರೆ.
ಹೆಚ್ಚಿನ ನಾಗರಿಕರ ಸಾವು ಹಮಾಸನ ಹೇಯ ತಂತ್ರಗಳ ಪರಿಣಾಮ ! – ಇಸ್ರೇಲ್

ಪ್ರಿಯಾಂಕಾ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವೆನ್ ಇವರು, ಇಸ್ರೇಲ್ 25 ಸಾವಿರ ಹಮಾಸ್ ಭಯೋತ್ಪಾದಕರನ್ನು ಕೊಂದಿದೆ. ಹೆಚ್ಚಿನ ನಾಗರಿಕರ ಸಾವು ಹಮಾಸ್ ನ ಹೇಯ ರಣತಂತ್ರಗಳ ಪರಿಣಾಮವಾಗಿದೆ. ಅವರ ಭಯೋತ್ಪಾದಕರು ನಾಗರಿಕರ ಹಿಂದೆ ಅಡಗಿರುತ್ತಾರೆ ಮತ್ತು ಜನರು ಓಡಿ ಹೋಗದಂತೆ ಅಥವಾ ಸಹಾಯಕ್ಕಾಗಿ ಕೇಳದಂತೆ ತಡೆಯುತ್ತಾರೆ.
ಇಸ್ರೇಲ್ ಗಾಜಾಗೆ 20 ಲಕ್ಷ ಟನ್ ಆಹಾರವನ್ನು ತಲುಪಿಸಿತು; ಆದರೆ ಹಮಾಸ್ ಅದನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿತು, ಇದರಿಂದಾಗಿ ಹಸಿವು ಉಂಟಾಯಿತು. ಕಳೆದ 50 ವರ್ಷಗಳಲ್ಲಿ ಗಾಜಾದ ಜನಸಂಖ್ಯೆ ಶೇ.450 ರಷ್ಟು ಹೆಚ್ಚಾಗಿದೆ. ಜನರು ಹಮಾಸ್ ನ ಅಂಕಿಅಂಶಗಳನ್ನು ನಂಬಬಾರದು ಎಂದು ಅವರು ಹೇಳಿದರು.
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister