ಶ್ರೀ ತುಳಜಾಭವಾನಿ ದೇವಸ್ಥಾನದ ಗರ್ಭಗುಡಿಯಲ್ಲಿ ಇಲಿಗಳ ಓಡಾಟ ! – Rats Sri Tulja Bhavani Temple

ಭಕ್ತರಿಂದ ಅಸಮಾಧಾನ

ಧಾರಾಶಿವ – ಜಿಲ್ಲೆಯ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಇಲಿಗಳು ಓಡಾಡುತ್ತಿರುವ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೇವಸ್ಥಾನವನ್ನು ಮುಚ್ಚಿದ ನಂತರ ಶ್ರೀ ತುಳಜಾಭವಾನಿ ದೇವಿಯ ಗರ್ಭಗುಡಿಯಲ್ಲಿ ಇಲಿಗಳು ಓಡಾಡುವುದು ದೇವಸ್ಥಾನದ ಆನ್‌ಲೈನ್ ದರ್ಶನದ ಸಮಯದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

ಗುಜರಾತ್‌ನ ಭಾವನಗರದ ಭಕ್ತರಾದ ಶ್ರೀ. ಹಿತೇಶ ಭಾಯಿ ಜಾನಿ ಅವರು ಈ ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇಲಿಗಳ ಹಾವಳಿಯನ್ನು ತಕ್ಷಣವೇ ನಿಯಂತ್ರಿಸುವಂತೆ ಒತ್ತಾಯಿಸಿದ್ದಾರೆ. ರಾತ್ರಿಯಿಡೀ ಗರ್ಭಗುಡಿಯಲ್ಲಿ ಓಡಾಡುವ ಇಲಿಗಳಿಂದ ಶ್ರೀ ತುಳಜಾಭವಾನಿ ದೇವಿಯ ಪುರಾತನ ಆಭರಣಗಳಿಗೆ ಹಾನಿಯಾಗುವ ಭೀತಿ ಇದೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಭಕ್ತರ ಪ್ರಕಾರ, ದೇವಸ್ಥಾನದ ಆಡಳಿತವು ಈ ವಿಷಯದಲ್ಲಿ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಗರ್ಭಗುಡಿಯ ಶುಚಿತ್ವ ಮತ್ತು ಸುರಕ್ಷತೆಯ ಬಗ್ಗೆ ಗಮನಹರಿಸಬೇಕು. ಈ ವಿಷಯದ ಬಗ್ಗೆ ದೇವಿಯ ಅರ್ಚಕರು ದೇವಸ್ಥಾನದ ಆಡಳಿತಕ್ಕೆ ಪತ್ರವನ್ನೂ ಬರೆದಿದ್ದರು; ಆದರೆ, ಈ ವಿಷಯದ ಬಗ್ಗೆ ಇನ್ನೂ ಯಾವುದೇ ಪರಿಹಾರವನ್ನು ಕಂಡುಹಿಡಿದಿಲ್ಲ.

ಸಂಪಾದಕೀಯ ನಿಲುವು

ದೇವಸ್ಥಾನದ ಸರಕಾರೀಕರಣದ ದುಷ್ಪರಿಣಾಮಗಳು! ದೇವಸ್ಥಾನದ ಸಣ್ಣಪುಟ್ಟ ಸಮಸ್ಯೆಗಳನ್ನೂ ದೇವಸ್ಥಾನದ ಆಡಳಿತಕ್ಕೆ ಪರಿಹರಿಸಲು ಸಾಧ್ಯವಾಗದಿರುವುದು ನಾಚಿಕೆಗೇಡಿನ ಸಂಗತಿ!