ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಅಸೀಮ್ ಮುನಿರ್ ಅಮೇರಿಕಾದಲ್ಲಿರುವಾಗ ಘೋಷಣೆ

ವಾಷಿಂಗ್ಟನ್ ಡಿ ಸಿ (ಅಮೇರಿಕಾ) – ಬಲುಚ್ ಲಿಬ್ರೇಶನ್ ಆರ್ಮಿ (ಬಿಎಲ್ಎ) ಮತ್ತು ಅದಕ್ಕೆ ಸಂಬಂಧಪಟ್ಟಿರುವ ‘ಮಾಜಿದ್ ಬ್ರಿಗೇಡ್’ ಸಂಘಟನೆಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಅಮೇರಿಕಾ ಘೋಷಿಸಿದೆ. ಈ ನಿಷೇಧದ ಬಳಿಕ ಯಾರಾದರೂ ಈ ಸಂಘಟನೆಗೆ ಹಣ, ಶಸ್ತ್ರಾಸ್ತ್ರ ಅಥವಾ ಇತರ ಸಹಾಯ ಮಾಡಿದರೆ, ಅದನ್ನು ಅಕ್ರಮ ಎಂದು ತಿಳಿದು ಅವರ ವಿರುದ್ಧ ಕೂಡ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಪಾಕಿಸ್ತಾನ ಸೈನ್ಯದ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅಮೇರಿಕಾ ಪ್ರವಾಸದಲ್ಲಿರುವಾಗ ಈ ಘೋಷಣೆ ಮಾಡಲಾಗಿದೆ.
ಭಯೋತ್ಪಾದಕ ಕಾರ್ಯ ಚಟುವಟಿಕೆ ತಡೆಯುವುದಕ್ಕಾಗಿ ಈ ನಿಷೇಧ ಪರಿಣಾಮಕಾರಿ ಮಾರ್ಗವಾಗಿದೆ
ಅಮೇರಿಕಾದ ವಿದೇಶಾಂಗ ಸಚಿವ ಮಾರ್ಕೊ ರುಬಿಯೋ ಇವರು ನಿಷೇಧ ಹೇರಿರುವ ಮಾಹಿತಿ ನೀಡುತ್ತಾ, ೨೦೨೪ ರಲ್ಲಿ ನಡೆದಿರುವ ಕರಾಚಿ ವಿಮಾನ ನಿಲ್ದಾಣದ ಹತ್ತಿರ ಮತ್ತು ‘ಗ್ವಾದರ ಪೋರ್ಟ್ ಆಥಾರಿಟಿ ಕಾಂಪ್ಲೆಕ್ಸ್ ‘ ನಲ್ಲಿ ನಡೆದಿರುವ ಆತ್ಮಹುತಿದಾಳಿಯ ಹೊಣೆಯನ್ನು ಬಿಎಲ್ಎ ವಹಿಸಿತ್ತು. ಮಾರ್ಚ್ ೨೦೨೫ ರಲ್ಲಿ ಜಾಫರ್ ಎಸ್ಪ್ರೆಸ್ ರೈಲು ಅಪಹರಣ ನಡೆಸಿರುವ ಜವಾಬ್ದಾರಿಯನ್ನು ಕೂಡ ಈ ಸಂಘಟನೆ ವಹಿಸಿತ್ತು. ಈ ಅಪಹರಣದ ವೇಳೆ ೩೧ ನಾಗರೀಕರು ಮತ್ತು ಸುರಕ್ಷಾ ಕರ್ಮಿಗಳು ಮತ್ತು ೩೦೦ ಕಿಂತಲೂ ಹೆಚ್ಚಿನ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಲಾಗಿತ್ತು. ಅಮೇರಿಕಾದ ವಿದೇಶಾಂಗ ಇಲಾಖೆಯಿಂದ ಈ ಸಂಘಟನೆಯ ಮೇಲೆ ಹೇರಿರುವ ನಿಷೇಧದಿಂದ ಟ್ರಂಪ್ ಸರಕಾರ ಭಯೋತ್ಪಾದಕರ ವಿರುದ್ಧ ಹೋರಾಡುವಲ್ಲಿನ ವಚನ ಬದ್ಧತೆ ಪ್ರತಿಬಿಂಬಿಸುವುದು ಕಂಡು ಬರುತ್ತಿದೆ. ಇದರ ಪ್ರಕಾರ ಭಯೋತ್ಪಾದಕ ಸಂಘಟನೆ ಘೋಷಿಸುವುದು, ಒಂದು ಮಹತ್ವದ ನಿಲುವಾಗಿದೆ. ಭಯೋತ್ಪಾದಕ ಚಟುವಟಿಕೆಗೆ ದೊರೆಯುವ ಬೆಂಬಲ ತಡೆಯುವಲ್ಲಿ ನಿಷೇಧ ಒಂದು ಪ್ರಭಾವಿ ಮಾರ್ಗವಾಗಿದೆ ಎಂದು ಮಾರ್ಕೊ ಹೇಳಿದರು.
ಬಿಎಲ್ಎ ಬಲುಚಿಸ್ಥಾನದ ಸ್ವಾತಂತ್ರಕ್ಕಾಗಿ ಹೋರಾಡುತ್ತದೆ !
ಬಲುಚ್ ಲಿಬ್ರೇಶನ್ ಆರ್ಮಿ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತದ ಸ್ವಾತಂತ್ರಕ್ಕಾಗಿ ಹೋರಾಡುವ ಸಂಘಟನೆಯಾಗಿದೆ. ಈ ಸಂಘಟನೆ ೨೦೦೦ ಇಸ್ವಿಯ ದಶಕದ ಆರಂಭದಲ್ಲಿ ಸ್ಥಾಪನೆ ಆಗಿದ್ದು ಮತ್ತು ಈ ಹಿಂದೆ ಅನೇಕ ದೇಶಗಳು ಅದನ್ನು ‘ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸಿದೆ . ಈ ಸಂಘಟನೆ ಪಾಕಿಸ್ತಾನಿ ಸೈನ್ಯ, ಸರಕಾರ ಮತ್ತು ಚೀನಾದ ಯೋಜನೆಯನ್ನು ಗುರಿ ಮಾಡುತ್ತದೆ. ಬಿಎಲ್ಎ ತನ್ನ ಗೊರಿಲ್ಲಾ ಶೈಲಿಯ ಯುದ್ಧಕ್ಕಾಗಿ ಗುರುತಿಸಲ್ಪಡುತ್ತದೆ. ಗೊರಿಲ್ಲಾ ಶೈಲಿ ಯುದ್ಧವೆಂದರೆ, ಗುಡ್ಡಗಾಡ ಪ್ರದೇಶದಲ್ಲಿ ಅಡಗಿ ಕುಳಿತು ಸೈನ್ಯದ ಮೇಲೆ ದಾಳಿ ನಡೆಸುವುದು ಮತ್ತು ತಕ್ಷಣ ಹಿಂತಿರುಗುವುದು ಈ ಸಂಘಟನೆಯ ವೈಶಿಷ್ಟ್ಯವಾಗಿದೆ. ಬಿಎಲ್ಎ ಪ್ರಕಾರ, ಬಲೂಚಿಸ್ತಾನದ ನೈಸರ್ಗಿಕ ಸಂಪತ್ತನ್ನು ಶೋಷಣೆ ಮಾಡಲಾಗುತ್ತಿದ್ದು ಬಲುಚ್ ಜನರ ಅಧಿಕಾರ ಕಸಿದುಕೊಳ್ಳಲಾಗುತ್ತಿದೆ .’ಬಲುಚ್ ನಾಯಕ ಮೀರ್ ಯಾರ್ ಬಲೋಚ್ ಅವರು ಮೇ ೧೪.೨೦೨೫ ರಂದು ಬಲೂಚಿಸ್ತಾನವನ್ನು ಪಾಕಿಸ್ತಾನದಿಂದ ಸ್ವತಂತ್ರ ಪಡೆಯುವ ಘೋಷಣೆ ಮಾಡಿದ್ದರು. ಬಲುಚ್ ಜನರ ವಿರುದ್ಧ ದಶಕಗಳಿಂದ ನಡೆಯುತ್ತಿರುವ ಮಾನವ ಅಧಿಕಾರದ ಉಲ್ಲಂಘನೆ , ಅಪಹರಣ ಮತ್ತು ಹಿಂಸಾಚಾರವೇ ಈ ಘೋಷಣೆಗೆ ಕಾರಣ ಎಂದು ಅವರು ಹೇಳಿದರು. ಮೀರ್ ಯಾರ್ ಬಲೋಜ್ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ‘ಬಲುಚಿಸ್ತಾನದ ಜನರು ಅವರ ರಾಷ್ಟ್ರೀಯ ನಿರ್ಧಾರ ನೀಡಿದ್ದಾರೆ ಮತ್ತು ಜಗತ್ತು ಇನ್ನು ಸುಮ್ಮನೆ ಕೂರಬಾರದು. ನಮಗೆ ಸಹಕರಿಸಬೇಕು.’
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದರೆ ಅ,ಮೇರಿಕಾಕ್ಕೆ ಒಂದು ನಿಜವಾದ ಸ್ನೇಹಿತ ದೊರೆಯುವುದು ! – ಹಿರಿಯ ಬಲುಚ್ ನಾಯಕ ಮೀರ್ ಯಾರ್ ಬಲೋಚ್

ಅಮೇರಿಕಾದ ನಿಷೇಧದ ಬಗ್ಗೆ ಹಿರಿಯ ಬಲುಚ್ ನಾಯಕ ಮೀರ್ ಯಾರ್ ಬಲೋಚ್ ಅವರು ಮಾತನಾಡಿ, ಬಲೂಚಿಸ್ತಾನದ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದರೆ ಅಮೇರಿಕಾಗೆ ಓರ್ವ ನಿಜವಾದ ಸ್ನೇಹಿತ, ಹಾಗೂ ಉದಾರ, ಸ್ಥಿರ ಮತ್ತು ಪ್ರಜಾಪ್ರಭುತ್ವದ ಮೌಲ್ಯವಿರುವ ದೇಶ ದೊರೆಯುವುದು. ಪಾಕಿಸ್ತಾನದ ಭ್ರಷ್ಟ ಸೈನಿಕ ಅಧಿಕಾರಿಗಳಿಗಿಂತ ನಮ್ಮ ದೇಶ ಉತ್ತಮವಾಗಿರಲಿದೆ. ಪಾಕಿಸ್ತಾನದ ಅಧಿಕಾರಿಗಳನ್ನು ಅವರ ಜನರೇ ತಿರಸ್ಕರಿಸಿದ್ದಾರೆ. ಬಲುಚಿಸ್ತಾನದ ಜನರು ೭೮ ರಿಂದ ಪಾಕಿಸ್ತಾನಿ ಸೈನ್ಯದ ಭಯೋತ್ಪಾದನೆ ಮತ್ತು ಆರ್ಥಿಕ ಲೂಟಿಯ ಜೊತೆಗೆ ಹೋರಾಡುತ್ತಿದೆ ಎಂದು ಹೇಳಿದರು.
12 August, 2025 #RepublicOfBalochistan :
The Baloch are not terrorists. They are a nation that has endured 78 long years of state terrorism, economic plunder, radioactive poisoning from Pakistan’s nuclear tests, foreign invasion, and brutal occupation by the extremist and… pic.twitter.com/yLrvCdiIuH— Mir Yar Baloch (@miryar_baloch) August 11, 2025
ಬಲುಚ್ ಜನರು ಯಾವಾಗಲೂ ಅಮೇರಿಕಾಗೆ ಸಹಕಾರ ನೀಡಿದ್ದಾರೆ !
ಮೀರ್ ಯಾರ ಬಲೋಚ್ ಮಾತು ಮುಂದುವರೆಸಿ, ಸಂಪೂರ್ಣ ಇತಿಹಾಸದಲ್ಲಿ ಬಲುಚಿಯರು ಅಮೇರಿಕಾದ ಬಗ್ಗೆ ಯಾವಾಗಲೂ ಒಳ್ಳೆಯ ದೃಷ್ಟಿಕೋನ ಇಟ್ಟುಕೊಂಡಿದ್ದಾರೆ. ಅಷ್ಟೇ ಏಕೆ ಸೋವಿಯತ್ ಯೂನಿಯನ್ ನಿಂದ ಅಪಘಾನಿಸ್ತಾನದ ಮೇಲೆ ದಾಳಿ ಮಾಡಿದಾಗಲೂ ಕೂಡ ಬಲುಚಿ ಜನರು ಎಂದಿಗೂ ಅಮೇರಿಕಾ ಸೈನ್ಯದ ವಿರುದ್ಧ ಶಸ್ತ್ರವನ್ನು ಉಪಯೋಗಿಸಲಿಲ್ಲ. ಅಮೇರಿಕಾದಲ್ಲಿ ಸಪ್ಟೆಂಬರ್ ೧೧.೨೦೦೧ ರ ದಾಳಿಯ ನಂತರ ‘ನಾಟೊ’ (ನಾರ್ತ್ ಅಟಲಾಂಟಿ ಕಾ ಟ್ರೀಟಿ ಆರ್ಗನೈಜೇಷನ್ ಹೆಸರಿನ ಜಗತ್ತಿನ ೨೯ ದೇಶಗಳ ಸಹಭಾಗವಿರುವ ಒಂದು ಸೈನಿಕ ಸಂಘಟನೆ) ಪೂರೈಕೆಯ ಮಾರ್ಗ ಬಲೂಚಿಸ್ತಾನದಿಂದಲೇ ಹಾದು ಹೋಗುತ್ತಿತ್ತು ; ಆದರೆ ಬಲುಚ್ ಸ್ವಾತಂತ್ರ್ಯ ಸೈನಿಕರಿಂದ ಎಂದಿಗೂ ಅಮೇರಿಕಾ ಪಡೆಗಳ ಮೇಲೆ ದಾಳಿ ನಡೆದಿಲ್ಲ ಎಂದರು.
ಸಂಪಾದಕೀಯ ನಿಲುವುಇದರಿಂದ ಗಮನಕ್ಕೆ ಬರುವುದೇನೆಂದರೆ, ಅಮೇರಿಕಾ ಪಾಕಿಸ್ತಾನವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದು ಈಗ ಪಾಕ್ ಅನ್ನು ಭಾರತದ ವಿರುದ್ಧ ಬಳಸುವುದು. ಈಗ ಭಾರತವು ಪಾಕಿಸ್ತಾನದ ಜೊತೆಗೆ ಅಮೇರಿಕಾಗೆ ಕೂಡ ಪಾಠ ಕಲಿಸಲು ಸಿದ್ಧವಾಗಬೇಕು ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!