ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿರೋಧದ ನಂತರ ಪೊಲೀಸರಿಂದ ತನಿಖೆ ಆರಂಭ

ರಾಯಸೇನ (ಮಧ್ಯಪ್ರದೇಶ) – ರಾಯಸೇನ ಜಿಲ್ಲಾ ಕೇಂದ್ರ ಕಚೇರಿಯ ವಾರ್ಡ್ ನಂ. 3 ರಲ್ಲಿರುವ ಬೇಬಿ ಕಾನ್ವೆಂಟ್ ಸ್ಕೂಲ್ ಎಂಬ ಖಾಸಗಿ ಶಾಲೆಯಲ್ಲಿ ಇಸ್ಲಾಮಿಕ್ ಶಿಕ್ಷಣಕ್ಕೆ ಸಂಬಂಧಿಸಿದ ವಸ್ತುಗಳನ್ನು ವಿತರಿಸಿದ ಕಾರಣ ವಿವಾದ ಸೃಷ್ಟಿಯಾಗಿದೆ. ಈ ಶಾಲೆಯಲ್ಲಿ ಮಕ್ಕಳಿಗೆ ‘ಕಾ’ ಎಂದರೆ ‘ಕಾಬಾ’, ‘ಮ’ ಎಂದರೆ ‘ಮಸೀದಿ’ ಮತ್ತು ‘ನ’ ಎಂದರೆ ‘ನಮಾಜ್’ ಎಂಬ ಸಾಲುಗಳಿರುವ ಚಾರ್ಟ್ ವಿತರಿಸಲಾಗಿದೆ. ಅಲ್ಲದೆ, ಒಂದು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದ ಓದುವ ವಸ್ತುಗಳನ್ನು ತಯಾರಿಸಿ ಮಕ್ಕಳಿಗೆ ಹಂಚಲಾಗಿದೆ. ಇದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ (ಎಬಿವಿಪಿ) ತೀವ್ರವಾಗಿ ವಿರೋಧಿಸಿದೆ. ಈ ವಿವಾದದ ಕುರಿತು ಶಾಲಾ ಆಡಳಿತ ಮಂಡಳಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
📚 Raisen, MP: Convent school teaching kids “M” for Masjid & “N” for Namaz!
Police probing after ABVP protest.
Despite BJP rule for years, how do such schools dare push this?
The conspiracy behind giving Islamic education to Hindu children in a convent school must be… pic.twitter.com/bHTPnQoa7r
— Sanatan Prabhat (@SanatanPrabhat) August 9, 2025
1. ಎಬಿವಿಪಿ ಕಾರ್ಯಕರ್ತರು ಶಾಲೆಯ ಹೊರಗೆ ಘೋಷಣೆಗಳನ್ನು ಕೂಗಿದರು ಮತ್ತು ಶಾಲೆಯ ಮಾನ್ಯತೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಖಾಸಗಿ ಶಾಲೆಯಲ್ಲಿ ಧಾರ್ಮಿಕ ಶಿಕ್ಷಣ ನೀಡಿ ಮಕ್ಕಳ ಮೇಲೆ ಏಕಪಕ್ಷೀಯವಾಗಿ ಧಾರ್ಮಿಕ ಪ್ರಭಾವ ಬೀರಲಾಗುತ್ತಿದೆ, ಇದು ಶಿಕ್ಷಣ ನಿಯಮಗಳ ವಿರುದ್ಧ ಮತ್ತು ಸಾಮಾಜಿಕ ಸೌಹಾರ್ದತೆಗೆ ಅಡ್ಡಿ ಎಂದು ಸಂಘಟನೆ ಆರೋಪಿಸಿದೆ.
2. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶಾಲೆಗೆ ಭೇಟಿ ನೀಡಿ ಸಂಬಂಧಪಟ್ಟ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದು, ಈ ಘಟನೆಯ ಬಗ್ಗೆ ಶಿಕ್ಷಣ ಇಲಾಖೆಗೂ ಮಾಹಿತಿ ನೀಡಲಾಗಿದೆ.
3. ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಬಿವಿಪಿ ಎಚ್ಚರಿಕೆ ನೀಡಿದೆ.
4. ಒಬ್ಬ ಪೋಷಕರು, ಈ ವಸ್ತುಗಳು ಮಾರುಕಟ್ಟೆಯಲ್ಲಿ ಎಲ್ಲಿಯೂ ಲಭ್ಯವಿಲ್ಲ, ಸ್ವತಃ ಶಾಲೆಯೇ ಇದನ್ನು ಮುದ್ರಿಸಿಕೊಂಡಿದೆ, ಎಂದು ಆರೋಪಿಸಿದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!