ಕಡಲ ಗಸ್ತಿನ 6 ‘ಬೋಯಿಂಗ್’ ವಿಮಾನ ಖರೀದಿಸುವ ಒಪ್ಪಂದಕ್ಕೆ ಭಾರತ ಬ್ರೇಕ್!

ಭಾರತದಿಂದ ಅಮೇರಿಕಾಗೆ ತೀಕ್ಷ್ಣ ಪ್ರತಿಕ್ರಿಯೆ!

ನವ ದೆಹಲಿ – ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಉತ್ಪನ್ನಗಳ ಮೇಲೆ ಶೇಕಡ 50% ರಷ್ಟು ಆಮದು ಸುಂಕ ವಿಧಿಸಿದ ನಂತರ, ಅಮೇರಿಕಾದಿಂದ 3.6 ಶತಕೋಟಿ ಡಾಲರ್ (₹ 29,880 ಕೋಟಿ) ಮೌಲ್ಯದ ಬೋಯಿಂಗ್ ಜೆಟ್‌ಗಳನ್ನು ಖರೀದಿಸುವ ಒಪ್ಪಂದವನ್ನು ಭಾರತ ತಾತ್ಕಾಲಿಕವಾಗಿ ನಿಲ್ಲಿಸಿದೆ. ಮೂಲಗಳ ಪ್ರಕಾರ, ಯೋಜನೆಯ ವೆಚ್ಚದಲ್ಲಿ ಸುಮಾರು ಶೇಕಡಾ 50% ರಷ್ಟು ಹೆಚ್ಚಳವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದಾಗ್ಯೂ, ಈ ಒಪ್ಪಂದದ ಬಗ್ಗೆ ಅಥವಾ ಅದನ್ನು ಮುಂದೂಡಿರುವ ಬಗ್ಗೆ ಭಾರತ ಸರಕಾರ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಮೇರಿಕಾದ ವಿದೇಶಾಂಗ ಇಲಾಖೆಯು 2021 ರಲ್ಲಿ 2.42 ಶತಕೋಟಿ ಡಾಲರ್ (₹ 20,086 ಕೋಟಿ) ಮೌಲ್ಯದ 6 ಹೆಚ್ಚುವರಿ ‘ಬೋಯಿಂಗ್ ಪಿ-8 ಐ’ ಕಡಲ ಗಸ್ತು ವಿಮಾನಗಳ ಮೂಲ ಒಪ್ಪಂದಕ್ಕೆ ಅನುಮೋದನೆ ನೀಡಿತ್ತು.

ಟ್ರಂಪ್ ವಿಧಿಸಿದ ಆಮದು ಸುಂಕದಿಂದಾಗಿ ಬೆಲೆ ಏರಿಕೆಯಾಗಿದೆ. ಬೋಯಿಂಗ್‌ನ ವಿಮಾನ ಖರೀದಿ ಸಂಬಂಧಿತ ಭಾಗಗಳು ಮತ್ತು ಘಟಕಗಳು ಗಮನಾರ್ಹವಾಗಿ ದುಬಾರಿಯಾಗಿವೆ. ಹೆಚ್ಚಿದ ಬೆಲೆಗಳು, ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ವಾತಾವರಣ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯಂತಹ ಅಂಶಗಳು ಅಂತಿಮ ನಿರ್ಧಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ರಕ್ಷಣಾ ಸಚಿವಾಲಯವು ಖರೀದಿ ಒಪ್ಪಂದವನ್ನು ನಿಲ್ಲಿಸಿ, ಅದರ ಮರುಪರಿಶೀಲನೆ ಮಾಡಲು ನಿರ್ಧರಿಸಿದೆ.

ಸಂಪಾದಕೀಯ ನಿಲುವು

ಭಾರತವು ಅಮೇರಿಕಾದ ಬೋಯಿಂಗ್ ಕಂಪನಿಯಿಂದ ಪ್ಯಾಸೆಂಜರ್ ವಿಮಾನಗಳನ್ನು ಖರೀದಿಸಲು ಮಾಡಿಕೊಂಡಿದ್ದ ಒಪ್ಪಂದವನ್ನು ಸಹ ಮುರಿದು ಮತ್ತಷ್ಟು ಒತ್ತಡ ಹೇರುವುದು ಅಗತ್ಯ!