ಉತ್ತರಪ್ರದೇಶ-ನೇಪಾಳ ಗಡಿಯಲ್ಲಿ 130 ಅಕ್ರಮ ಮಸೀದಿ-ಮದರಸಗಳ ಮೇಲೆ ಕ್ರಮ – UP Mosque Madrasa Demolition Drive

ಕೊಲ್ಲಿ ದೇಶಗಳಿಂದ ಹಣಕಾಸು ನೆರವು

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ನೇಪಾಳ ಗಡಿಗೆ ಹೊಂದಿಕೊಂಡಿರುವ 7 ಜಿಲ್ಲೆಗಳಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದೆ. ಕಳೆದ 60 ದಿನಗಳಲ್ಲಿ, ಶ್ರಾವಸ್ತಿ, ಬಲರಾಮ್‌ಪುರ, ಬಹ್ರೈಚ್, ಸಿದ್ಧಾರ್ಥನಗರ, ಮಹಾರಾಜ್‌ಗಂಜ್, ಪಿಲಿಭಿತ್ ಮತ್ತು ಲಖಿಂಪುರ ಖೇರಿ ಜಿಲ್ಲೆಗಳಲ್ಲಿ 298ಕ್ಕೂ ಹೆಚ್ಚು ಅಕ್ರಮ ಮಸೀದಿಗಳು, ಮದರಸಾಗಳು, ಗೋರಿಗಳು ಮತ್ತು ಈದ್ಗಾಗಳನ್ನು (ನಮಾಜ್ ಮಾಡಲು ಬಳಸುವ ಬಯಲು ಪ್ರದೇಶ) ಗುರುತಿಸಲಾಗಿದೆ. ಈ ಪೈಕಿ 223 ಕಟ್ಟಡಗಳಿಗೆ ನೋಟಿಸ್ ನೀಡಲಾಗಿದ್ದು, 198 ಕಟ್ಟಡಗಳನ್ನು ಸೀಲ್ ಮಾಡಲಾಗಿದೆ. ಜೊತೆಗೆ, 130 ಕಟ್ಟಡಗಳನ್ನು ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ.

ಈ ಕ್ರಮವು ಕೇವಲ ಅಕ್ರಮ ನಿರ್ಮಾಣಗಳಿಗೆ ಸೀಮಿತವಾಗಿಲ್ಲ. ವಿದೇಶಿ ಹಣಕಾಸು ನೆರವು, ಮತಾಂತರ ಮತ್ತು ಜನಸಂಖ್ಯಾ ಬದಲಾವಣೆಯ ಸಾಧ್ಯತೆಗಳ ಕಾರಣದಿಂದ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ಈ ಪ್ರದೇಶಗಳಲ್ಲಿ ಮಸೀದಿಗಳು ಮತ್ತು ಮದರಸಾಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದ್ದು, ಅನುಮಾನಾಸ್ಪದ ಹಣಕಾಸು ಹರಿವು ಮತ್ತು ಜನಸಂಖ್ಯೆಯ ಅಸಮತೋಲನವು ಭದ್ರತಾ ಏಜೆನ್ಸಿಗಳಿಗೆ ಕಳವಳಕಾರಿಯಾಗಿದೆ.

1. ಆದಾಯ ತೆರಿಗೆ ಇಲಾಖೆ ಮತ್ತು ಗೃಹ ಸಚಿವಾಲಯದ ವರದಿಗಳ ಪ್ರಕಾರ, ನೇಪಾಳ ಗಡಿ ಭಾಗದಲ್ಲಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಲು ದಕ್ಷಿಣ ಭಾರತ, ವಿಶೇಷವಾಗಿ ತಮಿಳುನಾಡು ಮತ್ತು ಕೊಲ್ಲಿ ದೇಶಗಳಿಂದ ಕೋಟ್ಯಂತರ ರೂಪಾಯಿಗಳ ಹಣಕಾಸು ನೆರವು ಹರಿದುಬಂದಿದೆ. ಒಂದು ಪ್ರಕರಣದಲ್ಲಿ, ಒಬ್ಬ ವ್ಯಕ್ತಿಯ ಖಾತೆಯಲ್ಲಿ 12 ಕೋಟಿ ರೂಪಾಯಿಗಳು ಪತ್ತೆಯಾಗಿವೆ. ವರದಿಯ ಪ್ರಕಾರ, ಸುಮಾರು 150 ಕೋಟಿ ರೂಪಾಯಿಗಳಷ್ಟು ಅನುಮಾನಾಸ್ಪದ ಹಣವನ್ನು ಮಸೀದಿಗಳು, ಮದರಸಾಗಳು, ಸಮಾಧಿಗಳ ನಿರ್ಮಾಣ ಮತ್ತು ಮತಾಂತರಕ್ಕೆ ಬಳಸಲಾಗಿದೆ.

2. 2018 ರಿಂದ 2021 ರ ನಡುವೆ, ಈ ಜಿಲ್ಲೆಗಳಲ್ಲಿ ಮಸೀದಿಗಳ ಸಂಖ್ಯೆ 738 ರಿಂದ 1000 ಕ್ಕೆ ಮತ್ತು ಮದರಸಾಗಳ ಸಂಖ್ಯೆ 500 ರಿಂದ 645 ಕ್ಕೆ ಏರಿದೆ. ನೇಪಾಳದಲ್ಲಿಯೂ ಮುಸ್ಲಿಂ ಜನಸಂಖ್ಯೆ 20 ವರ್ಷಗಳಲ್ಲಿ ದ್ವಿಗುಣಗೊಂಡಿದೆ. ಉತ್ತರಾಖಂಡದ ಪಿಥೋರಗಢ, ಚಂಪಾವತ್ ಮತ್ತು ಉಧಮ್‌ಸಿಂಗ್ ನಗರದ ಗಡಿ ಜಿಲ್ಲೆಗಳೂ ಈ ಅಪಾಯದಿಂದ ಹೊರತಾಗಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ, ಗಡಿ ಭಾಗಗಳಲ್ಲಿ ಒಂದು ಮುಸ್ಲಿಂ ಪಟ್ಟಿಯನ್ನು ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ ಎಂದು ಶಂಕಿಸಲಾಗಿದೆ. ಇದು ಬಾಂಗ್ಲಾದೇಶದಿಂದ ಪ್ರಾರಂಭವಾಗಿ ಪಾಕಿಸ್ತಾನದವರೆಗೆ ಹರಡಬಹುದಾದ ದೊಡ್ಡ ಜಾಲದ ಭಾಗವಾಗಿರಬಹುದು.

ಸಂಪಾದಕೀಯ ನಿಲುವು

ಸರಕಾರ ಕ್ರಮ ತೆಗೆದುಕೊಂಡಿರುವುದು ಒಳ್ಳೆಯದೇ; ಆದರೆ ಈ ರೀತಿಯ ಮಸೀದಿ ಅಥವಾ ಮದರಸಾಗಳು ಹೇಗೆ ಕಟ್ಟಲಾಗುತ್ತವೆ ? ಪೊಲೀಸರು ಮತ್ತು ಸರಕಾರ ಏನು ಮಾಡುತ್ತಿರುತ್ತದೆ? ಇದರ ಕಡೆಗೆ ಆಡಳಿತಗಾರರು ಗಮನ ನೀಡುವುದು ಅಗತ್ಯವಾಗಿರುತ್ತದೆ !