ಉಚ್ಚ ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ದೈವೀ (ಸಾತ್ತ್ವಿಕ) ಮಕ್ಕಳೆಂದರೆ ಮುಂದೆ ಹಿಂದೂ ರಾಷ್ಟ್ರ (ಸನಾತನ ಧರ್ಮ ರಾಜ್ಯ)ವನ್ನು ನಡೆಸುವ ಪೀಳಿಗೆ ! ಕು. ಯಶಗೌಡ ಮಲ್ಲಗೌಡರ ಇವರ ಈ ಪೀಳಿಗೆಯವನು !

೧. ಗುಣ ವೈಶಿಷ್ಟ್ಯಗಳು
ಅ. ‘ಕು. ಯಶಗೌಡನು ಮನೆಯಲ್ಲಿ ಕಸವನ್ನು ಗುಡಿಸುವುದು, ತನ್ನ ಬಟ್ಟೆಗಳನ್ನು ತೊಳೆಯುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾನೆ.
ಆ. ಅವನು ಶಾಲೆಯ ಪುಸ್ತಕಗಳನ್ನು, ಬ್ಯಾಗ ಮತ್ತು ಇತರ ವಸ್ತುಗಳನ್ನು ಅಚ್ಚುಕಟ್ಟಾಗಿ ಇಡುತ್ತಾನೆ.
ಇ. ಅವನು ಸಹನಶೀಲ ಮತ್ತು ಶಾಂತನಾಗಿ ದ್ದಾನೆ. ಒಮ್ಮೆ ಅವನ ಕಾಲಿನ ಮೇಲೆ ಕಲ್ಲು ಬಿದ್ದಿರುವುದರಿಂದ ಅವನಿಗೆ ಶಸ್ತ್ರಚಿಕಿತ್ಸೆ ಮಾಡ ಬೇಕಾಯಿತು. ಅವನ ಕಾಲು ನೋಯುತ್ತಿ ದ್ದರೂ ಅವನು ಅದನ್ನು ಸಹಿಸಿಕೊಂಡನು. ಅವನು ‘ಗುರುದೇವರು ನನ್ನ ಜೊತೆಯಲ್ಲಿದ್ದಾರೆ’, ಎಂದು ಹೇಳುತ್ತಿದ್ದನು. ಆಧುನಿಕ ವೈದ್ಯರು ಕೂಡ ಅವನ ಶಾಂತ ಸ್ವಭಾವದ ಬಗ್ಗೆ ಪ್ರಶಂಸೆ ಮಾಡಿದರು.

೨. ಧರ್ಮಾಚರಣೆ ಮತ್ತು ಸಾಧನೆಯ ಪ್ರಯತ್ನಗಳು
ಅ. ಅವನು ಪ್ರತಿದಿನ ಶಾಲೆಗೆ ಹೋಗುವಾಗ ತಿಲಕವನ್ನು ಹಚ್ಚುತ್ತಾನೆ ಮತ್ತು ಹೆಚ್ಚಾಗಿ ಸಾತ್ತ್ವಿಕ ಬಟ್ಟೆಗಳನ್ನು ಧರಿಸುತ್ತಾನೆ.
ಆ. ಅವನಿಂದ ತಪ್ಪಾದರೆ ಅವನು ಶ್ರೀಕೃಷ್ಣ ನಲ್ಲಿ ಕ್ಷಮೆ ಕೇಳಿ ತಪ್ಪಿಗಾಗಿ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಾನೆ.
ಇ. ಅವನು ಗುರುಸ್ಮರಣೆಯನ್ನು ಮಾಡುವುದು, ಪ್ರತಿದಿನ ನಾಮಜಪವನ್ನು ಬರೆಯುವುದು, ಪ್ರಾರ್ಥನೆ ಮಾಡುವುದು, ಕೃತಜ್ಞತೆಯನ್ನು ವ್ಯಕ್ತಪಡಿಸು ವುದು ಇತ್ಯಾದಿ ಕೃತಿಗಳನ್ನು ಮಾಡುತ್ತಾನೆ.
ಈ. ಶಿವರಾತ್ರಿ ಅಥವಾ ಬೇರೆ ಸಮಯದಲ್ಲಿ ಅವನು ಗ್ರಂಥಪ್ರದರ್ಶನದಲ್ಲಿ ಭಾಗವಹಿಸು ವುದು, ಮನೆಯಲ್ಲಿ ವಸ್ತುಗಳನ್ನು ಸರಿಯಾಗಿ ಇಡುವುದು ಇತ್ಯಾದಿ ಸೇವೆಯನ್ನು ಮಾಡುತ್ತಾನೆ.
೩. ಭಾವ
ಅ. ಅವನು ಶಾಲೆಯಲ್ಲಿ ಅಥವಾ ಯಾವುದೇ ವ್ಯಯಕ್ತಿಕ ಅಡಚಣೆಗಳು ಬಂದರೆ ಗುರುಚರಣ ಗಳಲ್ಲಿ ಆತ್ಮನಿವೇದನೆ ಮಾಡುತ್ತಾನೆ. ಅವನ ಅಡಚಣೆಗಳು ದೂರವಾದ ನಂತರ ಅವನು ‘ಗುರುದೇವರು ನನಗೆ ಸಹಾಯ ಮಾಡಿದರು’, ಎಂದು ಕೃತಜ್ಞತೆಯ ಭಾವದಿಂದ ಹೇಳುತ್ತಾನೆ.
ಆ. ಮನೆಯಲ್ಲಿ ಸೇವೆಯನ್ನು ಮಾಡುವಾಗ ಅವನು ‘ನಾನು ಆಶ್ರಮಸೇವೆ ಮಾಡುತ್ತಿದ್ದೇನೆ’, ಎಂಬ ಭಾವವನ್ನು ಇಡುತ್ತಾನೆ.’
– ಸೌ. ಕವಿತಾ ಮಲ್ಲಗೌಡರ (ಯಶಗೌಡನ ತಾಯಿ), ಗದಗ (೨೨.೫.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !