ಸ್ನಾಯುಗಳ ಆರೋಗ್ಯ ಉತ್ತಮವಾಗಿಡಲು ಏನು ಮಾಡಬೇಕು ?

ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ಭಾಗ ೨೧

‘ಸ್ನಾಯುಗಳ ಕ್ಷಮತೆ ಹೆಚ್ಚಿಸಲು ನಮ್ಮ ವ್ಯಾಯಾಮಗಳಲ್ಲಿ ‘ಸ್ನಾಯುಗಳ ಶಕ್ತಿ, ನಮ್ಯತೆ ಮತ್ತು ದೃಢತೆ’ ಈ ಮೂರು ಅಂಶಗಳನ್ನು ಸುಧಾರಿಸುವ ವ್ಯಾಯಾಮ ಪ್ರಕಾರಗಳನ್ನು ಸೇರಿಸಿಕೊಳ್ಳು ವುದು ಆವಶ್ಯಕವಾಗಿದೆ.

೧. ಸ್ನಾಯುಗಳ ಶಕ್ತಿ ಹೆಚ್ಚಿಸುವುದು : ಇದಕ್ಕಾಗಿ ಬಲವನ್ನು ಪ್ರಯೋಗಿಸುವ ವ್ಯಾಯಾಮಗಳನ್ನು ಮಾಡಬೇಕು. ಭಾರವಾದ ವಸ್ತುಗಳನ್ನು ಎತ್ತಲು ಸ್ನಾಯುಗಳು ಆರೋಗ್ಯವಂತವಾಗಿರುವುದು ಅವಶ್ಯಕವಾಗಿದೆ. ಇದಕ್ಕಾಗಿ, ತೂಕ ಎತ್ತುವುದು, ದಂಡ-ಬೈಠಕ್‌ (ಪುಷ್ಪ್ಸ್ ಮತ್ತು ಸಿಟ್ಪ್ಸ್‌), ಸೇತುಬಂಧಾಸನ, ಶಲಭಾಸನ, ಪ್ಲಾಂಕ್‌ ಮುಂತಾದ ಶರೀರದ ತೂಕವನ್ನು ಹೊರುವಂತಹ ವ್ಯಾಯಾಮಗಳನ್ನು ಸೇರಿಸಿಕೊಳ್ಳಬೇಕು. ಈ ವ್ಯಾಯಾಮಗಳಲ್ಲಿ ತೂಕದ ಪ್ರಮಾಣವನ್ನು ಕ್ರಮೇಣ ಹೆಚ್ಚಿಸುತ್ತಾ ನಿರ್ದಿಷ್ಟ ಪುನರಾವೃತ್ತಿಗಳನ್ನು ಮಾಡಬೇಕು, ಉದಾಹರಣೆಗೆ, ೫ ಕೆಜಿ ತೂಕವನ್ನು ೩೦ ಬಾರಿ ಎತ್ತುವುದು, ಕೆಲವು ದಿನಗಳ ನಂತರ ೭ ಕೆಜಿ ತೂಕವನ್ನು ೩೦ ಬಾರಿ ಎತ್ತುವುದು.

೨. ಸ್ನಾಯುಗಳ ನಮ್ಯತೆ ಸುಧಾರಿಸುವುದು : ಇದಕ್ಕಾಗಿ ಕೀಲುಗಳ ಚಲನೆಯನ್ನು ಸುಧಾರಿಸುವ ‘ಸ್ಟ್ರೆಚಿಂಗ್‌’, ಯೋಗಾಸನಗಳಾದ ಉದಾ. ಪಶ್ಚಿಮೋತ್ತಾನಾಸನ, ಅಧೋಮುಖಶ್ವಾನಾಸನ, ಗೋಮುಖಾಸನ ಮುಂತಾದ ವ್ಯಾಯಾಮಗಳನ್ನು ಸೇರಿಸಿಕೊಳ್ಳಬೇಕು.

೩. ಸ್ನಾಯುಗಳ ದೃಢತೆ (ಸ್ಣಚಿಮಿಟಿಚಿ) ಹೆಚ್ಚಿಸುವುದು : ಹಗುರ ತೂಕದೊಂದಿಗೆ ಹೆಚ್ಚು ಪುನರಾವೃತ್ತಿಯ ವ್ಯಾಯಾಮಗಳನ್ನು ಮಾಡುವುದರಿಂದ ಸ್ನಾಯುಗಳ ಮೇಲೆ ಹೆಚ್ಚು ಒತ್ತಡ ಬೀಳದೆ ಸಹಿಷ್ಣುತೆ ಹೆಚ್ಚುತ್ತದೆ, ಉದಾಹರಣೆಗೆ, ಮಧ್ಯಮದಿಂದ ವೇಗವಾದ ಗತಿಯಲ್ಲಿ ೧೫ ನಿಮಿಷ ಓಡುವುದು, ಕೆಲವು ದಿನಗಳ ನಂತರ ಅದೇ ಗತಿಯಲ್ಲಿ ೩೦ ನಿಮಿಷಗಳ ಕಾಲ ಓಡುವುದು, ಸೂರ್ಯ ನಮಸ್ಕಾರಗಳ ಸಂಖ್ಯೆ ಹೆಚ್ಚಿಸುತ್ತಾ ಹೋಗುವುದು.

– ಸೌ. ಅಕ್ಷತಾ ರೂಪೇಶ ರೆಡಕರ್, ಭೌತಿಕೋಪಚಾರತಜ್ಞರು (ಫಿಸಿಯೋಥೆರಪಿಸ್ಟ್‌), ಫೋಂಡಾ, ಗೋವಾ. (೩೦.೯.೨೦೨೪)