
ಸದ್ಯ ಯುವ ವಯಸ್ಸಿನಿಂದಲೇ ಮಕ್ಕಳಿಗೆ ಅಜೀರ್ಣ, ಆಮ್ಲಪಿತ್ತ, ಗ್ರಹಣಿ (ಹೊಟ್ಟೆಯ ಒಂದು ರೋಗ) ಇಂತಹ ಸಮಸ್ಯೆಗಳಿಂದ ಹಿಡಿದು ಗಂಭೀರವಾದ ಕೋಲೈಟಿಸ್ (ಕರುಳಿಗೆ ಊತ ಬರುವುದು), ಕ್ರೋನ್ಸ್ ಡಿಸೀಸ್ (ಸಣ್ಣ ಕರುಳಿಗೆ ಹಾನಿ ಮಾಡುವ ಒಂದು ಕಾಯಿಲೆ) ಇಂತಹ ವಿವಿಧ ಕಾಯಿಲೆಗಳು ಬರುತ್ತಿರುವುದು ಕಾಣಿಸುತ್ತಿವೆ. ಇದರ ಹಿಂದೆ ದೇಹದಲ್ಲಿ ಉರಿಯೂತ ಹೆಚ್ಚಿಸುವ ಪ್ಯಾಕೆಟ್ ಆಹಾರ ಪದಾರ್ಥಗಳು, ಕೃತಕ ಪಾನೀಯಗಳು ಮತ್ತು ಅರ್ಬುದರೋಗ ಹೆಚ್ಚಿಸುವ ಅನೇಕ ವಿಷಯಗಳು ಇವೆ. ಇದರ ಜೊತೆಗೆ ಜಾಗರಣೆ, ಚಿಂತೆ, ಸತ್ವಯುತ ತರಕಾರಿಗಳು ಮತ್ತು ಧಾನ್ಯಗಳ ಕೊರತೆ, ಹಾಗೆಯೇ ಸರಿಯಾದ ದಿನಚರಿಯಿಲ್ಲದಿರುವುದರಿಂದ ಕಡಿಮೆಯಾಗಿರುವ ಶರೀರದ ಸಾಮರ್ಥ್ಯ ಇವೆಲ್ಲವೂ ಕಾರಣವಾಗಿವೆ. ಉತ್ತಮ ಜೀರ್ಣಕ್ರಿಯೆಗೆ ಉತ್ತಮ ಅಗ್ನಿ ಆವಶ್ಯಕ. ಅಗ್ನಿಯು ಆಯುರ್ವೇದದಲ್ಲಿ ವರ್ಣಿಸಿರುವ ಬಹುದೊಡ್ಡ ಕಲ್ಪನೆಯಾಗಿದೆ. ‘ಪದೇ ಪದೇ ಹಸಿವಾಗುತ್ತದೆ, ಅಂದರೆ ಅಗ್ನಿ ಚೆನ್ನಾಗಿದೆ’ ಎಂದಲ್ಲ. ಸುಲಭವಾಗಿ ಹೇಳುವುದಾದರೆ ‘ಅಗ್ನಿ’ ಎಂದರೆ ಆಹಾರವನ್ನು ಜೀರ್ಣಿಸಿಕೊಳ್ಳುವ ದೇಹದ ಶಕ್ತಿ, ಶರೀರದ ಧಾತುಗಳನ್ನು ತಯಾರಿಸುವ ಶಕ್ತಿ, ಪೋಷಕಾಂಶ ಗಳನ್ನು ಸರಿಯಾದ ಸ್ಥಾನಕ್ಕೆ ತಲುಪಿಸುವುದು, ಮಲವನ್ನು ಸರಿಯಾದ ಸಮಯದಲ್ಲಿ ಹೊರಹಾಕುವುದು ಇವೆಲ್ಲವೂ ಒಳಗೊಂಡಿದೆ.

ಜೀರ್ಣಶಕ್ತಿಯನ್ನು ಹೇಗೆ ಕಾಪಾಡಿಕೊಳ್ಳುವಿರಿ ?
೧. ಅತಿಯಾಗಿ ತಿನ್ನಬಾರದು ಅಥವಾ ಅತಿ ಕಡಿಮೆ ತಿನ್ನಬಾರದು. ಅಗತ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ತಿನ್ನುವುದು ಜೀರ್ಣಶಕ್ತಿಯನ್ನು ಕಡಿಮೆ ಮಾಡುತ್ತದೆ.
೨. ನಿಧಾನವಾಗಿ ಜಗಿದು ತಿನ್ನಬೇಕು. ಅವಸರದಲ್ಲಿ ತಿನ್ನುವುದರಿಂದ ಆಹಾರವು ಸರಿಯಾಗಿ ಜಗಿಯಲ್ಪಡುವುದಿಲ್ಲ. ಜೊಲ್ಲು ಮತ್ತು ಲಾಲಾರಸಗಳು ಸರಿಯಾಗಿ ಬೆರೆಯುವ ಮೊದಲು ಮುಂದಿನ ಆಹಾರ ವೇಗವಾಗಿ ಹೊಟ್ಟೆಗೆ ಹೋಗುತ್ತಲೇ ಇರುತ್ತದೆ, ಇದರಿಂದ ಜೀರ್ಣಕ್ರಿಯೆ ಮಂದವಾಗುತ್ತದೆ.
೩. ನಿಯಮಿತ ವ್ಯಾಯಾಮ ಮತ್ತು ನಿದ್ರೆ ಇರಬೇಕು. ಪ್ರತಿದಿನ ಕನಿಷ್ಠ ಅರ್ಧ ಗಂಟೆ ಅಥವಾ ವಾರದಲ್ಲಿ ೪ ಬಾರಿ ಒಂದು ಗಂಟೆ ವ್ಯಾಯಾಮ ಮಾಡಬೇಕು. ಊಟ ಮಾಡಿದ ತಕ್ಷಣ ಕೆಲಸಕ್ಕೆ ಇಳಿಯಬಾರದು. ರಾತ್ರಿ ಸಮಯದಲ್ಲಿ ವ್ಯಾಯಾಮ ಮಾಡಬಾರದು.
೪. ಮಧ್ಯಾಹ್ನದ ಊಟ ೧೨ ರಿಂದ ೨ ರ ನಡುವೆ ಮತ್ತು ರಾತ್ರಿಯ ಊಟ ೭.೩೦ ರಿಂದ ೮.೩೦ ರ ನಡುವೆ ಮಾಡಬೇಕು. ರಾತ್ರಿ ತಡವಾಗಿ ಊಟ ಮಾಡುವುದು ಜೀರ್ಣಕ್ರಿಯೆಯನ್ನು ಹಾಳು ಮಾಡುತ್ತದೆ.
೫. ಊಟದ ಮಧ್ಯೆ-ಮಧ್ಯೆ ಅಗತ್ಯವಿರುವಷ್ಟು ನೀರು ಕುಡಿಯಬೇಕು. ಊಟದ ಮೊದಲು, ನಂತರ ಅಥವಾ ಬೆಳಗ್ಗೆ ಎದ್ದ ತಕ್ಷಣ ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಗೆ ಮಾರಕವಾಗುತ್ತದೆ.
೬. ಊಟದಲ್ಲಿ ಕೇವಲ ಸಿಹಿ ಅಥವಾ ಕೇವಲ ಖಾರ ಹೀಗೆ ಒಂದೇ ರೀತಿಯ ರುಚಿ ಇರಬಾರದು. ಊಟದಲ್ಲಿ ಮಜ್ಜಿಗೆ ಇರಬೇಕು. ಊಟ ಬಿಸಿ, ತಾಜಾ, ಬೇಯಿಸಿದ ಆಹಾರವಾಗಿರಬೇಕು.
೭. ಹಳಸಿದ, ಹುದುಗಿಸಿದ ಮತ್ತು ಪ್ಯಾಕೆಟ್ ಆಹಾರ ಪದಾರ್ಥ ಗಳನ್ನು ತಪ್ಪಿಸಬೇಕು; ಪದೇ ಪದೇ ‘ಆಂಟಿಬಯೋಟಿಕ್’ (ಪ್ರತಿಜೀವಕಗಳು) ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯಕವಾದ ಒಳ್ಳೆಯ ಬ್ಯಾಕ್ಟೀರಿಯಾಗಳು ಸಹ ನಾಶವಾಗುತ್ತವೆ.
೮. ಉತ್ತಮ ಜೀರ್ಣಕ್ರಿಯೆಯು ಉತ್ತಮ ಆರೋಗ್ಯದ ಮೂಲವಾಗಿರುತ್ತದೆ; ಬದಲಾಗುತ್ತಿರುವ ಹವಾಮಾನ, ನೀರು, ಆಹಾರವನ್ನು ನೋಡಿದರೆ ನಾವು ಸ್ವಲ್ಪ ಕಾಳಜಿ ವಹಿಸಿದರೆ, ರೋಗಗಳಾಗುವ ಸಾಧ್ಯತೆ ಕಡಿಮೆ ಮತ್ತು ಒಂದು ವೇಳೆ ಬಂದರೂ, ಅವು ನಿಯಂತ್ರಣದಲ್ಲಿರುತ್ತವೆ, ಇದು ಖಚಿತ !
– ವೈದ್ಯೆ (ಸೌ.) ಸ್ವರಾಲಿ ಶೆಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !