
ನವದೆಹಲಿ – ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ ರಷ್ಯಾಕ್ಕೆ ಯುದ್ಧಕ್ಕೆ ಹಣ ಸಿಗುತ್ತಿದೆ ಎಂದು ಅಮೆರಿಕ ಆರೋಪಿಸಿ, ಭಾರತದ ಮೇಲೆ ಶೇ 25 ರಷ್ಟು ಆಮದು ಸುಂಕ ವಿಧಿಸಿದೆ. ಇನ್ನೊಂದೆಡೆ, ಅಮೆರಿಕ ಪಾಕಿಸ್ತಾನದೊಂದಿಗೆ ತೈಲ ಒಪ್ಪಂದ ಮಾಡಿಕೊಳ್ಳುತ್ತಿದೆ. ಭಾರತ ಈ ವಿಷಯದ ಬಗ್ಗೆ ಅಮೆರಿಕದೊಂದಿಗೆ ಚರ್ಚಿಸುತ್ತಿರುವಾಗಲೇ, ಈಗ ಭಾರತೀಯ ಸೇನೆ ಅಮೆರಿಕದ ಭಾರತ ವಿರೋಧಿ ಪಿತೂರಿಗಳನ್ನು ಬಯಲಿಗೆಳೆದಿದೆ. 54 ವರ್ಷಗಳ ಹಿಂದೆ ಅಮೆರಿಕ ಭಾರತದ ವಿರುದ್ಧವಾಗಿ ಪಾಕಿಸ್ತಾನಕ್ಕೆ ಹೇಗೆ ಸೇನಾ ನೆರವು ನೀಡಿತ್ತು ಎಂಬುದಕ್ಕೆ ಸಂಬಂಧಿಸಿದ ಸುದ್ದಿ ತುಣುಕುಗಳನ್ನು ಭಾರತೀಯ ಸೇನೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅಮೆರಿಕದ ನಿಜ ಬಣ್ಣವನ್ನು ಮತ್ತೊಮ್ಮೆ ಬಯಲು ಮಾಡಿದೆ.
#IndianArmy#EasternCommand#VijayVarsh #LiberationOfBangladesh #MediaHighlights
“This Day That Year” Build Up of War – 05 Aug 1971 #KnowFacts.
“𝑼.𝑺 𝑨𝑹𝑴𝑺 𝑾𝑶𝑹𝑻𝑯 $2 𝑩𝑰𝑳𝑳𝑰𝑶𝑵 𝑺𝑯𝑰𝑷𝑷𝑬𝑫 𝑻𝑶 𝑷𝑨𝑲𝑰𝑺𝑻𝑨𝑵 𝑺𝑰𝑵𝑪𝑬 ’54”@adgpi@SpokespersonMoD… pic.twitter.com/wO9jiLlLQf
— EasternCommand_IA (@easterncomd) August 5, 2025
1. ಭಾರತೀಯ ಸೇನೆಯ ಪೂರ್ವ ಕಮಾಂಡ್ ‘X’ನಲ್ಲಿ 54 ವರ್ಷ ಹಳೆಯ ಸುದ್ದಿ ತುಣುಕುಗಳನ್ನು ಪೋಸ್ಟ್ ಮಾಡಿದೆ. 1954 ರಿಂದ 1971 ರವರೆಗೆ ಅಮೆರಿಕ ಪಾಕಿಸ್ತಾನಕ್ಕೆ ಅಂದಿನ 2 ಬಿಲಿಯನ್ ಡಾಲರ್‌ಗಳಿಗಿಂತ (1 ಲಕ್ಷ ಕೋಟಿ ರೂ.) ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಕಳುಹಿಸಿತ್ತು. ಪತ್ರಿಕೆಯ ತುಣುಕುಗಳು ಆಗಸ್ಟ್ 5, 1971 ರದ್ದಾಗಿವೆ. ಈ ಸುದ್ದಿಯ ಪಕ್ಕದಲ್ಲಿಯೇ ‘ಪಾಕಿಸ್ತಾನ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ’ ಎಂಬ ಸುದ್ದಿಯೂ ಇದೆ. ಅಮೆರಿಕ ದಶಕಗಳಿಂದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು, ಇದರ ಆಧಾರದ ಮೇಲೆ ಪಾಕಿಸ್ತಾನ ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿತ್ತು. 1965 ಮತ್ತು 1971 ರ ಯುದ್ಧಗಳು ಇದೇ ಕಾರಣದಿಂದ ಸಂಭವಿಸಿದ್ದವು.
2. ಆಗಿನ ರಕ್ಷಣಾ ರಾಜ್ಯ ಸಚಿವ ವಿದ್ಯಾಚರಣ್ ಶುಕ್ಲಾ ಅವರ ಹೇಳಿಕೆಯೂ ಈ ಪತ್ರಿಕೆಯ ಪುಟದಲ್ಲಿ ಇದೆ. ‘ಬಾಂಗ್ಲಾದೇಶದ ಬಂಡಾಯವನ್ನು ಗಮನದಲ್ಲಿಟ್ಟುಕೊಂಡು, ‘ನ್ಯಾಟೋ’ ದೇಶಗಳು ಮತ್ತು ಸೋವಿಯತ್ ಯೂನಿಯನ್‌ಗೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದನ್ನು ನಿಲ್ಲಿಸುವಂತೆ ಹೇಳಲಾಗಿತ್ತು’ ಎಂದು ಶುಕ್ಲಾ ರಾಜ್ಯಸಭೆಯಲ್ಲಿ ತಿಳಿಸಿದ್ದರು.
ಸಂಪಾದಕೀಯ ನಿಲುವುಅಮೆರಿಕ ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದರೂ, ಭಾರತ ಯುದ್ಧದಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಬಾಲಾಕೋಟ್ ವೈಮಾನಿಕ ದಾಳಿಯ ಸಮಯದಲ್ಲಿ ಅಮೆರಿಕ ಪಾಕಿಸ್ತಾನಕ್ಕೆ ನೀಡಿದ್ದ ‘ಎಫ್-16’ ಅತ್ಯಾಧುನಿಕ ಯುದ್ಧವಿಮಾನವನ್ನು ಕೂಡ ಭಾರತ ಹೊಡೆದುರುಳಿಸಿತ್ತು. ಈ ವಿಷಯವನ್ನು ಅಮೆರಿಕ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಧ್ವನಿ ಎತ್ತಿದ ಮೆಹರಂಗ್ ಬಲೋಚ್ ಗೆ ಪಾಕಿಸ್ತಾನದಿಂದ ಜೀವಾವಧಿ ಶಿಕ್ಷೆ !