ಸಂಸ್ಕೃತ ಭಾಷೆಯ ಸೌಂದರ್ಯ ವಿದ್ಯಾಧನದ ವೈಶಿಷ್ಟ್ಯ

ಆಗಸ್ಟ್ ೯ ರಂದು ಸಂಸ್ಕೃತದಿನ ಇದೆ ಆ ನಿಮಿತ್ತ…

ನ ಚೋರಹಾರ್ಯ ನ ಚ ರಾಜಹಾರ್ಯ ನ
ಭ್ರಾತೃಭಾಜ್ಯಂ ನ ಚ ಭಾರಕಾರಿ |
ವ್ಯಯೆ ಕೃತೇ ವರ್ಧತ ಎವ ನಿತ್ಯಂ
ವಿದ್ಯಾಧನಂ ಸರ್ವಧನಪ್ರಧಾನಮ್‌ || (ಆಧಾರ : ಅಜ್ಞಾತ)

ಅರ್ಥ : ವಿದ್ಯಾರೂಪಿ ಧನವನ್ನು ಕಳ್ಳನು ಕದಿಯಲು ಸಾಧ್ಯವಿಲ್ಲ. ರಾಜನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಸಹೋದರ ಸಹೋದರರಲ್ಲಿ ವಿದ್ಯೆಯ ಪಾಲು ಅಥವಾ ಭಾಗ ಮಾಡಲು ಬರುವುದಿಲ್ಲ. ವಿದ್ಯಾಧನ ಭಾರಭೂತ, ಅಂದರೆ ಭಾರವಾಗುವುದಿಲ್ಲ. ಅದನ್ನು ವೆಚ್ಚ ಮಾಡಿದ್ದಷ್ಟು ಹೆಚ್ಚಾಗುತ್ತ ಹೋಗುತ್ತದೆ. ಹೀಗೆ ಈ ವಿದ್ಯಾಧನವು ಎಲ್ಲ ಧನಗಳಲ್ಲಿ ಶ್ರೇಷ್ಠವಾಗಿದೆ.