ಸಜ್ಜಾದ್ ಮೀರ್ ಇವನು ಕಾಶ್ಮೀರಿ ಹಿಂದೂ ನಿಹಾ ರೈನಾಳನ್ನು ಮತಾಂತರ ಮಾಡಿ ಮದುವೆಯಾದ! – Pulwama Love Jihad Case

ಪುಲ್ವಾಮಾ (ಕಾಶ್ಮೀರ) ಇಲ್ಲಿಯೂ ಲವ್ ಜಿಹಾದ್

ಶ್ರೀನಗರ (ಜಮ್ಮು-ಕಾಶ್ಮೀರ) – ಪುಲ್ವಾಮಾ ಜಿಲ್ಲೆಯ ಲೋಸವಾನಿ ಗ್ರಾಮದಲ್ಲಿ ವಾಸಿಸುತ್ತಿರುವ ರೈನಾ ಕುಟುಂಬ ಒಂದೇ ಹಿಂದೂ ಕುಟುಂಬವಾಗಿದೆ. ಪಕ್ಕದಲ್ಲೇ ವಾಸಿಸುತ್ತಿರುವ ಮುಸ್ಲಿಂ ಕುಟುಂಬವೊಂದು ಅವರನ್ನು ವಂಚಿಸಿದೆ. ಆ ಕುಟುಂಬದ ಸಜ್ಜಾದ್ ಮೀರ್ ಎಂಬ ಯುವಕ ನಿಹಾ ರೈನಾ ಎಂಬ ಯುವತಿಯನ್ನು ಪ್ರೀತಿಸುವುದಾಗಿ ನಂಬಿಸಿ, ಆಕೆಯನ್ನು ಮತಾಂತರಗೊಳಿಸಿ, ನಂತರ ಆಕೆಯೊಂದಿಗೆ ನಿಕಾಹ್ (ಇಸ್ಲಾಂ ಧರ್ಮದ ಪ್ರಕಾರ ಮದುವೆ) ಮಾಡಿಕೊಂಡಿದ್ದಾನೆ. ವಿಶೇಷವೆಂದರೆ, ಸಜ್ಜಾದ್ ಮದುವೆಯ ಐದು ದಿನಗಳ ಮೊದಲು ಇನ್ನೊಬ್ಬ ಮುಸ್ಲಿಂ ಯುವತಿಯೊಂದಿಗೆ ನಿಕಾಹ್ ಮಾಡಿಕೊಂಡಿದ್ದನು. ಈ ಸಂಬಂಧ ಹಿಂದೂ ಕುಟುಂಬ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ವರೆಗೂ ಸಜ್ಜಾದ್ ಬಂಧಿತನಾಗಿಲ್ಲ. ಈ ಪ್ರಕರಣದ ವಿಚಾರಣೆ ಆಗಸ್ಟ್ 1ರಂದು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ನಡೆಯಿತು.

ಸಂಪೂರ್ಣ ಘಟನಾವಳಿ ಹೀಗಿದೆ!

1. 1990ರಲ್ಲಿ ಲಕ್ಷಾಂತರ ಹಿಂದೂ ಕುಟುಂಬಗಳು ಕಾಶ್ಮೀರದಿಂದ ವಲಸೆ ಹೋಗುತ್ತಿದ್ದಾಗ, ಲೋಸವಾನಿ ಗ್ರಾಮದ ಮುಸ್ಲಿಮರು ರೈನಾ ಕುಟುಂಬಕ್ಕೆ ‘ಕಾಶ್ಮೀರಿಯತ್ (ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಂ ಬಾಂಧವ್ಯ) ನಿಮ್ಮನ್ನು ರಕ್ಷಿಸುತ್ತದೆ’ ಎಂದು ಹೇಳಿ ಅವರನ್ನು ತಡೆದರು. ರೈನಾ ಅವರು ಇದನ್ನು ನಂಬಿದ್ದರು.

2. ಪಕ್ಕದ ಮುಸ್ಲಿಂ ಕುಟುಂಬದ ಸಜ್ಜಾದ್ ಮೀರ್ ತನ್ನನ್ನು ನಿಹಾಳ ಸಹೋದರ ಎಂದು ಹೇಳಿಕೊಳ್ಳುತ್ತಿದ್ದನು; ಆದರೆ ಇದೇ ಮುಸ್ಲಿಂ ಕುಟುಂಬ 35 ವರ್ಷಗಳ ನಂತರ ರೈನಾ ಅವರ ಬೆನ್ನಿಗೆ ಚೂರಿ ಹಾಕಿದೆ.

3. ಸಜ್ಜಾದ್ ನಿಹಾಳನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ, ಕುಟುಂಬದ ವಿರುದ್ಧ ಆಕೆಯನ್ನು ಪ್ರಚೋದಿಸಿ ಮತಾಂತರಗೊಳಿಸಿ ಆಕೆಯ ಕುಟುಂಬದಿಂದ ದೂರ ಮಾಡಿದ್ದಾನೆ.

4. ಮೇ 11, 2025ರಂದು ಅವನು ಮುಸ್ಲಿಂ ಯುವತಿಯೊಂದಿಗೆ ನಿಕಾಹ್ ಮಾಡಿಕೊಂಡನು ಮತ್ತು ಮೇ 16ರಂದು ನಿಹಾಳೊಂದಿಗೆ ನಿಕಾಹ್ ಮಾಡಿಕೊಂಡನು. ಈ ಮದುವೆಯನ್ನು ಕಾನೂನುಬದ್ಧವಾಗಿ ನೋಂದಾಯಿಸಲಾಗಿಲ್ಲ ಅಥವಾ ಆಕೆಯ ಪೋಷಕರ ಅನುಮತಿಯನ್ನು ಪಡೆಯಲಾಗಿಲ್ಲ.

5. ಈ ಪ್ರಕರಣದ ಬಗ್ಗೆ ರೈನಾ ಕುಟುಂಬವು ಪೊಲೀಸರಲ್ಲಿ ದೂರು ದಾಖಲಿಸಿತು. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ, ಒಂದು ವೀಡಿಯೊ ಸಿಕ್ಕಿತು. ಇದರಲ್ಲಿ ನಿಹಾಳನ್ನು ಬಲವಂತವಾಗಿ ಮತಾಂತರ ಮಾಡಲಾಗುತ್ತಿರುವುದು ಕಂಡುಬರುತ್ತಿದೆ; ಆದರೆ ಅದರಲ್ಲಿ ಆಕೆ ‘ನಾನು ಸ್ವಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ’ ಎಂದು ಹೇಳುತ್ತಿದ್ದಾಳೆ. ಈ ವೀಡಿಯೊವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ಕಾರಣ, ಪೊಲೀಸ್ ಆಡಳಿತದ ಕಾರ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.

6. ಈ ಪ್ರಕರಣದ ಬಗ್ಗೆ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಪ್ರಮೋದ ಮುತಾಲಿಕ್ ಮತ್ತು ಯತಿ ಮಾಂ ಚೇತನಾನಂದ ಸರಸ್ವತಿ ಅವರು ಪ್ರತಿಭಟನೆ ನಡೆಸಿ, ನಿಹಾಳನ್ನು ವಾಪಸ್ ಕರೆತರುವ ಜೊತೆಗೆ ಕಾಶ್ಮೀರದಲ್ಲಿ ಹಿಂದೂಗಳ ರಕ್ಷಣೆಗಾಗಿ ಅಲ್ಲಿ ಒಂದು ಭದ್ರತಾ ಪಡೆಯನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಾಶ್ಮೀರಿ ಹಿಂದೂ ಮಹಿಳೆಯರನ್ನು ‘ಲವ್ ಜಿಹಾದ್’ನಿಂದ ರಕ್ಷಿಸಿ! – ಪನೂನ್ ಕಾಶ್ಮೀರ

ಈ ಪ್ರಕರಣದ ಬಗ್ಗೆ ‘ಯೂತ್ ಫಾರ್ ಪನೂನ್ ಕಾಶ್ಮೀರ’ದ ರಾಹುಲ್ ಕೌಲ್ ಅವರು ‘ಸನಾತನ ಪ್ರಭಾತ’ಕ್ಕೆ ತಿಳಿಸಿದ್ದು, 1990ರ ದಶಕದಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡದ ಸಮಯದಲ್ಲಿ ಅವರಿಗೆ ಯಾರೂ ಇರಲಿಲ್ಲ. ಇಂದು ನಿಹಾ ರೈನಾ ಅವರಿಗೆ ಸಂಬಂಧಿಸಿದಂತೆ ನಡೆದ ಘಟನೆಯನ್ನು ಗಮನಿಸಿದರೆ ಭಾರತದಾದ್ಯಂತ ಹಿಂದೂಗಳು ಸಂಘಟಿತರಾಗಬೇಕು. ರಾಜ್ಯ ಹಾಗೂ ಕೇಂದ್ರ ಸರಕಾರಗಳ ಮೇಲೆ ಒತ್ತಡ ಹೇರಿ ಈ ಪ್ರಕರಣದಲ್ಲಿ ಹಿಂದೂಗಳನ್ನು ರಕ್ಷಿಸಲು ಪ್ರಯತ್ನಿಸಬೇಕು. ಕೌಲ್ ಅವರು ಸರಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸುತ್ತಾ, ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಮಹಿಳೆಯರಿಗೆ ಲವ್ ಜಿಹಾದ್‌ ನಿಂದ ರಕ್ಷಣೆ ಒದಗಿಸಬೇಕು. ಸಜ್ಜಾದ್ ಮೀರ್ ಅನ್ನು ತಕ್ಷಣ ಬಂಧಿಸಬೇಕು. ಅವನ ಮತ್ತು ನಿಹಾಳ ನಿಕಾಹ್ ಅನ್ನು ಅಸಿಂಧು ಎಂದು ಘೋಷಿಸಬೇಕು, ಹಾಗೂ ಹಿಂದೂ ಯುವತಿಯರಿಗೆ ಕಾನೂನುಬದ್ಧ ಭದ್ರತೆಯ ಭರವಸೆ ನೀಡಬೇಕು.

ಸಂಪಾದಕೀಯ ನಿಲುವು

  • 1990ರಲ್ಲಿ ಹಿಂದೂಗಳ ಪಲಾಯನದ ಸಮಯದಲ್ಲಿ ಹಿಂದೂ ಸಂತ್ರಸ್ತ ಕುಟುಂಬವನ್ನು ತಡೆದ ಅದೇ ಮುಸಲ್ಮಾನ ಕುಟುಂಬವೇ ವಿಶ್ವಾಸಘಾತ ಮಾಡಿದೆ!
  • 90ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡ ನಡೆಸಿ, ಅವರನ್ನು ಓಡಿಸಿ ಅಲ್ಲಿನ ಹಿಂದೂಗಳ ಜನಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು. ಆದರೆ ಈಗ ಭಯೋತ್ಪಾದನೆಯ ಜೊತೆಗೆ ಲವ್ ಜಿಹಾದ್ ನಂತಹ ಅಸ್ತ್ರಗಳನ್ನು ಬಳಸಿ ಅಲ್ಲಿನ ಹಿಂದೂಗಳನ್ನು ನಾಶ ಮಾಡಲಾಗುತ್ತಿದೆ, ಇದು ಇದರಿಂದ ಸ್ಪಷ್ಟವಾಗಿ ಕಂಡು ಬರುತ್ತಿದೆ!