ನಾವು ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ! – ಕೇಂದ್ರ ಸರಕಾರ

ನವದೆಹಲಿ – ಭಾರತದ ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾ ರಾಜ್ಯಗಳ ಕೆಲವು ಭಾಗಗಳನ್ನು ಬಾಂಗ್ಲಾದೇಶದ ನಕ್ಷೆಯಲ್ಲಿ ತೋರಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ರಣದೀಪ್ ಸುರ್ಜೇವಾಲಾ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಎತ್ತಿದರು. ಇದಕ್ಕೆ ಲಿಖಿತ ಉತ್ತರ ನೀಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ನಾವು ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದರು. ಇಂತಹ ಪ್ರಚಾರವನ್ನು ಎದುರಿಸಲು ಸರಕಾರ ಸಂಪೂರ್ಣ ಸಿದ್ಧವಾಗಿದೆ.
🛑 From Gratitude to Greed: Bangladesh Crosses the Line!
🚨 Islamist group ‘Saltanat-e-Bangla’, backed by Turkish NGO ‘Turkish Youth Federation’, displays a provocative map at Dhaka Univ.
🗺️ Parts of Bengal, Assam, Tripura, Bihar, Odisha, Jharkhand & Meghalaya shown as… pic.twitter.com/3yrnAXjdHU
— Sanatan Prabhat (@SanatanPrabhat) August 1, 2025
ವಿಷಯವೇನು?
ವಿದೇಶಾಂಗ ಸಚಿವಾಲಯದ ಪ್ರಕಾರ, ವಿವಾದಾತ್ಮಕ ನಕ್ಷೆಯನ್ನು ಏಪ್ರಿಲ್ ೧೪, ೨೦೨೫ ರಂದು ಢಾಕಾ ವಿಶ್ವವಿದ್ಯಾಲಯದಲ್ಲಿ ನಡೆದ ಪ್ರದರ್ಶನದಲ್ಲಿ ಪ್ರದರ್ಶಿಸಲಾಗಿತ್ತು. ‘ಗ್ರೇಟರ್ (ಬೃಹತ್) ಬಾಂಗ್ಲಾದೇಶ’ದ ನಕ್ಷೆಯನ್ನು ಢಾಕಾದ ‘ಸುಲ್ತಾನತ್-ಎ-ಬಾಂಗ್ಲಾ’ ಎಂಬ ಇಸ್ಲಾಮಿಕ್ ಗುಂಪು ಸಿದ್ಧಪಡಿಸಿದೆ. ಬಾಂಗ್ಲಾದೇಶ ಸರಕಾರದ ‘ಬಾಂಗ್ಲಾಫ್ಯಾಕ್ಟ್’ ವೆಬ್‌ಸೈಟ್, ‘ಸುಲ್ತಾನತ್-ಎ-ಬಾಂಗ್ಲಾ’ ಬಾಂಗ್ಲಾದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದೆ. ಈ ಗುಂಪಿಗೆ ಟರ್ಕಿಯ ‘ಟರ್ಕಿಶ್ ಯೂತ್ ಫೆಡರೇಶನ್’ ಎಂಬ ಎನ್‌ಜಿಒ (ಸರಕಾರೇತರ ಸಂಸ್ಥೆ) ಬೆಂಬಲವಿದೆ. ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅಧಿಕಾರಕ್ಕೆ ಬಂದ ನಂತರ ಟರ್ಕಿ ಮತ್ತು ಬಾಂಗ್ಲಾದೇಶದ ಸಂಬಂಧಗಳು ಬಲಗೊಂಡಿವೆ.
ಡಿಸೆಂಬರ್ ೨೦೨೪ ರಲ್ಲಿ, ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಅವರ ಸಲಹೆಗಾರ ಮಹಫುಜ್ ಆಲಮ್, ಬಾಂಗ್ಲಾದೇಶದ ಒಂದು ತಪ್ಪು ನಕ್ಷೆಯನ್ನು ಪೋಸ್ಟ್ ಮಾಡಿದ್ದರು. ಈ ನಕ್ಷೆಯಲ್ಲಿ, ಮಹಫುಜ್ ಆಲಮ್ ಅವರು ಭಾರತದ ಪಶ್ಚಿಮ ಬಂಗಾಳ, ತ್ರಿಪುರ ಮತ್ತು ಅಸ್ಸಾಂ ರಾಜ್ಯಗಳ ಕೆಲವು ಭಾಗಗಳನ್ನು ಬಾಂಗ್ಲಾದೇಶದಲ್ಲಿ ತೋರಿಸಿದ್ದರು. ಆದರೆ, ವಿವಾದ ಹೆಚ್ಚಾದ ನಂತರ ಈ ಪೋಸ್ಟ್ ಅನ್ನು ಅಳಿಸಲಾಯಿತು.

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಭಾರತದ ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ