ಆಗಸ್ಟ್ 11 ರಿಂದ ಕಾಶಿ ವಿಶ್ವನಾಥ ಧಾಮ ಪ್ಲಾಸ್ಟಿಕ್ ಮುಕ್ತ !

ಪ್ಲಾಸ್ಟಿಕ್ ಬುಟ್ಟಿ ಮತ್ತು ಲೋಟಗಳಿಗೆ ನಿಷೇಧ

ವಾರಣಾಸಿ (ಉತ್ತರ ಪ್ರದೇಶ) – ಕಾಶಿ ವಿಶ್ವನಾಥ ಧಾಮವು ಆಗಸ್ಟ್ 11 ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಲಿದೆ. ನಿಶೇಷವಾಗಿ, ಪ್ಲಾಸ್ಟಿಕ್ ಬುಟ್ಟಿಗಳು ಮತ್ತು ಪ್ಲಾಸ್ಟಿಕ್ ಲೋಟಗಳ ಬಳಕೆಯನ್ನು ನಿಷೇಧಿಸಲಾಗುವುದು. ಭಕ್ತರು ಕೂಡಾ ಅಂತಹ ಪ್ಲಾಸ್ಟಿಕ್ ವಸ್ತುಗಳನ್ನು ದೇವಾಲಯಕ್ಕೆ ತರದಂತೆ ವಿನಂತಿಸಲಾಗುವುದು.

ಭಕ್ತರಿಗೆ ಸೆಣಬು (ಜೂಟ್) ಮತ್ತು ಮರದಿಂದ ಮಾಡಿದ ಬುಟ್ಟಿಗಳನ್ನು ಬಳಸಲು ಮನವಿ

ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವಭೂಷಣ್ ಅವರು, ಭಕ್ತರು ಸೆಣಬು (ಜೂಟ್) ಮತ್ತು ಮರದಿಂದ ಮಾಡಿದ ಬುಟ್ಟಿಗಳನ್ನು ಬಳಸಬೇಕು ಎಂದು ತಿಳಿಸಿದ್ದಾರೆ. ಪ್ರಸ್ತುತ, ಅನೇಕ ಭಕ್ತರು ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ತರುತ್ತಾರೆ, ಹಾಗೆಯೇ ಪಾಲಿಥಿನ್ ಚೀಲಗಳಲ್ಲಿ ಪ್ರಸಾದ, ಹೂವುಗಳು ಇತ್ಯಾದಿಗಳನ್ನು ತಂದು ದೇವಸ್ಥಾನದ ಆವರಣದಲ್ಲಿ ಎಸೆಯುತ್ತಾರೆ. (ಹಿಂದುಗಳಿಗೆ ಧರ್ಮ ಶಿಕ್ಷಣ ಇಲ್ಲದಿರುವುದರ ಪರಿಣಾಮ ! – ಸಂಪಾದಕರು)

ಸ್ವಚ್ಛತೆಗೆ ಅಡ್ಡಿ ಮತ್ತು ಪರಿಸರಕ್ಕೆ ಅಪಾಯ

ಈ ಪ್ಲಾಸ್ಟಿಕ್ ಯಿಂದ ಸ್ವಚ್ಛತೆ ಕಾಪಾಡಲು ಅಡ್ಡಿಯಾಗುತ್ತದೆ. ಹಲವು ಬಾರಿ ಪ್ಲಾಸ್ಟಿಕ್ ವಸ್ತುಗಳು ಒಳಚರಂಡಿಗೆ ಬಿದ್ದು ತಡೆಗಳನ್ನು ಸೃಷ್ಟಿಸುತ್ತವೆ, ಇದರಿಂದ ಒಳಚರಂಡಿಗಳು ತುಂಬಿ ಹರಿಯುತ್ತವೆ. ಪರಿಸರ ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನದ ಆಡಳಿತವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ರೀತಿಯ ನಿರ್ಧಾರವನ್ನು ಈ ಹಿಂದೆ ತಾತ್ಕಾಲಿಕವಾಗಿ ತೆಗೆದುಕೊಳ್ಳಲಾಗಿತ್ತು; ಆದರೆ ಈ ಬಾರಿ ಈ ನಿರ್ಧಾರಗಳನ್ನು ಶಾಶ್ವತವಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು.