
ಮುಂಬಯಿ – ಗೃಹ ಸಚಿವರಾಗಿದ್ದಾಗ ಕಾಂಗ್ರೆಸ್‌ನ ಹಿರಿಯ ನಾಯಕ ಪಿ. ಚಿದಂಬರಂ ಅವರು 2010 ರಲ್ಲಿ ಮೊದಲು ‘ಕೇಸರಿ ಭಯೋತ್ಪಾದನೆ’ (ಭಗವಾ ಆತಂಕವಾದ್) ಎಂಬ ಪದವನ್ನು ಬಳಸಿದ್ದರು. ನಂತರ ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಕೂಡ ಅದೇ ಪದವನ್ನು ಬಳಸಿದ್ದರು. ಕಾಲಾನಂತರದಲ್ಲಿ ಅವರಿಗೆ ಮನವರಿಕೆಯಾಗಿ, ‘ನಾನು ‘ಕೇಸರಿ ಭಯೋತ್ಪಾದನೆ’ ಎಂಬ ಪದವನ್ನು ಬಳಸಬಾರದಿತ್ತು’ ಎಂದು ಅವರು ಒಪ್ಪಿಕೊಂಡರು. ‘ಈ ಪದವನ್ನು ಬಳಸಲು ಕಾಂಗ್ರೆಸ್ ಪಕ್ಷ ನನಗೆ ಹೇಳಿತ್ತು’ ಎಂದೂ ಅವರು ಒಪ್ಪಿಕೊಂಡರು. ಅವರು ಹೇಳಿದರು, “ಭಯೋತ್ಪಾದನೆ ಎಂಬುದು ಕೇಸರಿ, ಕೆಂಪು ಅಥವಾ ಬಿಳಿ ಬಣ್ಣದ್ದಾಗಿರುವುದಿಲ್ಲ. ಭಯೋತ್ಪಾದನೆ ಎಂದರೆ ಭಯೋತ್ಪಾದನೆ. ಆಗ ‘ದಾಖಲೆ’ಯಲ್ಲಿ ಏನಿತ್ತೋ, ಅದನ್ನೇ ಹೇಳಿದ್ದೆ. ‘ಕೇಸರಿ ಭಯೋತ್ಪಾದನೆ ಸಕ್ರಿಯವಾಗಿದೆ’ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು.”
ಕಾಲಾನಂತರದಲ್ಲಿ ರಾಜಕೀಯದಿಂದ ನಿವೃತ್ತರಾದ ಸುಶೀಲ್ ಕುಮಾರ್ ಶಿಂಧೆ ಅವರು, “ನಾನು ‘ಭಯೋತ್ಪಾದನೆ’ ಎಂಬ ಪದವನ್ನು ಬಳಸಿದೆ; ಆದರೆ ಈ ಪದವನ್ನು ಏಕೆ ಬಳಸಿದೆ ಎಂಬುದು ನನಗೇ ತಿಳಿದಿಲ್ಲ. ಅದನ್ನು ಬಳಸಬಾರದಿತ್ತು. ‘ಕೇಸರಿ ಭಯೋತ್ಪಾದನೆ’ ಎಂದು ಹೇಳುವುದು ತಪ್ಪಾಗಿತ್ತು. ಅದು ಆ ಪಕ್ಷದ ಸಿದ್ಧಾಂತವಾಗಿರುತ್ತದೆ” ಎಂದರು.
ಸಂಪಾದಕೀಯ ನಿಲುವುಇದರಿಂದ ಕಾಂಗ್ರೆಸ್‌ನ ಹಿಂದೂದ್ರೋಹ ಬಯಲಾಗುತ್ತದೆ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!