(ಜಿಜಿಯಾ ತೆರಿಗೆ ಎಂದರೆ ಮುಸ್ಲಿಮೇತರರ ರಕ್ಷಣೆಗಾಗಿ ಅವರಿಂದ ಸಂಗ್ರಹಿಸುವ ತೆರಿಗೆ.)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ವಾಸಿಸುವ ಮುಸ್ಲಿಮೇತರರು ‘ಜಿಜಿಯಾ ತೆರಿಗೆ’ಯನ್ನು ಪಾವತಿಸಬೇಕಾಗುತ್ತದೆ. ಮುಸ್ಲಿಮರು ‘ಝಕಾತ್’ (ಮುಸ್ಲಿಮರು ತಮ್ಮ ಆಸ್ತಿಯ ಭಾಗವನ್ನು ದಾನ ಮಾಡುವುದು) ನೀಡುತ್ತಾರೆ, ಹಾಗಾಗಿ ಸಮಾನ ಹಕ್ಕುಗಳು ಬೇಕಿದ್ದರೆ, ಹಿಂದೂಗಳು ಜಿಜಿಯಾ ಪಾವತಿಸಬೇಕು. ಶರಿಯತ್ ಕಾನೂನಿನ ಪ್ರಕಾರ ಇದು ಸರಿಯಾಗಿದೆ ಎಂದು ಜಮಾತ್-ಎ-ಇಸ್ಲಾಮಿ ರಾಜಕೀಯ ಪಕ್ಷದ ನಾಯಕರೊಬ್ಬರು ಸಾರ್ವಜನಿಕ ಸಭೆಯಲ್ಲಿ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡ ಅವರು ಹಲವು ಬಾರಿ ಇಂತಹ ಹೇಳಿಕೆಗಳನ್ನು ನೀಡಿದ್ದರು. ಈ ಗಂಭೀರ ಹೇಳಿಕೆಯ ಬಗ್ಗೆ ದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಅವರು ಯಾವುದೇ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಈ ಹೇಳಿಕೆಯನ್ನು ಖಂಡಿಸಿಲ್ಲ ಅಥವಾ ಸ್ಪಷ್ಟೀಕರಣವ ಕೂಡ ನೀಡಲಿಲ್ಲ. ಹಾಗಾಗಿ, ‘ಇದರ ಹಿಂದೆ ಯಾವುದಾದರೂ ಷಡ್ಯಂತ್ರವಿದೆಯೇ?’ ಎಂಬ ಚರ್ಚೆ ನಡೆಯುತ್ತಿದೆ.
ಮೂಲಗಳ ಪ್ರಕಾರ, ಈ ಬೇಡಿಕೆಯು ಕೇವಲ ಧಾರ್ಮಿಕ ನಿಯಮಗಳ ಹೆಸರಿನಲ್ಲಿ ನಡೆಯುತ್ತಿಲ್ಲ, ಇದರ ಹಿಂದೆ ಪೂರ್ವ ಯೋಜಿತ ಪಿತೂರಿ ಇದೆ. ಹಿಂದೂ, ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮೀಯರನ್ನು ಆರ್ಥಿಕವಾಗಿ ದುರ್ಬಲಗೊಳಿಸುವುದು, ಅವರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವುದು ಮತ್ತು ಧಾರ್ಮಿಕ ತಾರತಮ್ಯದ ಆಧಾರದ ಮೇಲೆ ಅವರನ್ನು ಮುಖ್ಯವಾಹಿನಿಯಿಂದ ಹೊರಗಿಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಹಿಂದೂಗಳು ದ್ವಿಗುಣ ತೆರಿಗೆ ಪಾವತಿಸಬೇಕಾಗುತ್ತದೆಯೇ?

ಈ ಬೇಡಿಕೆಯು ಸರಕಾರಿ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟರೆ, ಬಾಂಗ್ಲಾದೇಶದ ಹಿಂದೂಗಳು ನಿಯಮಿತ ತೆರಿಗೆಗಳ ಜೊತೆಗೆ ಪ್ರತ್ಯೇಕ ಧಾರ್ಮಿಕ ತೆರಿಗೆಯಾದ ‘ಜಿಜಿಯಾ’ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರಿಂದ ಸಮಾಜದಲ್ಲಿ ಧ್ರುವೀಕರಣ, ಉದ್ವಿಗ್ನತೆ ಮತ್ತು ಧಾರ್ಮಿಕ ಸಂಘರ್ಷ ಹೆಚ್ಚಾಗಬಹುದು.
ಸಂಪಾದಕೀಯ ನಿಲುವುಇಸ್ಲಾಮಿಕ್ ದೇಶಗಳಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಹಕ್ಕುಗಳಿರುವುದಿಲ್ಲ, ಬದಲಿಗೆ ಅವರನ್ನು ಧಾರ್ಮಿಕವಾಗಿ ಹಿಂಸಿಸಲಾಗುತ್ತದೆ. ಇನ್ನೊಂದೆಡೆ, ಜಾತ್ಯತೀತ ಭಾರತವೆಂದು ಕರೆಯಲ್ಪಡುವ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರನ್ನು (ವಿಶೇಷವಾಗಿ ಮುಸ್ಲಿಮರನ್ನು) ತಲೆಯ ಮೇಲೆ ಹೊತ್ತುಕೊಳ್ಳಲಾಗುತ್ತದೆ ಮತ್ತು ಬಹುಸಂಖ್ಯಾತರನ್ನು ತುಳಿಯಲಾಗುತ್ತದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಸೋಲಾಪುರದಲ್ಲಿ ಅನಧಿಕೃತ ಚರ್ಚ್ ಮತ್ತು ಮಹಾನಗರ ಪಾಲಿಕೆ ನೌಕರನ ಅಕ್ರಮಗಳ ತನಿಖೆ!