
ಮುಂಬಯಿ, 31 ಜುಲೈ (ವಾರ್ತಾ) – 2008ರಲ್ಲಿ ಮಾಲೆಗಾಂವ್ ನಲ್ಲಿನ ಸ್ಫೋಟ ಪ್ರಕರಣದಲ್ಲಿ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಲಹೋಟಿ ಅವರು ತೀರ್ಪನ್ನು ಓದುತ್ತಾ, ಎಲ್ಲ 7 ಆರೋಪಿಗಳನ್ನು ನಿರಪರಾಧಿ ಎಂದು ಬಿಡುಗಡೆ ಮಾಡಿದರು. ಭಯೋತ್ಪಾದನೆಗೆ ಧರ್ಮ ಇಲ್ಲ ಎಂದು ನ್ಯಾಯಮೂರ್ತಿಗಳು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ತೀರ್ಪಿನ 10 ಪ್ರಮುಖ ಅಂಶಗಳು ಹೀಗಿವೆ…
ಆರ್.ಡಿ.ಎಕ್ಸ್. ಮತ್ತು ಬಾಂಬ್ ಅನ್ನು ಕರ್ನಲ್ ಪ್ರಸಾದ್ ಪುರೋಹಿತ್ ತಂದರು ಅಥವಾ ಒದಗಿಸಿದರು ಎಂಬುದಕ್ಕೆ ಪುರಾವೆ ಇಲ್ಲ.
ಸಾಧ್ವಿಯ ಬೈಕ್‌ಗೆ ಸ್ಫೋಟದೊಂದಿಗೆ ಸಂಬಂಧ ಇರಲಿಲ್ಲ.
ಆರೋಪಿಗಳ ಸಭೆಗಳು ನಡೆದಿದ್ದವು ಎಂಬುದಕ್ಕೆ ಪುರಾವೆ ಇಲ್ಲ.
ಮೊಬೈಲ್‌ನಲ್ಲಿಯೂ ಯಾವುದೇ ಪುರಾವೆಗಳು ಸಿಕ್ಕಿಲ್ಲ.
ಯುಎಪಿಎ (UAPA) ಹಾಕುವುದು ಸರಿಯಾಗಿರಲಿಲ್ಲ.
ಪುರೋಹಿತ್ ‘ಅಭಿನವ್ ಭಾರತ್’ ಸಂಸ್ಥೆಯ ಹಣವನ್ನು ಸ್ಫೋಟಕ್ಕಾಗಿ ಬಳಸಿದರು ಎಂಬುದಕ್ಕೆ ಪುರಾವೆ ಇಲ್ಲ.
ಪಂಚನಾಮೆಯನ್ನು ಸರಿಯಾಗಿ ಮಾಡಿಲ್ಲ.
ಕೇವಲ ಸಂಶಯದ ಆಧಾರದ ಮೇಲೆ ಆರೋಪಿಗಳಿಗೆ ಶಿಕ್ಷೆ ನೀಡಲಾಗುವುದಿಲ್ಲ.
ಆರೋಪಿಗಳಿಗೆ ಸಂಶಯದ ಲಾಭ.
ಎಲ್ಲ 7 ಆರೋಪಿಗಳ ನಿರ್ದೋಷಿ ಬಿಡುಗಡೆ: ಕರ್ನಲ್ ಪ್ರಸಾದ್ ಪುರೋಹಿತ್, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಮೇಜರ್ ರಮೇಶ್ ಉಪಾಧ್ಯಾಯ, ಸಮೀರ್ ಕುಲಕರ್ಣಿ, ಅಜಯ್ ರಾಹಿರ್ಕರ್, ಸುಧಾಕರ್ ಚತುರ್ವೇದಿ ಮತ್ತು ಸುಧಾಕರ್ ದ್ವಿವೇದಿ.
|
‘ಕೇಸರಿ ಭಯೋತ್ಪಾದನೆ’ಯ ಬ್ಯಾನರ್ ಅನ್ನು ಸೃಷ್ಟಿಸಲು ಕಾಂಗ್ರೆಸ್ ಈ ಪ್ರಕರಣವನ್ನು ಬಳಸಿಕೊಂಡಿದೆ ಎಂಬ ಆರೋಪವಿರುವ 2008ರ ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದ ಅಂತಿಮ ತೀರ್ಪು ಇಂದು ಹೊರಬೀಳುವ ಸಾಧ್ಯತೆ ಇತ್ತು. ಮುಂಬಯಿ ಸೆಷನ್ಸ್ ನ್ಯಾಯಾಲಯದ ವಿಶೇಷ ಎನ್.ಐ.ಎ. ನ್ಯಾಯಾಲಯದಲ್ಲಿ ಈ ತೀರ್ಪು ಪ್ರಕಟವಾಗಿದೆ. ಸಾಧ್ವಿ ಪ್ರಜ್ಞಾಸಿಂಗ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ, ಸುಧಾಕರ್ ಚತುರ್ವೇದಿ, ಸಮೀರ್ ಕುಲಕರ್ಣಿ ಸೇರಿದಂತೆ ಹಲವು ಹಿಂದೂ ಕಾರ್ಯಕರ್ತರನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಲಾಗಿತ್ತು. ಪ್ರಸ್ತುತ ಈ ಪ್ರಕರಣದ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾಸಿಂಗ್ ಮತ್ತು ಇತರ ಹಿಂದೂ ಕಾರ್ಯಕರ್ತರನ್ನು ಸಿಲುಕಿಸಿದ್ದರಿಂದ, ದೇಶದ ಎಲ್ಲಾ ಹಿಂದೂ ಕಾರ್ಯಕರ್ತರು ಈ ತೀರ್ಪಿನತ್ತ ವಿಶೇಷ ಗಮನ ಹರಿಸಿತ್ತು. |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !