ಚೀನೀ ಸಂಸ್ಥೆಗಳ ಹಿಂದೂ ದ್ವೇಷ!

(ಈ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಭಾವನೆಗಳಿಗೂ ನೋವುಂಟು ಮಾಡುವುದಾಗಿರದೇ ಮಾಹಿತಿಗಾಗಿತೋರಿಸಲಾಗಿದೆ ! – ಸಂಪಾದಕರು)
ಭುವನೇಶ್ವರ (ಒಡಿಶಾ) – ಚೀನಾದ ‘ಅಲಿಎಕ್ಸ್‌ಪ್ರೆಸ್’ ಎಂಬ ಆನ್ ಲೈನ್ ಮಾರಾಟ ಮಾಡುವ ಸಂಸ್ಥೆಯು ‘ಭಗವಾನ ಜಗನ್ನಾಥ ಮಂಡಲಾ ಆರ್ಟ್ ಡೋರ್‌ಮ್ಯಾಟ್’ ಎಂಬ ಹೆಸರಿನಲ್ಲಿ ಕಾಲುಒರೆಸುವ ಮ್ಯಾಟ್ ಆನ್ ಲೈನ್ ಮಾರಾಟವನ್ನು ಪ್ರಾರಂಭಿಸಿದೆ. ಈ ಕಾಲು ಒರೆಸುವ ಮ್ಯಾಟ್ ಮೇಲೆ ಭಗವಾನ ಜಗನ್ನಾಥನ ಚಿತ್ರವನ್ನು ಮುದ್ರಿಸಲಾಗಿದೆ. ಹಿಂದೂಗಳ ಶ್ರದ್ಧೆಗೆ ಅವಮಾನ ಮಾಡುವ ಈ ಕೃತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳು ಟೀಕೆ ವ್ಯಕ್ತಪಡಿಸಿ ಆಕ್ರೋಶಗೊಂಡಿದ್ದಾರೆ.
1. ಈ ಕಾಲುಒರೆಸುವ ಮ್ಯಾಟ್ ಜಾಹೀರಾತಿನಲ್ಲಿ ಒಬ್ಬ ವ್ಯಕ್ತಿ ಆ ಚಿತ್ರದ ಮೇಲೆ ಕಾಲಿಡುತ್ತಿರುವುದನ್ನು ತೋರಿಸಲಾಗಿದೆ. ಉತ್ಪನ್ನದ ವಿವರಣೆಯಲ್ಲಿ ಅದನ್ನು ‘ತೇವಾಂಶ ಹೀರಿಕೊಳ್ಳುವ’ ಎಂದು ಹೇಳಲಾಗಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ.
2. ‘ಈ ವಿಷಯವು ಧಾರ್ಮಿಕ ಅಪಮಾನದ ಪರಾಕಾಷ್ಠೆಯಾಗಿದೆ. ಅಂತರರಾಷ್ಟ್ರೀಯ ವೇದಿಕೆಗಳು ಇಂತಹ ವಸ್ತುಗಳಿಗೆ ಅನುಮತಿ ನೀಡಬಾರದು’ ಎಂಬ ಪದಗಳಲ್ಲಿ ಹಿಂದೂಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
3. ಪುರಿ (ಒಡಿಶಾ) ಇಲ್ಲಿನ ಭಗವಾನ ಜಗನ್ನಾಥ ದೇವಸ್ಥಾನ ಸಮಿತಿಯ ಮಾಜಿ ಸದಸ್ಯ ಮಾಧವ ಪುಜಾಪಂಡಾ ಅವರು ಈ ಘಟನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ದೇವಸ್ಥಾನ ಆಡಳಿತಕ್ಕೆ ಮನವಿ ಮಾಡಿದ್ದು, ಈ ಪ್ರಕರಣದ ಮಾಹಿತಿಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ನೀಡಬೇಕು ಮತ್ತು ಚೀನೀ ಅಧಿಕಾರಿಗಳನ್ನು ಸಂಪರ್ಕಿಸಿ ಈ ಉತ್ಪನ್ನದ ಮಾರಾಟವನ್ನು ತಕ್ಷಣವೇ ನಿಷೇಧಿಸಬೇಕು ಎಂದು ಹೇಳಿದ್ದಾರೆ.
4. ಈ ಸಂಸ್ಥೆಯು ತಕ್ಷಣವೇ ಈ ಉತ್ಪನ್ನದ ಆನ್ ಲೈನ್ ಮಾರಾಟವನ್ನು ನಿಲ್ಲಿಸಬೇಕು ಮತ್ತು ಹಿಂದೂಗಳ ಕ್ಷಮೆಯಾಚಿಸಬೇಕು ಎಂದು ಹಿಂದೂಗಳು ಬೇಡಿಕೆ ಇಟ್ಟಿದ್ದಾರೆ.
ಸಂಪಾದಕೀಯ ನಿಲುವುಜಗತ್ತಿನಲ್ಲಿ ಹಿಂದೂಗಳ ಪರಿಣಾಮಕಾರಿ ಸಂಘಟನೆ ಇಲ್ಲದ ಕಾರಣದಿಂದಲೇ ಹಿಂದೂ ದೇವರುಗಳನ್ನು ಈ ರೀತಿ ಅವಮಾನಿಸಲಾಗುತ್ತಿದೆ. ಇಂತಹ ಧರ್ಮಹಾನಿಯನ್ನು ತಡೆಯಲು ಹಿಂದೂಗಳು ಸಂಘಟಿತರಾಗಿ ಕಾನೂನುಬದ್ಧ ಮಾರ್ಗಗಳಿಂದ ಇಂತಹ ಕೃತ್ಯಗಳನ್ನು ನಿಲ್ಲಿಸುವುದು ಅವಶ್ಯಕವಾಗಿದೆ! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ