|

ಟೋಕಿಯೊ (ಜಪಾನ್) – ರಷ್ಯಾದಲ್ಲಿ ಜಗತ್ತಿನ ಆರನೇ ಅತಿ ಪ್ರಬಲ ಭೂಕಂಪ ಭಾರತೀಯ ಕಾಲಮಾನದ ಪ್ರಕಾರ ಜುಲೈ 30ರ ಮುಂಜಾನೆ 4.54ಕ್ಕೆ ಸಂಭವಿಸಿದೆ. ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪದಲ್ಲಿ ಸಂಭವಿಸಿದ ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 8.8ರಷ್ಟು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ ತಿಳಿಸಿದೆ. ಇಲ್ಲಿನ ದ್ವೀಪಗಳಿಂದ ಸುಮಾರು 2 ಸಾವಿರದ 700 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಯಿಟರ್ಸ್ ನೀಡಿರುವ ಮಾಹಿತಿಯ ಪ್ರಕಾರ, ಭೂಕಂಪದ ನಂತರ ಬಂದ ಸುನಾಮಿಯಿಂದ ಕಮ್ಚಟ್ಕಾದಲ್ಲಿ 4 ಮೀಟರ್ ಎತ್ತರದವರೆಗೆ, ಕೆಲವು ಭಾಗಗಳಲ್ಲಿ 5 ಮೀಟರ್ ಎತ್ತರದವರೆಗೆ ಅಲೆಗಳು ಅಪ್ಪಳಿಸಿವೆ. ಇಲ್ಲಿನ ಅನೇಕ ಕಟ್ಟಡಗಳು ಹಾನಿಗೊಳಗಾಗಿವೆ. ಭೂಕಂಪದ ಕೇಂದ್ರವು ಭೂಮಿಯಿಂದ 19.3 ಕಿಲೋಮೀಟರ್ ಆಳದಲ್ಲಿತ್ತು.
🌍 #Tsunami Alerts Across Pacific!
🚨Massive M8.8 quake near Russia’s Kamchatka; strongest since 2011, triggers tsunami warnings!
🌊 Waves hit Kuril Islands 🇷🇺 & Hokkaido 🇯🇵
🌧️ Flooding reported in Severo-Kurilsk
⚠️ Evacuation alerts for:
🔹 Hawaii
🔹 US West Coast (CA, AK)… pic.twitter.com/ox6QwGSt7T— Sanatan Prabhat (@SanatanPrabhat) July 30, 2025
ಜಪಾನ್‌ನ ಸರಕಾರಿ ಸುದ್ದಿವಾಹಿನಿ ‘ಎನ್.ಹೆಚ್.ಕೆ.’ ನೀಡಿರುವ ಮಾಹಿತಿ ಪ್ರಕಾರ, ದೇಶದ ಪೂರ್ವ ಕರಾವಳಿಯ ಬಳಿ 1 ಅಡಿ ಎತ್ತರದ ಮೊದಲ ಸುನಾಮಿ ಅಲೆಗಳು ಕಂಡುಬಂದಿವೆ. ಜಪಾನ್ ಸುಮಾರು 20 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಫುಕುಶಿಮಾ ಪರಮಾಣು ಸ್ಥಾವರಕ್ಕೂ ಅಪಾಯವಿದೆ ಎಂದು ಹೇಳಲಾಗಿದೆ. ಇಲ್ಲಿ ಪರಮಾಣು ಬಾಂಬ್ ಸ್ಫೋಟಗೊಳ್ಳಬಹುದು ಎಂಬ ಆತಂಕದಿಂದ ಪರಮಾಣು ಸ್ಥಾವರ ಕೇಂದ್ರವನ್ನು ಮುಚ್ಚಲಾಗಿದೆ.
ಅಮೆರಿಕದ ಹವಾಯಿ ದ್ವೀಪಸಮೂಹ ಹಾಗೂ ಅಲಾಸ್ಕಾದಲ್ಲಿಯೂ ಸುನಾಮಿ ಅಲೆಗಳು ಅಪ್ಪಳಿಸಿವೆ. ಹವಾಯಿಯಲ್ಲಿ 4 ಅಡಿ ಎತ್ತರದ ಅಲೆಗಳು ಅಪ್ಪಳಿಸಿದ್ದು, ಅವು 10 ಅಡಿ ಎತ್ತರಕ್ಕೆ ಏರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಅಮೆರಿಕದ ಪಶ್ಚಿಮ ಕರಾವಳಿಯ ವಿವಿಧ ಭಾಗಗಳಿಗೂ ಸುನಾಮಿ ಅಲೆಗಳು ಅಪ್ಪಳಿಸಬಹುದು. ನ್ಯೂಜಿಲೆಂಡ್‌ನಲ್ಲೂ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಈ ಭೂಕಂಪದಿಂದ ಇದುವರೆಗೆ ಎಷ್ಟು ಹಾನಿಯಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation