ಟ್ರಂಪ್ ಅವರಿಂದ ಲಂಡನ್‌ನ ಮೇಯರ್ ಸಾದಿಕ ಖಾನ್ ಅವರನ್ನು ‘ಕೆಟ್ಟ ವ್ಯಕ್ತಿ’ ಎಂದು ಉಲ್ಲೇಖ! – Trump British Mayor Sadiq Khan

ಈ ಹಿಂದೆ ಕೂಡ ಖಾನ್ ಅವರನ್ನು ‘ಮೂರ್ಖ’ ಮತ್ತು ‘ಅವಿವೇಕಿ’ ಎಂದು ಕರೆದಿದ್ದರು!

ಲಂಡನ್ (ಬ್ರಿಟನ್) – ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸ್ಕಾಟ್‌ಲ್ಯಾಂಡ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಲಂಡನ್ ಮೇಯರ್ ಸಾದಿಕ್ ಖಾನ್ ಅವರನ್ನು ‘ಕೆಟ್ಟ ವ್ಯಕ್ತಿ’ ಎಂದು ಉಲ್ಲೇಖಿಸಿದ್ದಾರೆ. ಈ ವೇಳೆ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಕೂಡ ಉಪಸ್ಥಿತರಿದ್ದರು. ‘ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ಗೆ ಭೇಟಿ ನೀಡುವಾಗ ನೀವು ಲಂಡನ್‌ಗೆ ಭೇಟಿ ನೀಡುತ್ತೀರಾ?’ ಎಂದು ಪತ್ರಕರ್ತರೊಬ್ಬರು ಟ್ರಂಪ್ ಅವರನ್ನು ಪ್ರಶ್ನಿಸಿದಾಗ. ಅದಕ್ಕೆ ಟ್ರಂಪ್, ‘ನಾನು ನಿಮ್ಮ ಮೇಯರ್‌ನ ಅಭಿಮಾನಿಯಲ್ಲ. ಅವರು ತುಂಬಾ ಕೆಟ್ಟ ಕೆಲಸ ಮಾಡಿದ್ದಾರೆ. ಹಾಗಿದ್ದರೂ, ನಾನು ಲಂಡನ್‌ಗೆ ಬರುತ್ತೇನೆ’ ಎಂದು ಹೇಳಿಕೆ ನೀಡಿದರು. ಅವರ ಹೇಳಿಕೆಗೆ ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ‘ಅವರು (ಸಾದಿಕ್ ಖಾನ್) ನನ್ನ ಸ್ನೇಹಿತರು’ ಎಂದು ಹೇಳಿದರು; ಆದರೆ ಟ್ರಂಪ್ ತಮ್ಮ ಹೇಳಿಕೆಗೆ ದೃಢವಾಗಿದ್ದರು ಮತ್ತು ‘ಅವರು ಅತ್ಯಂತ ಕೆಟ್ಟ ಕೆಲಸ ಮಾಡಿದ್ದಾರೆ’ ಎಂದು ಪುನರುಚ್ಚರಿಸಿದರು.

೧. ಸಾದಿಕ್ ಖಾನ್ ಲಂಡನ್‌ನ ಮೊದಲ ಮುಸ್ಲಿಂ ಮೇಯರ್ ಆಗಿದ್ದು, ಅವರು ಪಾಕಿಸ್ತಾನಿ ಮೂಲದವರು. ಸಾದಿಕ್ ಖಾನ್ ಭಾರತದ ಪ್ರಧಾನಿ ಮೋದಿ ವಿರೋಧಿ ಎಂದು ಕೂಡ ಹೇಳಲಾಗುತ್ತದೆ. ಅವರು ಹಲವು ಬಾರಿ ಮೋದಿ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ.

೨. ಟ್ರಂಪ್ ಅವರು ಸಾದಿಕ್ ಖಾನ್ ವಿರುದ್ಧ ಹೇಳಿಕೆ ನೀಡಿದ್ದು ಇದು ಮೊದಲ ಬಾರಿಯಲ್ಲ. 2019 ರಲ್ಲಿ ಕೂಡ ಅವರು ಖಾನ್ ಅವರನ್ನು ‘ಅಪಯಶಸ್ವಿ’ ಎಂದು ಕರೆದಿದ್ದರು ಮತ್ತು ಲಂಡನ್‌ನಲ್ಲಿ ಹೆಚ್ಚುತ್ತಿರುವ ಅಪರಾಧಗಳ ಮೇಲೆ ಗಮನ ಹರಿಸುವಂತೆ ಸಲಹೆ ನೀಡಿದ್ದರು.

೩. 2019 ರಲ್ಲಿ ಟ್ರಂಪ್ ಬ್ರಿಟನ್‌ಗೆ ರಾಜಕೀಯ ಭೇಟಿಯಲ್ಲಿದ್ದಾಗ ಮತ್ತು ಲಂಡನ್‌ಗೆ ಬರುವ ಮೊದಲು ಸಾಮಾಜಿಕ ಮಾಧ್ಯಮಗಳ ಮೂಲಕ ಖಾನ್ ಅವರನ್ನು ಗುರಿಯಾಗಿಸಿಕೊಂಡಿದ್ದರು.

೪. ಖಾನ್ ಭಯೋತ್ಪಾದನೆಯನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು. ಅವರನ್ನು ‘ಅವಿವೇಕಿ’ ಮತ್ತು ‘ಮೂರ್ಖ’ ಎಂದು ಕರೆದಿದ್ದರು.

೫. ಟ್ರಂಪ್ ಅವರ ಹೇಳಿಕೆಗೆ ಖಾನ್ ಅವರ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಅವರು ಮನವಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ, ‘ಜಗತ್ತಿನ ಅತಿದೊಡ್ಡ ನಗರಕ್ಕೆ ಬರಲು ಟ್ರಂಪ್ ಬಯಸಿದ್ದಾರೆ ಎಂಬುದಕ್ಕೆ ಮೇಯರ್ ಸಂತೋಷಪಟ್ಟಿದ್ದಾರೆ. ಅವರು ಲಂಡನ್‌ಗೆ ಬಂದರೆ, ಸಮಾಜದಲ್ಲಿರುವ ವೈವಿಧ್ಯತೆಯು ನಮ್ಮನ್ನು ದುರ್ಬಲಗೊಳಿಸದೆ, ಹೆಚ್ಚು ಬಲಪಡಿಸುತ್ತದೆ ಎಂಬುದನ್ನು ಅವರು ನೋಡುತ್ತಾರೆ’ ಎಂದು ಹೇಳಲಾಗಿದೆ.