|

ರಾಯಪುರ (ಛತ್ತೀಸ್‌ಗಢ) – ದೇಶಾದ್ಯಂತ ವೇಗವಾಗಿ ಬೆಳೆಯುತ್ತಿರುವ ಆನ್‌ಲೈನ್ ಜೂಜಾಟದಿಂದ (‘ರಿಯಲ್ ಮನಿ ಗೇಮಿಂಗ್’) ಲಕ್ಷಾಂತರ ಕುಟುಂಬಗಳು ನಾಶವಾಗುತ್ತಿವೆ. ಈ ಬಗ್ಗೆ ಕೇವಲ ರಾಜ್ಯದಲ್ಲಿ ಕಾನೂನು ರೂಪಿಸಿದರೆ ನಿಯಂತ್ರಣಕ್ಕೆ ಬರುವುದಿಲ್ಲ, ರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಮತ್ತು ಪರಿಣಾಮಕಾರಿ ಕಾನೂನು ಜಾರಿಗೆ ತರಬೇಕಾದ ಅನಿವಾರ್ಯತೆಯಿದೆ. ಇದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ದ ವತಿಯಿಂದ ಛತ್ತೀಸ್‌ಗಢ ಮುಖ್ಯಮಂತ್ರಿ ಶ್ರೀ ವಿಷ್ಣುದೇವ್ ಸಾಯಿ ಅವರನ್ನು ಭೇಟಿ ಮಾಡಿ, ಭಾರತೀಯ ಸಂವಿಧಾನದ ಅನುಚ್ಛೇದ ೨೫೨ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಕಾನೂನು ರೂಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಲಾಯಿತು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ, ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವ ಭರವಸೆ ನೀಡಿದ್ದಾರೆ.
🎰 Ban Online Gambling Nationwide!
🛑 @SurajyaCampaign delegation meets Chhattisgarh CM @vishnudsai with demand for national law under Article 252.
✅ CM assures: Proposal will be sent to Centre soon!
🚩 Delegation included:
🔹 @SG_HJS (@HinduJagrutiOrg)
🔹 @RanjitSavarkar… pic.twitter.com/JnavrLUmow— Sanatan Prabhat (@SanatanPrabhat) July 29, 2025

ಈ ನಿಯೋಗದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರ ರಾಜ್ಯ ಸಂಘಟಕರಾದ ಶ್ರೀ ಸುನೀಲ್ ಘನವಟ್, ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕದ ಕಾರ್ಯಾಧ್ಯಕ್ಷ ಹಾಗೂ ಸ್ವಾ. ಸಾವರ್ಕರ್ ಅವರ ಮೊಮ್ಮಗ ಶ್ರೀ ರಣಜಿತ್ ಸಾವರ್ಕರ್, ಛತ್ತೀಸ್‌ಗಢ ರಾಜ್ಯದ ಶ್ರೀ ಗೋವಿಂದ ಸಾಹೂ, ರೋಹಿತ್ ತಿರಂಗಾ, ಹೇಮಂತ್ ಕಾನಸ್ಕರ್, ಪ್ರಸಾದ್ ವಡಕೆ, ಪ್ರವೇಶ್ ತಿವಾರಿ, ಅಂಕಿತ್ ದ್ವಿವೇದಿ, ಅಜಯ್ ಸಿಂಗ್ ಠಾಕೂರ್ ಮತ್ತು ಆಶಿಶ್ ಪರಿಡಾ ಉಪಸ್ಥಿತರಿದ್ದರು. ಮುಖ್ಯಮಂತ್ರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿರ್ಣಯವನ್ನು ಮುಂದಕ್ಕೆ ಕಳುಹಿಸುವ ಸಕಾರಾತ್ಮಕ ಭರವಸೆ ನೀಡಿದರು.
ಆನ್‌ಲೈನ್ ಜೂಜಾಟದಿಂದ ಛತ್ತೀಸ್‌ಗಢ ರಾಜ್ಯದಲ್ಲಿ ಆದ ಹಾನಿ
ಈ ಸಂದರ್ಭದಲ್ಲಿ, ಆನ್‌ಲೈನ್ ಜೂಜಾಟದಿಂದ ಛತ್ತೀಸ್‌ಗಢ ರಾಜ್ಯದಲ್ಲಿ ಉಂಟಾದ ಹಾನಿಯ ಕೆಲವು ಉದಾಹರಣೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
೧. ೨೦೨೫ರಲ್ಲಿ ೨೧ ವರ್ಷದ ವೈಭವ್ ಸಾಹೂ ಅವರು ಆನ್‌ಲೈನ್ ಸಟ್ಟಾದಲ್ಲಿ ೩೫ ಸಾವಿರ ರೂಪಾಯಿಗಳನ್ನು ಕಳೆದುಕೊಂಡು, ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡರು.
೨. ಜುಲೈ ೨೦೨೫ರಲ್ಲಿ, ಖೈರಾಗಢ ಪೊಲೀಸರು ನಾಗಪುರದಿಂದ ನಡೆಯುತ್ತಿದ್ದ ೨೦ ಕೋಟಿ ರೂಪಾಯಿಗಳ ಆನ್‌ಲೈನ್ ಜೂಜಾಟದ ದಂಧೆಯನ್ನು ಬಯಲು ಮಾಡಿದರು.
೩. ಇದುವರೆಗೂ ರಾಜ್ಯಾದ್ಯಂತ ೪೪೪ ಅಪರಾಧಗಳು ದಾಖಲಾಗಿದ್ದು, ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ, ಮತ್ತು ೨ ಕೋಟಿ ೨೦ ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಆನ್‌ಲೈನ್ ಜೂಜಾಟಕ್ಕೆ ಸಂಬಂಧಿಸಿದ ‘ಮಹಾದೇವ್ ಆಪ್’ಗೆ ಸಂಬಂಧಿಸಿದ ೭೭ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.
೪. ರಾಜ್ಯದಲ್ಲಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಸೀಸನ್‌ನಲ್ಲಿ ಪ್ರತಿದಿನ ೮ ರಿಂದ ೧೦ ಲಕ್ಷ ರೂಪಾಯಿಗಳ ವ್ಯವಹಾರಗಳು ಬಯಲಾಗಿವೆ. ಇದರಿಂದ ಹಲವು ಡಿಜಿಟಲ್ ವ್ಯಾಲೆಟ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಇದು ಕೇವಲ ಒಂದು ರಾಜ್ಯದ ಘಟನೆಯಾಗಿದ್ದು, ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಇಂತಹ ಅಪರಾಧಗಳು ನಡೆಯುತ್ತಿವೆ.
ಜೂಜಾಟದ ಆಪ್ ಕಂಪನಿಗಳ ೨೫ ಸಾವಿರ ಕೋಟಿ ರೂಪಾಯಿ ಬಾಕಿ

ದೇಶಾದ್ಯಂತ ಹಲವು ಚಲನಚಿತ್ರ ನಟರು ಈ ಆನ್‌ಲೈನ್ ಜೂಜಾಟದ ಜಾಹೀರಾತುಗಳನ್ನು ಮಾಡುತ್ತಿರುವುದರಿಂದ ಯುವಕರಲ್ಲಿ ಇದರ ಆಕರ್ಷಣೆ ಹೆಚ್ಚಾಗಿದೆ. ೨೦೨೫ರಲ್ಲಿ ೫೦ ಕೋಟಿಗೂ ಹೆಚ್ಚು ಆನ್‌ಲೈನ್ ಜೂಜಾಟ ಆಡುವ (ಬಳಕೆದಾರರು) ಭಾರತೀಯರಿದ್ದಾರೆ. ೨೦೨೪ರ ಅಂಕಿ-ಅಂಶಗಳ ಪ್ರಕಾರ, ೩೦ ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ವಹಿವಾಟು ಹೊಂದಿರುವ ಕ್ಷೇತ್ರವಿದು. ಆನ್‌ಲೈನ್ ಜೂಜಾಟ ನಡೆಸುವ ಹಲವು ಕಂಪನಿಗಳು ವಿದೇಶಿ ಮೂಲದವಾಗಿದ್ದು, ಈ ಹಣವೆಲ್ಲ ವಿದೇಶಕ್ಕೆ ಹೋಗುತ್ತಿದೆ ಎಂಬ ಆರೋಪವಿದೆ. ಅಲ್ಲದೆ, ‘ಡ್ರೀಮ್ ಇಲೆವೆನ್’ನಂತಹ ಆಪ್‌ಗಳಲ್ಲಿ ಗೆಲ್ಲುವ ಸಾಧ್ಯತೆ ೦.೦೦೦೦೧% ರಷ್ಟು ಅತ್ಯಂತ ಕಡಿಮೆ, ಅಂದರೆ ಇಲ್ಲವೇ ಇಲ್ಲ. ಇದರಿಂದ ಲಕ್ಷಾಂತರ ಯುವಕರು ವಂಚನೆಗೆ ಒಳಗಾಗುತ್ತಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ – ಗೂಡ್ಸ್ ಅಂಡ್ ಸರ್ವಿಸ್ ಟ್ಯಾಕ್ಸ್) ವಂಚನೆ ಪ್ರಕರಣದಲ್ಲಿ, ಸರ್ಕಾರವು ಆನ್‌ಲೈನ್ ಜೂಜಾಟ ನಡೆಸುವ ಕಂಪನಿಗಳಿಗೆ ೫೫ ಸಾವಿರ ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ. ಅದರಲ್ಲಿ ಕೇವಲ ‘ಡ್ರೀಮ್ ಇಲೆವೆನ್’ ೨೫ ಸಾವಿರ ಕೋಟಿ ರೂಪಾಯಿ ಸಲ್ಲಿಸುವುದು ಬಾಕಿ ಇದೆ.
ರಾಷ್ಟ್ರವ್ಯಾಪಿ ಕಠಿಣ ಕಾನೂನು ತರುವುದೇ ಪರಿಣಾಮಕಾರಿ ಪರಿಹಾರ!
ಈ ಆನ್‌ಲೈನ್ ಜೂಜಾಟದ ವಿರುದ್ಧ ದೇಶದಲ್ಲಿ ಕೇವಲ ಅಸ್ಸಾಂ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಮಾತ್ರ ಕಾನೂನುಗಳನ್ನು ರೂಪಿಸಿವೆ; ಆದರೆ ರಾಜ್ಯಗಳು ರೂಪಿಸಿದ ಕಾನೂನುಗಳು ಸಾಕಾಗುತ್ತಿಲ್ಲ ಮತ್ತು ತಮಿಳುನಾಡಿನ ಕಾನೂನಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಲಾಗಿದೆ. ಒಟ್ಟಾರೆ, ರಾಜ್ಯವಾರು ಕಾನೂನುಗಳು ಸಾಕಾಗುತ್ತಿಲ್ಲ, ಆದ್ದರಿಂದ, ರಾಷ್ಟ್ರವ್ಯಾಪಿ ಕಠಿಣ ಕಾನೂನು ಒಂದೇ ಪರಿಣಾಮಕಾರಿ ಪರಿಹಾರ ಎಂದು ಸುರಾಜ್ಯ ಅಭಿಯಾನ ಹೇಳಿದೆ. ೨ ರಾಜ್ಯಗಳು ಭಾರತೀಯ ಸಂವಿಧಾನದ ಕಲಂ ೨೫೨ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ, ಕೇಂದ್ರ ಸರ್ಕಾರಕ್ಕೆ ಇಂತಹ ಕಾನೂನು ರೂಪಿಸಲು ದಾರಿ ಸುಗಮವಾಗುತ್ತದೆ. ಆದ್ದರಿಂದ, ರಾಜ್ಯಗಳು ತಕ್ಷಣವೇ ಈ ಪ್ರಸ್ತಾವನೆಯನ್ನು ಕಳುಹಿಸಲು ಸುರಾಜ್ಯ ಅಭಿಯಾನ ಪ್ರಯತ್ನಿಸುತ್ತಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ